ಮಂಗಳೂರು: ಸೆಲ್ಫಿ ತೆಗೆಯಲು ಸಮುದ್ರ ದಡದ ಪಕ್ಕದಲ್ಲಿದ್ದ ಬಂಡೆಕಲ್ಲು ಹತ್ತಿ ಬಳಿಕ ದಡ ಸೇರಲಾಗದೆ ಪರದಾಡುತ್ತಿದ್ದ ಟೆಕ್ಕಿಯನ್ನು ರಕ್ಷಣೆ ಮಾಡಿದ ಘಟನೆ ಸುರತ್ಕಲ್ ಬೀಚ್ ನಲ್ಲಿ ಇಂದು ನಡೆದಿದೆ.
ಬೆಂಗಳೂರಿನ ಕೆ ಅರ್ ಪುರಂ ನಿವಾಸಿ ಭರತ್ ಮತ್ತು ಏಳು ಮಂದಿ ಗೆಳೆಯರ ತಂಡ ಸುರತ್ಕಲ್ ಲೈಟ್ ಹೌಸ್ ಬಳಿ ಸಮುದ್ರ ತೀರಕ್ಕೆ ಆಗಮಿಸಿದ್ರು. ಈ ವೇಳೆ ಟೆಕ್ಕಿ ಭರತ್ ಸಮುದ್ರದ ಸುಂದರ ದ್ರಶ್ಯದೊಂದಿಗೆ ತನ್ನ ಸೆಲ್ಫಿ ತೆಗೆಯಲು ಸಮುದ್ರದ ದಡದಲ್ಲಿದ್ದ ಬಂಡೆಕಲ್ಲಿನ್ನು ಏರಿದ್ದರು.
ಈ ವೇಳೆ ಸಮುದ್ರದ ಅಲೆಗಳು ಹೆಚ್ಚಾಗಿರೋದ್ರಿಂದ ಕೆಳಗೆ ಇಳಿಯಲಾಗದೆ ಪರದಾಡಿದ್ದರು. ಇದನ್ನು ಗಮನಿಸಿದ ಸ್ಥಳಿಯರು ಶಾಸಕ ಮೊಯಿದ್ದೀನ್ ಬಾವನಿಗೆ ವಿಚಾರ ತಿಳಿಸಿದ್ದು ತಕ್ಷಣ ಜಾವೇದ್ & ಟೀಮ್ ಜೀವ ರಕ್ಷಕ ತಂಡಕ್ಕೆ ಕೂಡಲೇ ಮಾಹಿತಿ ರವಾನಿಸಿದ್ದರು. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ್ದ ಜೀವ ರಕ್ಷಕ ತಂಡ ಟೆಕ್ಕಿ ಭರತ್ ನನ್ನು ರಕ್ಷಣೆ ಮಾಡಿದ್ದಾರೆ.
https://www.youtube.com/watch?v=kWnBGOZd6Lk&feature=youtu.be