ಬೆಂಗಳೂರು: ಇತ್ತೀಚೆಗೆ ಸಾರ್ವಜನಿಕರಿಗೆ ಟ್ರಾಫಿಕ್ ಪೊಲೀಸರು ಕಿರಿಕಿರಿ ಉಂಟು ಮಾಡಿದ್ದನ್ನು ನೋಡಿದ್ದೀರಿ. ಟ್ರಾಫಿಕ್ ಪೊಲೀಸರು ಅವಾಚ್ಯ ಶಬ್ದಗಳಿಂದ ವಾಹನ ಸವಾರರನ್ನ ಬೈದಿದ್ದು ಹಾಗೂ ಅಲ್ಲದೆ ಗೂಂಡಾವರ್ತನೆ ತೋರಿದ್ದನ್ನೂ ಗಮನಿಸಿದ್ದೀರಿ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದ್ದವು. ಆದರೆ ಇದೀಗ ಟ್ರಾಫಿಕ್ ಪೊಲೀಸರೊಬ್ಬರ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ.
ಹೌದು. ಟ್ರಾಫಿಕ್ ಪೊಲೀಸರ ಕರ್ತವ್ಯ ಪ್ರಜ್ಞೆಗೆ ಈ ವಿಡಿಯೋ ಸಾಕ್ಷಿಯಾಗಿದೆ. ಜನರ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಅವರು ಈ ಕೆಲಸ ಮಾಡಿದ್ದು, ಇದೀಗ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೆಲಸವೇನು?
ಸಿಲಿಕಾನ್ ಸಿಟಿಯಲ್ಲಿ ಮಳೆ ಬಂದರೆ ಸಾಕು ರಸ್ತೆ ತುಂಬಾ ನೀರು ನಿಂತು ವಾಹನ ಸವಾರರು ನರಕ ಅನುಭವಿಸುತ್ತಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗಿದೆ. ಇದರಿಂದ ಸಿಲಿಕಾನ್ ಸಿಟಿಯ ರಸ್ತೆಗಳು ಕೆರೆಗಳಂತಾಗಿದೆ. ಹೀಗೆ ಕೆರೆಯಂತಾದ ರಸ್ತೆಯಲ್ಲಿ ನಿಂತ ನೀರನ್ನ ಗುದ್ದಲಿ ಹಿಡಿದು ನೀರನ್ನ ರಸ್ತೆ ಪಕ್ಕದಲ್ಲಿದ್ದ ಮೋರಿಗೆ ಹೋಗುವಂತೆ ಟ್ರಾಫಿಕ್ ಪೊಲೀಸ್ ಒಬ್ಬರು ಮಾಡಿದ್ದಾರೆ.
ಇವರು ಈ ರೀತಿ ಗುದ್ದಲಿ ಹಿಡಿದು ಬ್ಲಾಕ್ ಆಗಿದ್ದ ನೀರನ್ನ ಸರಾಗವಾಗಿ ಮೋರಿಗೆ ಹೋಗುವಂತೆ ಮಾಡುತ್ತಿದ್ದ ಕಾರ್ಯವನ್ನ ಯಾರೋ ಮೊಬೈಲ್ ನಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಟ್ರಾಫಿಕ್ ಪೊಲೀಸ್ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂತವರು ನಿಜವಾದ ಟ್ರಾಫಿಕ್ ಪೊಲೀಸ್ ಇದು ನಮ್ಮ ಹೆಮ್ಮೆ ಎಂದು ಶ್ಲಾಘಿಸಿದ್ದಾರೆ.
https://twitter.com/AkshayVandure1/status/1177182634687942656