ಬೆಂಗಳೂರು: ತಮಿಳುನಾಡಾಯ್ತು ಇನ್ಮುಂದೆ ಕರ್ನಾಟಕದಲ್ಲಿಯೂ ಟಿಕ್‍ಟಾಕ್ ಬ್ಯಾನ್ ಆಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ.
ಹೌದು. ಟಿಕ್‍ಟಾಕ್ ವಿರುದ್ಧ ಮಹಿಳಾ ಆಯೋಗ ಕಾನೂನು ಸಮರ ಸಾರಿದ್ದು, ಇಲ್ಲಿ ಮಹಿಳೆಯರ ವಿಡಿಯೋಗಳನ್ನು ಅಸಭ್ಯವಾಗಿ ಬಳಕೆ ಮಾಡಲಾಗುತ್ತದೆ. ಹೀಗಾಗಿ ಟಿಕ್‍ಟಾಕ್ ಬ್ಯಾನ್ ಮಾಡುವಂತೆ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ ಹೇಳಿದ್ದಾರೆ.
Advertisement
ನಾಗಲಕ್ಷ್ಮಿ ಹೇಳಿದ್ದೇನು?
ಟಿಕ್ ಟಾಕ್ ಫೋನೋಗ್ರಫಿ ವಿಡಿಯೋವಾಗಿದ್ದು, ಚೈನೀಸ್ ವಿಡಿಯೋ ಆ್ಯಪ್ ಆಗಿದೆ. ಯುವಕ- ಯುವತಿಯರ ಮನಸೆಳೆದಿರುವ ಈ ವಿಡಿಯೋದಲ್ಲಿ ಯುವಕ-ಯುವತಿಯರ ಜೊತೆ ಬೇರೆಯದ್ದೇ ಒಂದು ಆಡಿಯೋವನ್ನು ಸೇರಿಸಿ, ಹೆಣ್ಣು ಮಕ್ಕಳ ಮಾನ ಹಾಗೂ ತೇಜೋವಧೆ ಮಾಡುವಂತಹ ಕೆಟ್ಟ ಆ್ಯಪ್ ಇದಾಗಿದೆ.
Advertisement
Advertisement
ಇದನ್ನು ಬಹಳ ಬೇಗನೆ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಇದು ನಮ್ಮ ಸಂಸ್ಕೃತಿ ಹಾಗೂ ನಾಗರಿಕತೆಯನ್ನು ಹಾಳು ಮಾಡುತ್ತದೆ. ಇಂತಹ ವಿಡಿಯೋಗಳಿಂದ ಹೆಣ್ಣು ಮಕ್ಕಳ ಮೇಲೆ ಇನ್ನಷ್ಟು ದೌರ್ಜನ್ಯ ಪ್ರಕರಣಗಳು ನಡೆಯುವ ಸಾಧ್ಯತೆಗಳಿವೆ. ಹೀಗಾಗಿ ರಾಜ್ಯ ಮಹಿಳಾ ಆಯೋಗ ಈ ವಿಡಿಯೋವನ್ನು ಸಂಪೂರ್ಣವಾಗಿ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದೆ.
Advertisement
ಈ ಕುರಿತು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಸಲ್ಲಿಸುವುದಾಗಿ ತಿಳಿಸಿದ ಅವರು, ಮಾಹಿತಿ ತಂತ್ರಜ್ಞಾನ ಸಚಿವರಿಗೂ ಪತ್ರ ಬರೆಯುತ್ತೇನೆ. ಒಟ್ಟಿನಲ್ಲಿ ಈ ಆ್ಯಪ್ ಕರ್ನಾಟದಲ್ಲಿ ರದ್ದಾಗಬೇಕು ಎಂದು ಅವರು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಬ್ಯಾನ್:
ಚೀನಾ ಮೂಲದ ಟಿಕ್ ಟಾಕ್ ಮೊಬೈಲ್ ಆ್ಯಪ್ ನಿಷೇಧಿಸುವಂತೆ ಮಣಿತನೇಯ ಜನನಾಯಕ ಕಚ್ಚಿ ಪಕ್ಷದ ನಾಯಕ ತಮೀಮುನ್ ಅನ್ಸಾರಿ ಅವರು ಒತ್ತಾಯಿಸಿದ್ದರು. ಟಿಕ್ ಟಾಕ್ ನಿಂದ ಸಂಸ್ಕೃತಿ ಅವನತಿಗೆ ದಾರಿ ಮಾಡಿಕೊಟ್ಟಿದೆ. ಇನ್ನು ಕೆಲವರು ಅಮಾಯಕ ಮಹಿಳೆಯರ ಮುಖವನ್ನು ಕೆಟ್ಟದಾಗಿ ಎಡಿಟ್ ಮಾಡಿ ವಿಕೃತಿ ಮರೆಯುತ್ತಿದ್ದಾರೆ. ಅಲ್ಲದೆ, ಲೈಂಗಿಕ ವಿಷಯಗಳನ್ನು ಹರಡುವ ಮೂಲಕ ಮತ್ತೊಬ್ಬರ ಗಮನವನ್ನು ಸೆಳೆಯುವಷ್ಟು ಕೆಳಮಟ್ಟಿಗೆ ಕೆಲವು ಆ್ಯಪ್ ಬಳಕೆದಾರರು ಇಳಿದಿದ್ದಾರೆ. ಹೀಗಾಗಿ ಆ್ಯಪ್ ಬ್ಯಾನ್ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದ್ದರು.