Connect with us

ಬೆಂಗಳೂರು: ಹೆಲ್ಮೆಟ್ ಇಲ್ಲದೆ ಬರೋರಿಗೆ ಉಚಿತ ಹೆಲ್ಮೆಟ್ ವಿತರಿಸಿದ ಟ್ರಾಫಿಕ್ ಪೊಲೀಸರು

ಬೆಂಗಳೂರು: ಹೆಲ್ಮೆಟ್ ಇಲ್ಲದೆ ಬರೋರಿಗೆ ಉಚಿತ ಹೆಲ್ಮೆಟ್ ವಿತರಿಸಿದ ಟ್ರಾಫಿಕ್ ಪೊಲೀಸರು

ಬೆಂಗಳೂರು: ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಹೆಲ್ಮೆಟ್ ಇಲ್ಲದೆ ಬರುವವರಿಗೆ ಟ್ರಾಫಿಕ್ ಪೊಲೀಸರು ಇಂದು ಉಚಿತ ಹೆಲ್ಮೆಟ್ ವಿತರಣೆ ಮಾಡಿದ್ದಾರೆ.

ಹೌದು. ಇಂದು ಕನ್ನಿಂಗ್ ಹ್ಯಾಮ್ ರೋಡ್‍ನಲ್ಲಿ ಓಡಾಡೋ ದ್ವಿಚಕ್ರ ವಾಹನ ಸವಾರರಿಗೆ ಒಂದು ಆಶ್ಚರ್ಯ ಕಾದಿತ್ತು. ಸಾಮಾನ್ಯವಾಗಿ ಹೆಲ್ಮೆಟ್ ಧರಿಸದೇ ಹೋಗುತ್ತಿದ್ದ ವಾಹನ ಸವಾರರನ್ನು ಹಿಡಿದು ದಂಡ ಹಾಕುತ್ತಿದ್ದ ಪೊಲೀಸರು ಇಂದು ದಂಡವಿಲ್ಲದೆ ಹೊಸ ಹೆಲ್ಮೆಟ್ ಕೊಟ್ಟು ಕಳಿಸುತ್ತಿದ್ರು.

ಇಷ್ಟು ಒಳ್ಳೆ ಬುದ್ಧಿ ಪೊಲೀಸರಿಗೆ ಹೇಗಪ್ಪ ಬಂತು ಅಂತಾ ನೀವು ಯೋಚನೆ ಮಾಡಿದ್ರೆ ಅದ್ಕೆ ಕಾರಣವೂ ಇದೆ. ಸೋಮವಾರ ವಿಶ್ವ ಹೆಡ್ ಇಂಜ್ಯುರಿ ಡೇ. ಇದರ ಅಂಗವಾಗಿ ಬೆಂಗಳೂರಿನ ಟ್ರಾಫಿಕ್ ಪೊಲೀಸ್ ಸಹಯೋಗದೊಂದಿಗೆ ಫೋರ್ಟಿಸ್ ಆಸ್ಪತ್ರೆ ಬೆಂಗಳೂರಿನ ನಾನಾ ಭಾಗಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೋಂಡಿತ್ತು.

ಹೀಗಾಗಿ ರಸ್ತೆಯಲ್ಲಿ ಹೆಲ್ಮೆಟ್ ಇಲ್ಲದೇ ಹೋಗುತ್ತಿದ್ದ ವಾಹನ ಸವಾರರನ್ನು ಹಿಡಿದು ಪೋಲೀಸರು ಅವರಿಗೆ ಬುದ್ಧಿವಾದ ಹೇಳಿ, ಇಂದು ಮಾತ್ರ ನಿಮಗೆ ಹೆಲ್ಮೆಟ್ ಕೋಡುತ್ತಿದ್ದೇವೆ. ನಾಳೆ ಏನಾದ್ರೂ ಹೆಲ್ಮೆಟ್ ಇಲ್ಲದೇ ಬಂದ್ರೆ ಡಬಲ್ ದಂಡ ಹಾಕುತ್ತೇವೆ ಅಂತ ಎಚ್ಚರಿಸಿ ಕಳಿಸಿದ್ರು. ಕೆಲವರು ತಪ್ಪಾಯ್ತು ಅಂದ್ರೆ ಇನ್ನು ಕೆಲವರು ನಾಳೆಯಿಂದ ಮಿಸ್ ಮಾಡದೇ ಹೆಲ್ಮೆಟ್ ಹಾಕಿಕೊಳ್ಳುತ್ತೇವೆ ಅಂತ ಹೇಳಿದ್ರು.

 

Advertisement
Advertisement