ಬೆಂಗಳೂರು: ಆಸ್ಪತ್ರೆ ಒಳಗೆ ಹೋಗಲು ಬಿಟ್ಟಿಲ್ಲವೆಂದು ವ್ಯಕ್ತಿಯೊಬ್ಬ ವೈದ್ಯರ ಮೇಲೆ ಹಲ್ಲೆ ಮಾಡಿದ ಘಟನೆ ನಗರದ ಜಯದೇವ ಆಸ್ಪತ್ರೆಯಲ್ಲಿ ನಡೆದಿದೆ.
ಮೊಹಮ್ಮದ್ ಸುಹೇಲ್ ವೈದ್ಯರ ಮೇಲೆ ಹಲ್ಲೆ ಮಾಡಿದ ಆರೋಪಿ. ಜಯದೇವ ಆಸ್ಪತ್ರೆಯ ವೈದ್ಯ ಗೌತಂ ಹಲ್ಲೆಗೊಳಗಾದವರು.
ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಯನ್ನು ನೋಡಲು ಮೊಹಮ್ಮದ್ ಸುಹೇಲ್ ಬಂದಿದ್ದ. ಆದರೆ ಇದು ರೋಗಿಯ ಭೇಟಿ ಮಾಡುವ ಸಮಯವಲ್ಲ. ಹೀಗಾಗಿ ಒಬ್ಬೊಬ್ಬರೇ ಹೋಗಿ ಎಂದು ವೈದ್ಯ ಗೌತಂ ತಿಳಿಸಿದ್ದರು. ಈ ವಿಚಾರವಾಗಿ ಗಲಾಟೆ ಆರಂಭಿಸಿದ ಮೊಹಮ್ಮದ್ ಸುಹೇಲ್ ಐಸಿಯು ಒಳಗೆ ನುಗ್ಗಿ ಹಲ್ಲೆ ವೈದ್ಯರ ಮೇಲೆ ಹಲ್ಲೆ ಮಾಡಿದ್ದಾನೆ.
ಈ ಸಂಬಂಧ ವೈದ್ಯರು ಆರೋಪಿ ಮೊಹಮ್ಮದ್ ವಿರುದ್ಧ ತಿಲಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊಹಮ್ಮದ್ ಸುಹೇಲ್‍ನನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.