ಬೆಂಗಳೂರು: ಟ್ರಾಫಿಕ್ ಪೊಲೀಸ್ (Traffic Police) ಒಬ್ಬರು ಹಾಫ್ ಹೆಲ್ಮೆಟ್ ಧರಿಸಿದ ಇನ್ನೊಬ್ಬ ಪೊಲೀಸ್ಗೆ ದಂಡ ವಿಧಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಫೈನ್ ಹಾಕಿದ ಫೋಟೋವನ್ನು ಆರ್ ಟಿ ನಗರ ಟ್ರಾಫಿಕ್ ಬಿಟಿಪಿ ಟ್ವಿಟ್ಟರ್ ಅಕೌಂಟಿನಿಂದ ಟ್ವೀಟ್ ಮಾಡಲಾಗಿದೆ. ಫೋಟೋದಲ್ಲಿ ಹಾಫ್ ಹೆಲ್ಮೆಟ್ (Half Helmet) ಧರಿಸಿದ ಪೊಲೀಸ್ಗೆ ಟ್ರಾಫಿಕ್ ಪೊಲೀಸ್ ಫೈನ್ ಹಾಕುತ್ತಿರುವುದನ್ನು ಕಾಣಬಹುದಾಗಿದೆ.
Advertisement
Good evening sir
half helmet case booked against police
Tq pic.twitter.com/Xsx5UA40OY
— R T NAGAR TRAFFIC BTP (@rtnagartraffic) October 17, 2022
Advertisement
ನಗರದ ರಸ್ತೆಗಳಲ್ಲಿ ಗೇರ್ ಲೆಸ್ ಸ್ಕೂಟರ್ ಓಡಿಸುವಾಗ ಹಾಫ್ ಹೆಲ್ಮೆಟ್ ನಿಷೇಧಿಸಲಾಗಿದೆ. ಅದಾಗ್ಯೂ ಪೊಲೀಸ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಈ ದಂಡ ವಿಧಿಸಲಾಗಿದೆ. ಇದನ್ನೂ ಓದಿ: ಯುವತಿಯರಿಬ್ಬರ ನಡುವೆ ಪ್ರೇಮಾಂಕುರ- ಬೇರೆಯವಳೊಂದಿಗೆ ಮಾತಾಡಿದ್ದಕ್ಕೆ ರೇಡಿಯಂ ಕಟರ್ನಿಂದ ಹಲ್ಲೆಗೈದ್ಳು!
Advertisement
ಮತ್ತೆ ಅವರ ವಾಹನದ ಮೇಲೆ ೭ ಕೇಸುಗಳಿವೆ ಹೇಗೆ ಬಿಟ್ಟು ಕಳುಹಿಸಿದ್ದೀರಾ ಸರ್ ? ಸಾಮಾನ್ಯ ಜನರಿಗೆ ಒಂದು ನ್ಯಾಯ ಸರ್ಕಾರಿ ಹುದ್ದೆಯಲ್ಲಿರುವವರಿಗೆ ಒಂದು ನ್ಯಾಯನಾ!? pic.twitter.com/D7riwu6OEQ
— Prabhu (@MynameisPrabhuR) October 18, 2022
Advertisement
ಫೋಟೋ ಸಮೇತ ಟ್ವೀಟ್ ಮಾಡುತ್ತಿದ್ದಂತೆಯೇ ಅನೇಕರು ಇದಕ್ಕೆ ರೀ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಓರ್ವ ಟ್ವಿಟ್ಟರ್ ಬಳಕೆದಾರ, ಫೈನ್ (Fine) ಹಾಕಿದ್ರೂ ಅವರು ಅದನ್ನು ತುಂಬಾ ಸಂತೋಷದಿಂದ ಸ್ವೀಕರಿಸಿದಂತಿದೆ. ಒಂದು ಉತ್ತಮ ಫೋಟೋಗೆ ಅವಕಾಶ ಸಿಕ್ಕಿದೆ ಅನ್ನೋ ಖುಷಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.
@yelahankatrfps @BangaloreMirror Here police have caught some vehicle and now forcefully they are breaking nrules to take him out of spot. No helmet and triple riding. With such police men we cannot set good example. @CPBlr Request your support to guide them. No fines for them? pic.twitter.com/ynlODUZk3N
— Tejesh T (@TejeshT4) October 18, 2022
ಇನ್ನೊಬ್ಬರು, ಇಂತಹ ಕೆಲಸಗಳನ್ನು ಇನ್ನೂ ಹೆಚ್ಚು ಮಾಡಬೇಕಿದೆ. ಅನೇಕ ಪೊಲೀಸರು ಹೆಲ್ಮೆಟ್ ಧರಿಸದೆ ಹಿಂಬದಿ ಸವಾರರನ್ನು ಕೂರಿಸಿಕೊಂಡು ಹೋಗುವುದನ್ನು ನಾನು ನೋಡಿದ್ದೇನೆ. ಅಲ್ಲದೆ ಇಂಥವರನ್ನು ಕಂಡರೂ ಪೊಲೀಸರು ಅವರನ್ನು ಹೋಗಲು ಬಿಡುತ್ತಾರೆ. ಅವರಿಗಿಲ್ಲದ ಫೈನ್ ಸಾಮಾನ್ಯ ಜನರಿಗೇಕೆ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ನಿಯಮಗಳು ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ದಯಮಾಡಿ ಸಂಚಾರ ನಿಯಮಗಳನ್ನು ಅನುಸರಿಸಿ ಅಂದ್ರೆ ಮಗದೊಬ್ಬರು ಪ್ರಚಾರದ ಸಾಹಸ ಎಂದು ಕಾಮೆಂಟ್ ಮಾಡಿದ್ದಾರೆ.