ಬೆಂಗಳೂರು: ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆ(Bengaluru Traffic Problem) ನಿಧನವಾಗಿ ಕಡಿಮೆಯಾಗುತ್ತಿದೆ.
ಬೆಳಗ್ಗೆ ಮತ್ತು ಸಂಜೆ ವಾಹನದಟ್ಟಣೆ ಇದ್ದರೂ ಹಲವು ಕಡೆ ವಾಹನ ಸವಾರರು ವೀಕೆಂಡ್ ಸಂಚಾರದಷ್ಟೇ ಸಲೀಸಾಗಿ ಸಂಚಾರ ಮಾಡುತ್ತಿದ್ದಾರೆ. ಟ್ರಾಫಿಕ್ ಕಿರಿಕಿರಿಗೆ ಸ್ಪೆಷಲ್ ಕಮೀಷನರ್ ಎಂ.ಎ ಸಲೀಂ ಮತ್ತು ಜಂಟೀ ಆಯುಕ್ತ ಅನುಚೇತ್ ಕಾರ್ಯಕ್ಷಮತೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Advertisement
Advertisement
ಏನು ಬದಲಾವಣೆಯಾಗಿದೆ?
ಒಂದೇ ರಸ್ತೆಯಲ್ಲಿ 2-3 ಸಿಗ್ನಲ್‍ಗಳಿದ್ದರೆ ಒಂದೇ ಬಾರಿಗೆ ಆನ್-ಆಫ್ ಮಾಡಲಾಗುತ್ತಿದೆ. ಇದರಿಂದ ಪ್ರತೀ ಸಿಗ್ನಲ್‍ನಲ್ಲಿ ಸವಾರರು ಕಾಯುವುದು ತಪ್ಪುತ್ತಿದೆ.
Advertisement
ಬೆಳಗ್ಗೆ 7:30ಕ್ಕೆ ಐಪಿಎಸ್ ಅಧಿಕಾರಿಗಳು ಸೇರಿದಂತೆ ಟ್ರಾಫಿಕ್ ಪೊಲೀಸರು ರಸ್ತೆ ಮೇಲಿರಬೇಕು. ಅರ್ಧ ಗಂಟೆ ಮೊದಲೇ ಎಲ್ಲಾ ಸಿಬ್ಬಂದಿ ಪ್ರಮುಖ ಜಂಕ್ಷನ್‍ಗಳಲ್ಲಿರಬೇಕು ಎಂದು ಸೂಚನೆ ನೀಡಲಾಗಿದೆ. ಇದನ್ನೂ ಓದಿ: ವಿವಾಹಪೂರ್ವ ಸೆಕ್ಸ್ ಮಾಡಿದ್ರೆ 1 ವರ್ಷ ಜೈಲು – ಹೊಸ ಕಾನೂನು ಜಾರಿಗೆ ಇಂಡೋನೇಷ್ಯಾ ಸಜ್ಜು
Advertisement
ಸಣ್ಣ-ಪುಟ್ಟ ತಿರುವುಗಳಲ್ಲೂ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು ಫೈನ್ ವಸೂಲಿ ಸಿಬ್ಬಂದಿಯಲ್ಲಿ ಕಡಿತ ಮಾಡಿ ಟ್ರಾಫಿಕ್ ನಿಯಂತ್ರಣಕ್ಕೆ ನಿಯೋಜನೆ ಮಾಡಲಾಗಿದೆ.
ಜಾಸ್ತಿ ವಾಹನದಟ್ಟಣೆ ಇರುವ ಸಮಯದಲ್ಲಿ ಗೂಡ್ಸ್ ಗಾಡಿಗಳಿಗೆ ನಗರ ಪ್ರವೇಶ ನಿರ್ಬಂಧ ಹೇರಲಾಗಿದೆ. ಮೆಟ್ರೋ ಕಾಮಗಾರಿ ಇದ್ದರೂ ರಿಂಗ್ ರಸ್ತೆಯಲ್ಲಿ ಸರ್ವಿಸ್ ರಸ್ತೆಯನ್ನು ಏಕಮುಖ ಸಂಚಾರಕ್ಕೆ ಬಳಕೆ ಮಾಡಲಾಗಿದ್ದು, ಪಾದಾಚಾರಿಗಳಿಗೆ ಅಂಡರ್ ಪಾಸ್ ಬಳಸುವಂತೆ ಸಿಬ್ಬಂದಿ ಮನವೊಲಿಕೆ ಮಾಡುತ್ತಿದ್ದಾರೆ.