ಬೆಂಗಳೂರು: ವಿಧಾನ ಪರಿಷತ್ ಚುನಾವಣೆ (Legislative Council Polls) ವಿಚಾರವಾಗಿ, ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಭೇಟಿ ಮಾಡಿ ಬೆಂಗಳೂರಿನ ಒಬ್ಬರಿಗೆ ಅವಕಾಶ ಮಾಡಿಕೊಡುವಂತೆ ಕೇಳಿದ್ದೇನೆ ಎಂದು ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.
ಬೆಂಗಳೂರಿನ (Bengaluru) ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಬೆ ಕರ್ನಾಟಕ, ಹೈದರಾಬಾದ್ ಕರ್ನಾಟಕ ಎಲ್ಲರಿಗೂ ಅವಕಾಶ ಕೊಡಬೇಕು. ದೆಹಲಿಗೆ ಹೋಗಿ ಅಲ್ಲಿ ನಿರ್ಧಾರ ಅವಕಾಶ ನೀಡುವ ಬಗ್ಗೆ ಆಗುತ್ತದೆ. ಈ ಬಗ್ಗೆ ಸಿಎಂ, ಡಿಸಿಎಂ ಫೈನಲ್ ಮಾಡ್ತಾರೆ. ಎಲ್ಲಾ ಸಮುದಾಯಗಳನ್ನೂ ಗಮನದಲ್ಲಿ ಇಟ್ಟಿಕೊಂಡು ಅವಕಾಶ ಕೊಡಬೇಕು. ಪರಿಷತ್‍ಗೆ ಯಾರ ಹೆಸರನ್ನು ಶಿಫಾರಸು ಮಾಡೋದು, ಯಾರೂ ಅಂತ ಹೇಳಲು ಆಗುವುದಿಲ್ಲ. ಹಾಗೆ ಹೇಳಿದರೆ ಬೇರೆಯವರಿಗೆ ಬೇಸರ ಆಗುತ್ತದೆ. ಆಕಾಂಕ್ಷಿಗಳು ಹೆಚ್ಚು ಇದ್ದೇ ಇರ್ತಾರೆ. ಬಿಜೆಪಿಯಲ್ಲಿ ಅಷ್ಟಿದ್ದಾರೆ ಅಂದ್ರೆ, ನಮಗೆ 7 ಸೀಟ್, ನಮ್ಮಲ್ಲಿ ಆಕಾಂಕ್ಷಿಗಳು ಇನ್ನೂ ಜಾಸ್ತಿ ಇದ್ದಾರೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಹಿಂದಿನ ಮೈತ್ರಿ ಸರ್ಕಾರದಲ್ಲಿ ಹೆಚ್‍ಡಿಕೆ ಬೆನ್ನಿಗೆ ಕಾಂಗ್ರೆಸ್ ಚೂರಿ: ಆರ್.ಅಶೋಕ್
ಸರ್ಕಾರಿ ಬಸ್‍ಗಳ ವಿಚಾರವಾಗಿ ಬಿಜೆಪಿ (BJP) ಟೀಕೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾಲ್ಕು ವರ್ಷ ಅವರೇ ಇದ್ದಿದ್ದು, ಒಂದು ಹೊಸ ಬಸ್ಸನ್ನೂ ಅವರು ಖರೀದಿಸಿಲ್ಲ. 14 ಸಾವಿರ ಜನ ನಿವೃತ್ತಿ ಹೊಂದಿದ್ದರು. 5900 ಕೋಟಿ ರೂ. ಸಾರಿಗೆ ನಿಗಮಕ್ಕೆ ಸಾಲ ಇಟ್ಟು ಹೋಗಿದ್ದಾರೆ. ನಮ್ಮ ಸರ್ಕಾರ ಬಂದ ಮೇಲೆ 5 ಸಾವಿರಕ್ಕೂ ಅಧಿಕ ಬಸ್ ಬಂದಿದೆ. ಬಿಜೆಪಿಯ ಸಾಲವನ್ನು ನಾವು ತೀರಿಸಬೇಕಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ, ಅಂತಹ ಚರ್ಚೆ ಬಗ್ಗೆ ನನಗೆ ತಿಳಿದಿಲ್ಲ. ಇದ್ದರೂ ಇರಬಹುದು ಗೊತ್ತಿಲ್ಲ. ಶಿವಕುಮಾರ್ ಅವರಿಗೆ ಡಿಸಿಎಂ ಆಗಿ ಅಧಿಕಾರದ ಒತ್ತಡ ಇರುತ್ತದೆ. ಅವರು ಬೇಡ ಎಂದರೆ ಬೇರೆಯವರು ಆಗಬಹುದು ಎಂದಿದ್ದಾರೆ. ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆಯಲ್ಲೂ ಕಾಂಗ್ರೆಸ್ ಹಣದ ಹೊಳೆಯನ್ನೇ ಹರಿಸುತ್ತಿದೆ: ಹೆಚ್ಡಿಕೆ