ಬೆಂಗಳೂರು: ಬಾಲಿವುಡ್ ಸೆಲಬ್ರಿಟಿಗಳ ಕಿಕಿ ಚಾಲೆಂಜ್ ಕಾಟಕ್ಕೆ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಭಯ ಶುರುವಾಗಿದೆ.
ಮುಂಬೈ ಸೇರಿದಂತೆ ಕೆಲ ಸಿಟಿಗಳಲ್ಲಿ ಈ ಕಿಕಿ ಚಾಲೆಂಜ್ ವೈರಲ್ ಆಗಿದೆ. ಈ ಚಾಲೆಂಜ್‍ಗೆ ಮುಂಬೈ ಪೊಲೀಸರು ಬೇಸತ್ತು ಹೋಗಿದ್ದು, ಈಗ ಈ ಚಾಲೆಂಜ್ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ತಲೆ ನೋವಾಗಿದೆ.
Advertisement
ಏನಿದು ಕಿಕಿ ಚಾಲೆಂಜ್ ?
ಟ್ರಾಫಿಕ್ ಮಧ್ಯೆ ಚಲಿಸುವ ಕಾರಿನಿಂದ ಜಿಗಿದು ಹಾಲಿವುಡ್ ಗಾಯಕ ಡ್ರೇಕ್ ನ “ಇನ್ ಮೈ ಫೀಲಿಂಗ್ಸ್ ” ಹಾಡು ಹೇಳಿಕೊಂಡು ಕಾರಿನ ವೇಗಕ್ಕೆ ರಸ್ತೆಯಲ್ಲಿ ಡ್ಯಾನ್ಸ್ ಮಾಡಬೇಕು. ಮತ್ತೆ ಕಾರಿನೊಳಗೆ ಜಿಗಿದು ಕುಳಿತುಕೊಳ್ಳಬೇಕು. ಈ ಅಪಾಯಕಾರಿ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.
Advertisement
ಬಾಲಿವುಡ್‍ನ ಸೆಲೆಬ್ರಿಟಿಯರು ಈ ಚಾಲೆಂಜ್ ಸ್ವೀಕರಿಸಿ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಇತ್ತೀಚಿಗೆ ನಟಿ ಆದಾ ಶರ್ಮಾ ಈ ಚಾಲೆಂಜ್ ಸ್ವೀಕರಿಸಿ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದರಿಂದ ಯುವಕ ಯುವತಿಯರಲ್ಲಿ ಹೆಚ್ಚಾಗಿ ಕಿಕಿ ಚಾಲೆಂಜ್ ಹುಚ್ಚು ಶುರುವಾಗಿದೆ.
Advertisement
ಐಟಿ ಸಿಟಿ ಬೆಂಗಳೂರಿಗೆ ಕಿಕಿ ಚಾಲೆಂಜ್ ಜ್ವರ ಬರಬಹುದು ಅಂತಾ ಟ್ರಾಫಿಕ್ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಕಿಕಿ ಚಾಲೆಂಜ್ ಅಪಾಯಕಾರಿ ಈ ರೀತಿ ಮಾಡಿದರೆ ಬೆಂಗಳೂರು ಟ್ರಾಫಿಕ್ ಪೊಲೀಸರು ಸುಮ್ಮನಿರಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಕಿಕಿ ಚಾಲೆಂಜ್ ನಿಮ್ಮ ಬಾಡಿಗೂ ಗಾಡಿಗೂ ಅಪಾಯಕಾರಿ ಅಂತಾ ಜಾಗೃತಿ ನಡೆಸುತ್ತಿದ್ದಾರೆ. ಜೊತೆಗೆ ಕಿಕಿ ಚಾಲೆಂಜ್‍ನಿಂದ ತಲೆಬುರುಡೆ ಒಡೆದುಕೊಂಡ ಯುವಕನ ವಿಡಿಯೋ ಕೂಡ ಆಡುಗೋಡಿ ಟ್ರಾಫಿಕ್ ಪೊಲೀಸರು ಅಪ್ಲೋಡ್ ಮಾಡಿದ್ದಾರೆ.
Advertisement
We strongly opose the #kikichallenge as it puts the life of the performer and others on the road at risk, including vehicle damage.@blrcitytraffic @AddlCPTraffic @DCPTrEastBCP @AcpSe @BlrCityPolice @HMLokesh https://t.co/1RWqOqUbxh
— ADUGODI TRAFFIC BTP (@adugoditrfps) July 29, 2018
We not only oppose but also warn all who are thinking of attempting that they will be subject to legal action https://t.co/QGo8yb4jIb
— Kala Krishnaswamy, IPS DCP Traffic East (@DCPTrEastBCP) July 30, 2018