ಬೆಂಗಳೂರು: ನನಗೆ ಜೀವ ಭಯ ಇದೆ. ನಾನು ಸಾಯುವ ನಿರ್ಧಾರ ಮಾಡಿದ್ದೇನೆ. ನನಗೆ ರಕ್ಷಣೆ ಕೊಡಿ. ತಪ್ಪು ಯಾರದು ಇದೆಯೋ ಅವರಿಗೆ ಶಿಕ್ಷೆ ಕೊಡಿ ಎಂದು ಟ್ರಾಫಿಕ್ ಪೊಲೀಸ್ ನಿಂದ ನಿಂದನೆಗೊಳಗಾಗಿದ್ದ ಟಾಟಾಏಸ್ ಚಾಲಕ ಸುನೀಲ್ ಪಬ್ಲಿಕ್ ಟಿವಿ ಜೊತೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ನಾನು ಮಾರ್ಕೆಟ್ ಕಡೆಯಿಂದ ಜೆಸಿ ರಸ್ತೆ ಕಡೆಗೆ ಹೋಗುತ್ತಿದ್ದೆ. ನಾನು ಯಾವುದೇ ರಾಂಗ್ ರೂಟಲ್ಲಿ ಹೋಗುತ್ತಿರಲಿಲ್ಲ. ಒನ್ ವೇ ನಲ್ಲಿ ಹೋಗು ಎಂದು ಹೇಳಿದ್ದೇ ಟ್ರಾಫಿಕ್ ಪೊಲೀಸ್. ಬೇರೋಬ್ಬ ಪೊಲೀಸ್ ಬಂದು ಏಕಾಏಕಿ ತಲೆ ಮೇಲೆ ಹೆಲ್ಮೆಟ್ ನಲ್ಲಿ ಹೊಡೆದರು. ನನ್ನದು ತಪ್ಪಿಲ್ಲ ಅಂದರೂ ಕೇಳದೇ ಕೆಟ್ಟಕೆಟ್ಟದಾಗಿ ಬೈದರು ಎಂದು ನಡೆದ ಘಟನೆಯನ್ನು ವಿವರಿಸಿದ್ದಾರೆ.
Advertisement
Advertisement
ಇಷ್ಟು ಮಾತ್ರವಲ್ಲದೇ ಅಪರಿಚಿತರು ನಮ್ಮ ಮನೆಗೆ ಹೋಗಿ ತಾಯಿಗೂ ಧಮ್ಕಿ ಹಾಕಿದ್ದಾರೆ. ಚಾಲಕರಿಗೆ ಬೆಲೆನೇ ಇಲ್ವ. ನನಗೆ ಇನ್ನೂ ಜೀವ ಭಯ ಇದೆ ರಕ್ಷಣೆ ಬೇಕು. ನಾನು ಕಂಪ್ಲೆಂಟ್ ಮಾಡಿದ್ದೀನಿ. ನನಗೆ ನ್ಯಾಯ ಕೊಡಿಸಿ ಎಂದು ಸುನೀಲ್ ತಿಳಿಸಿದ್ದಾರೆ. ಇದನ್ನೂ ಓದಿ: ಮರ್ಯಾದೆ ಹೋಯ್ತು, ನಾನ್ ಮನೆಗೆ ಬರಲ್ಲ – ಹಲ್ಲೆಗೊಳಗಾಗಿದ್ದ ಸುನೀಲ್ ಫೋನ್ ಸ್ವಿಚ್ ಆಫ್
Advertisement
ಏನಿದು ಪ್ರಕರಣ..?
ಚಾಲಕ ಸುನೀಲ್ ಅವರು ಶುಕ್ರವಾರ ಬಿಬಿಎಂಪಿ ಕಡೆಯಿಂದ ಟೌನ್ ಹಾಲ್ ಬಳಿ ಯೂಟರ್ನ್ ತೆಗೆದುಕೊಂಡರು ಎಂಬ ಕಾರಣಕ್ಕೆ ಟ್ರಾಫಿಕ್ ಪೊಲೀಸರೊಬ್ಬರು ಥಳಿಸಿದ್ದರು. ಅಲ್ಲದೆ ಅವಾಚ್ಯ ಶಬ್ದಳಿಂದ ನಿಂದಿಸಿದ್ದರು. ಟ್ರಾಫಿಕ್ ಪೊಲೀಸ್ ಹಲ್ಲೆ ಹಾಗೂ ನಿಂದಿಸಿರುವುದನ್ನು ಸುನೀಲ್ ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೀಡಾಗಿತ್ತು. ಟ್ರಾಫಿಕ್ ಪೊಲೀಸಪ್ಪನ ದೌರ್ಜನ್ಯವನ್ನು ಕಂಡ ಜಾಲತಾಣಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
Advertisement
ಯೂಟರ್ನ್ ತೆಗೆದುಕೊಂಡ ಎಂಬ ಕಾರಣಕ್ಕೆ ವಾಹನ ಏರಿ ಚಾಲಕ ಸುನೀಲ್ ಪಕ್ಕ ಕುಳಿತ ಪೇದೆ ಮೊದಲಿಗೆ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸುವಂತೆ ಹೇಳಿದ್ದಾರೆ. ಈ ವೇಳೆ ಚಾಲಕ ಇಲ್ಲಿ ವಾಹನಗಳಿವೆ ಮುಂದೆ ನಿಲ್ಲಿಸುತ್ತೇನೆ ಎಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪೊಲೀಸ್, ತಾನೇ ವಾಹನದ ಸ್ಟೇರಿಂಗ್ ವ್ಹೀಲ್ ಹಿಡಿದು ಪಕ್ಕಕ್ಕೆ ಎಳೆಯು ಪ್ರಯತ್ನ ಮಾಡುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ. ವೀಡಿಯೋ ವೈರಲ್ ಆದ ಬೆನ್ನಲ್ಲೇ ಸುನೀಲ್ ವಿರುದ್ಧವೇ ಟ್ರಾಫಿಕ್ ಪೊಲೀಸ್ ಎಫ್‍ಐಆರ್ ದಾಖಲು ಮಾಡಿದ್ದರು. ಆ ಬಳಿಕ ಜೀವ ಭಯದಿಂದ ಪರಾರಿಯಾಗಿದ್ದ ಚಾಲಕ ಸುನೀಲ್ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ 5 ದಿನಗಳ ಬಳಿಕ ಪ್ರತ್ಯಕ್ಷವಾಗಿದ್ದು, ಟ್ರಾಫಿಕ್ ಪೊಲೀಸರ ದೌರ್ಜನ್ಯದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಬಿಚ್ಚಿಟ್ಟಿದ್ದಾರೆ.