ಬೆಂಗಳೂರು: ದೇವರ ಹೆಸರಲ್ಲಿ ಜನರಿಗೆ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಮಾಲೀಕ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆಲ್ ಫಜೀಲ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಮಾಲೀಕ ಫಹಿಮ್ ಪಾಷಾ ದೇವರ ಹೆಸರಲ್ಲಿ ದೂರದ ಬಾಗ್ದಾದ್‍ಗೆ ಕರೆದುಕೊಂಡು ಹೋಗಿ ಇರಾಕ್‍ನಲ್ಲೇ ಬಿಟ್ಟು ಬಂದಿದ್ದಾರೆಂದು ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.
Advertisement
Advertisement
ನಿವೃತ್ತ ಎಸಿಬಿ ಹಾಗೂ ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಫಹೀಮ್ ಪಾಷಾ ವಿರುದ್ದ ಕೇಸ್ ದಾಖಲಿಸಿದ್ದಾರೆ. ಆರೋಪಿ ಫಹೀಮ್ ಪಾಷಾ ಬಾಗ್ದಾದ್ ಹಾಗೂ ಇರಾಕ್ ನಲ್ಲಿರುವ ದರ್ಗಾಗಳನ್ನ ವಿಕ್ಷಣೆಗೆ 15 ಪ್ಯಾಕೇಜ್ ಟೂರ್ ಕರೆದುಕೊಂಡು ಹೋಗಿದ್ದಾರೆ. ಆರೋಪಿ ಪಾಷಾ ಪ್ಯಾಕೇಜ್ ಟೂರ್ ಅಂತ ಪ್ರತಿಯೊಬ್ಬರಿಂದ 65 ಸಾವಿರದಂತೆ 10 ಲಕ್ಷಕ್ಕೂ ಹೆಚ್ಚು ಹಣ ಕಲೆಕ್ಟ್ ಮಾಡಿಕೊಂಡಿದ್ದಾರೆ.
Advertisement
Advertisement
ಬೆಂಗಳೂರಿಂದ ಬಾಗ್ದಾದ್ ಗೆ ಹೋಗೋದಕ್ಕೆ ವಿಮಾನ ಟಿಕೆಟ್ ಬುಕ್ ಮಾಡಿ ಕಳುಹಿಸಿಕೊಟ್ಟಿದ್ದಾನೆ. ಬಾಗ್ದಾದ್ ನಿಂದ ಭಕ್ತಾದಿಗಳು ಮರಳಿ ಬೆಂಗಳೂರಿಗೆ ಬರೋದಕ್ಕೆ ಆರೋಪಿ ಪಾಷಾ ಟಿಕೆಟ್ ಬುಕ್ ಮಾಡಿಸದೇ ಇರುವುದರಿಂದ ಭಕ್ತಾದಿಗಳು ದೂರದ ಬಾಗ್ದಾದ್ ಹಾಗೂ ಇರಾಕ್ ನಲ್ಲಿಯೇ ಅನ್ನ ನೀರು ಇಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.