– ಚರ್ಚ್‌ಗೆ ಹೋಗ್ತಿದ್ದ ತಂದೆ ಮಗಳ ದಾರುಣ ಸಾವು
ಬೆಂಗಳೂರು: ನಗರದ ನುಮ್ಮನಹಳ್ಳಿ ಜಂಕ್ಷನ್ (Sumanahalli Junction) ಬಳಿ ಟ್ರಕ್, ಕಾರು ಹಾಗೂ ಆಟೋ ನಡುವೆ ನಡೆದ ಭೀಕರ ಅಪಘಾತದಲ್ಲಿ (Accident) ಮೃತಪಟ್ಟ ಯುವತಿ ಜೆನಿಫರ್ ಮದುವೆ ನಿಶ್ಚಯವಾಗಿತ್ತು ಎಂದು ತಿಳಿದು ಬಂದಿದೆ. ಮುಂದಿನ ತಿಂಗಳು ಆಕೆ ಮದುವೆ ಆಗುವವಳಿದ್ದಳು. ಆದರೆ ಯಮ ಸ್ವರೂಪಿ ಟ್ರಕ್ ಜೆನಿಫರ್ ಹಾಗೂ ಆಕೆಯ ತಂದೆ ಯೇಸು ಅವರನ್ನು ಬಲಿ ಪಡೆದಿದೆ.
ಚಿಕ್ಕಗೊಲ್ಲರಹಳ್ಳಿಯಲ್ಲಿ ವಾಸವಿದ್ದ ಯೇಸು ಅವರು ಮಗಳಿಗೆ ಮದುವೆ ನಿಶ್ಚಯವಾಗಿದ್ದ ಹಿನ್ನೆಲೆ, ಅವಳನ್ನು ಕರೆದುಕೊಂಡು ಕಂಟೋನ್ಮೆಂಟ್ ಬಳಿಯ ಚರ್ಚ್‌ಗೆ ಪ್ರಾರ್ಥನೆಗೆ ತೆರಳುತ್ತಿದ್ದರು. ಈ ವೇಳೆ ಈ ಅಪಘಾತ ಸಂಭವಿಸಿದೆ. ದುರಾದೃಷ್ಟವಶಾತ್ ಅಪಘಾತದಲ್ಲಿ ತಂದೆ, ಮಗಳು ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಟ್ರಕ್ ಡಿಕ್ಕಿಯಾದ ರಭಸಕ್ಕೆ ಎರಡು ತುಂಡಾದ ಆಟೋ – ಇಬ್ಬರು ಸಾವು, ಮತ್ತಿಬ್ಬರ ಸ್ಥಿತಿ ಗಂಭೀರ
ಈ ಬಗ್ಗೆ ಪ್ರತಿಕ್ರಿಯಿಸಿರುವ ಮೃತರ ಸಂಬಂಧಿ ಹ್ಯಾರಿ, ಜೆನಿಫರ್‌ಗೆ ಮದುವೆ ಸೆಟ್ ಆಗಿತ್ತು. ಬಿಷಪ್ ಅವರ ಬಳಿ ಕ್ಲಾಸ್‌ಗೆ ಹೋಗಬೇಕಿತ್ತು. ಅದಕ್ಕೆ ಹೋಗಿದ್ರೆ ಸರ್ಟಿಫಿಕೇಟ್ ಕೊಡ್ತಿದ್ರು. ಯೇಸು ಆಟೋ ಓಡಿಸಿ ಜೀವನ ನಡೆಸ್ತಿದ್ದ. ಅವರ ಇಬ್ಬರು ಹೆಣ್ಣು ಮಕ್ಕಳಲ್ಲಿ ದೊಡ್ಡ ಮಗಳ ಸಾವಾಗಿದೆ ಎಂದು ಕಂಬನಿ ಮಿಡಿದಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಇದನ್ನೂ ಓದಿ: ಹಾಸನದಲ್ಲಿ ಗಣೇಶ ಮೆರವಣಿಗೆ ವೇಳೆ ಘನಘೋರ ದುರಂತ – ಸಾವಿನ ಸಂಖ್ಯೆ 9ಕ್ಕೆ ಏರಿಕೆ