ಬೆಂಗಳೂರು: ಫೈನಾನ್ಸರ್‌ಗಳನ್ನು ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿದ್ದ ನಟೋರಿಯಸ್ ದರೋಡೆಕೋರರನ್ನ ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಇಮ್ರಾನ್ ಅಲಿಯಾಸ್ ಕುಂಟ ಇಮ್ರಾನ್, ಅಪ್ಸರ್ ಬೇಗ್ ದರೋಡೆಕೋರರು. ಆರೋಪಿ ಇಮ್ರಾನ್ ಪರಪ್ಪನ ಅಗ್ರಹಾರ ಜೈಲಿನಿಂದ ವಾರದ ಹಿಂದಷ್ಟೇ ಹೊರಗಡೆ ಬಂದಿರುತ್ತಾನೆ. ಇದನ್ನೂ ಓದಿ:ಸಿಎಂ ಜಗನ್ ಆದೇಶಕ್ಕೆ ನಿಟ್ಟುಸಿರಿಟ್ಟ ತೆಲುಗು ಚಿತ್ರರಂಗ
Advertisement
ಈ ಹಿಂದೆ ದರೋಡೆ ಕೇಸ್‍ನಲ್ಲಿ ಬಂಧಿಸಿ ಜೈಲಿಗೆ ಕಳಿಸಿದ್ದರು. ನಗರದ 10ಕ್ಕೂ ಹೆಚ್ಚು ಪೊಲೀಸ್ ಠಾಣೆಗಳಲ್ಲಿ ಆರೋಪಿ ಇಮ್ರಾನ್ ಅಲಿಯಾಸ್ ಕುಂಟ ಇಮ್ರಾನ್ ಮೇಲೆ ಪ್ರಕರಣಗಳು ದಾಖಲಾಗಿದೆ. ಇದೇ ತಿಂಗಳ 7 ರಂದು ಸತೀಶ್ ಅಂಗಡಿಗಳಿಂದ ಹಣ ಕಲೆಕ್ಟ್ ಮಾಡಿಕೊಂಡು ಬೈಕ್‍ನಲ್ಲಿ ಹೋಗ್ತಾ ಇರುತ್ತಾನೆ.
Advertisement
Advertisement
ಸತೀಶ್ ನನ್ನ ಪಾಲೋ ಮಾಡಿಕೊಂಡು ಬಂದ ಇಮ್ರಾನ್ ಟೀಂ ಕಣ್ಣೂರು-ಬೆಟ್ಟಹಳ್ಳಿ ರಸ್ತೆಯ ಪುನರ್ವಿ ಕಾಂಡಿಮೆಂಟ್ಸ್ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹಣದ ಬ್ಯಾಗ್ ಕಿತ್ತು ಪರಾರಿಯಾಗಿರುತ್ತಾರೆ. ಈ ಘಟನೆ ಸಂಬಂದ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಸಲಾಗಿತ್ತು. ಪ್ರಕರಣ ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಬ್ಬರನ್ನ ಬಂಧಿಸಿ ಜೈಲಿಗೆ ಕಳಿಸಿದ್ದಾರೆ.