ಬೆಂಗಳೂರು: ಹೊಸ ಪ್ರಿಯತಮನ ಜೊತೆ ಸೇರಿಕೊಂಡು ತೃತೀಯ ಲಿಂಗಿಯೊಬ್ಬಳು ಮಾಜಿ ಪ್ರೇಮಿಯನ್ನು ಕೊಲೆ ಮಾಡಿಸಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಕೊಲೆಯಾದ ಮಾಜಿ ಪ್ರಿಯಕರನನ್ನು ಸುಂಕದಕಟ್ಟೆಯ ನಿವಾಸಿ ಮನೋಜ್ ಎಂದು ಗುರುತಿಸಲಾಗಿದೆ. ತೃತೀಯ ಲಿಂಗಿಯಾದ ರೋಝಿ ತನ್ನ ಹೊಸ ಪ್ರಿಯತಮ ಶಿವು ಜೊತೆ ಸೇರಿಕೊಂಡು ಮನೋಜ್‍ನನ್ನು ಬರ್ಬರವಾಗಿ ಹತ್ಯೆ ಮಾಡಿಸಲಾಗಿದೆ.
Advertisement
Advertisement
ಈ ಹಿಂದೆ ರೋಝಿ ಮತ್ತು ಮನೋಜ್ ಪ್ರೀತಿಸಿಸುತ್ತಿದ್ದರು. ಆದರೆ ಒಂದು ತಿಂಗಳ ಹಿಂದೆ ಊರಿಗೆ ಹೋಗಿದ್ದ ಮನೋಜ್ ವಾಪಾಸ್ ಬಂದಿರಲಿಲ್ಲ. ರೋಝಿಗೂ ಸಿಕ್ಕಿರಲಿಲ್ಲ. ಹೀಗಾಗಿ ಮನೋಜ್ ವಾಪಾಸ್ ಬರಲಿಲ್ಲ ಎಂದು ಶಿವು ಅನ್ನೋ ಹುಡುಗನನ್ನು ರೋಝಿ ಪ್ರೀತಿ ಮಾಡಲು ಶುರು ಮಾಡಿದ್ದಳು. ಒಂದು ತಿಂಗಳ ನಂತರ ಮತ್ತೆ ಮನೋಜ್ ವಾಪಾಸ್ ಬಂದಿದ್ದಾನೆ.
Advertisement
ವಾಪಾಸ್ ಬಂದ ಮನೋಜ್ ತನ್ನ ಪ್ರಿಯತಮೆ ಬೇರೆ ಹುಡುಗನ ಜೊತೆ ಪ್ರೀತಿಯಲ್ಲಿ ಬಿದ್ದ ವಿಚಾರ ತಿಳಿದು ಕೋಪಗೊಂಡಿದ್ದಾನೆ. ಈ ನಡುವೆ ರೋಝಿ ಹೊಸ ಪ್ರಿಯತಮನ ಹೆಸರನ್ನು ಕೈ ಮೇಲೆ ಟ್ಯಾಟು ಹಾಕಿಸಿಕೊಂಡಿದ್ದನ್ನು ನೋಡಿ ಮನೋಜ್ ಅವನನ್ನು ಬಿಟ್ಟು ಬಿಡು ಎಂದು ಅವಾಜ್ ಹಾಕಿದ್ದಾನೆ.
Advertisement
ಈ ವಿಚಾರದಿಂದ ಕೋಪಗೊಂಡ ರೋಝಿ ಮಾತನಾಡಬೇಕು ಬಾ ಎಂದು ಮನೋಜ್‍ನನ್ನು ಕರೆಸಿಕೊಂಡಿದ್ದಾಳೆ. ಈ ವೇಳೆ ಹೊಸ ಪ್ರಿಯಕರನ ಜೊತೆ ಸೇರಿ ಹತ್ಯೆಗೆ ಸ್ಕೆಚ್ ಹಾಕಿದ್ದಾಳೆ. ಪ್ರೇಯಸಿ ಕರೆದಳು ಎಂದು ಹೋದ ಮನೋಜ್‍ನಿಗೆ ಮದ್ಯಪಾನ ಮಾಡಿಸಿ ನಡುರಸ್ತೆಯಲ್ಲಿ ಶಿವು ಕೈಯಲ್ಲಿ ಕೊಚ್ಚಿ ಕೊಲೆ ಮಾಡಿಸಿದ್ದಾಳೆ.
ಈ ಸಂಬಂಧ ಕಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.