ಬೆಂಗಳೂರು: ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಹೆಸರಲ್ಲಿ ಚಾಲಕರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಸಂಚಾರ ಪೊಲೀನರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಅಮಾನತು ಮಾಡಲಾಗಿದೆ.
ಅಶೋಕ್ ನಗರ ಸಂಚಾರ ಪೊಲೀಸ್ ಠಾಣೆ ಎಎಸ್‍ಐ ಮುನಿಯಪ್ಪ, ಪೇದೆಗಳಾದ ಗಂಗರಾಜು, ನಾಗರಾಜ್ ಅಮಾನತು ಮಾಡಿ ಆದೇಶ ಹೋರಡಿಸಲಾಗಿದೆ. ಸಂಚಾರ ಪೊಲೀಸರು ಖಾಸಗಿ ಆಲ್ಕೋಹಾಲ್ ಮೀಟರ್ ಬಳಿಸಿ ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೇ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಮಾಡುತ್ತಿದ್ದರು.
Advertisement
Advertisement
ಸಂಚಾರ ಪೊಲೀಸರ ಹಣ ವಸೂಲಿ ದಂಧೆಯ ಬಗ್ಗೆ ಸಾರ್ವಜನಕರಿಂದ ಹಲವು ದೂರುಗಳು ಬಂದಿದ್ದವು. ದೂರದಾರರ ಸಹಾಯದಿಂದ ಶನಿವಾರ ಹಿರಿಯ ಪೊಲೀಸ್ ಅಧಿಕಾರಿಗಳು ಅವರನ್ನು ಬಂಧಿಸಲು ಪ್ಲ್ಯಾನ್ ರೂಪಿಸಿದ್ದರು. ಎಎಸ್‍ಐ ಮುನಿಯಪ್ಪ ನೇತೃತ್ವದಲ್ಲಿ ಪೇದೆಗಳು ಶ್ರೀನಿವಾಗಿಲು ಜಂಕ್ಷನ್ ಬಳಿ ಚಾಲಕರನ್ನು ತಡೆದು ನ್ಯಾಯಾಲಕ್ಕೆ ಹೋದರೆ 15 ಸಾವಿರ ರೂ. ಕಟ್ಟಬೇಕಾಗುತ್ತದೆ. ಇಲ್ಲಿ ಹಣ ಕಟ್ಟಿ ಅಂತ ಹಣ ಕಟ್ಟಿಸಿಕೊಳ್ಳುತ್ತಿದ್ದರು. ಈ ವೇಳೆ ಬಂದ ಪೊಲೀಸ್ ಹಿರಿಯ ಅಧಿಕಾರಿಗಳ ತಂಡ ಹಿಡಿದು ದೂರು ದಾಖಲಿಸಿದ್ದಾರೆ.
Advertisement
ಚಾಲಕರು ಹಾಗೂ ಸವಾರರಿಂದ ಹಣ ವಸೂಲಿ ಮಾಡುತ್ತಿದ್ದ ಮೂವರು ಸಂಚಾರ ಪೊಲೀಸರ ಮೇಲೆ ಕ್ರಿಮಿನಲ್ ಅಡಿ ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ಈ ಮೂವರು ಕಳೆದ ಒಂದು ವರ್ಷದಿಂದ ಇದೇ ರೀತಿ ಚಾಲಕರನ್ನು ಬೆದರಿಸಿ ಹಣ ವಸೂಲಿ ದಂಧೆ ನಡೆಸುತ್ತಿದ್ದದ್ದು ಬೆಳಕಿಗೆ ಬಂದಿದೆ.