ಬೆಂಗಳೂರು: ಆನ್‌ಲೈನ್‌ನಲ್ಲಿ 1.85 ಲಕ್ಷ ರೂ. ಮೌಲ್ಯದ ಸ್ಯಾಮ್‌ಸಂಗ್ ಫೋನ್ ಬುಕ್ ಮಾಡಿದ್ದ ಟೆಕ್ಕಿಗೆ ಡೆಲಿವರಿ ಬಾಕ್ಸ್‌ನಲ್ಲಿ ಕಲ್ಲಿಟ್ಟು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಾಫ್ಟ್‌ವೇರ್ ಎಂಜಿನಿಯರ್ ಪ್ರೇಮಾನಂದ್ ವಂಚನೆಗೆ ಒಳಗಾದ ವ್ಯಕ್ತಿ. ಇವರು 1.85 ಲಕ್ಷ ರೂ. ಮೌಲ್ಯದ ಫೋನ್ ಅನ್ನು ಅಮೆಜಾನ್ ಆ್ಯಪ್‌ನಲ್ಲಿ ಬುಕ್ ಮಾಡಿದ್ದರು. ನಿಗದಿ ದಿನಾಂಕದಂತೆ ಆರ್ಡರ್ ಡೆಲಿವರಿಯಾಗಿತ್ತು. ಇದನ್ನೂ ಓದಿ: ರಸ್ತೆಗೆ ತ್ಯಾಜ್ಯ ಎಸೆದವರಿಗೆ ತಕ್ಕ ಪಾಠ – ಹಾಕಿದವ್ರ ಮನೆ ಮುಂದೆಯೇ ಕಸ ವಾಪಸ್ ಸುರಿದ BSWML ಸಿಬ್ಬಂದಿ
ಬಾಕ್ಸ್ ಓಪನ್ ಮಾಡಿ ನೋಡಿದ ಟೆಕ್ಕಿಗೆ ಶಾಕ್ ಆಗಿದೆ. ಮೊಬೈಲ್ ಬಾಕ್ಸ್‌ನಲ್ಲಿ ಚೌಕಾಕಾರದ ಕಲ್ಲನ್ನು ಇಟ್ಟು ವಂಚಿಸಲಾಗಿದೆ. ಫೋನ್‌ಗಾಗಿ ಟೆಕ್ಕಿ ಸಂಪೂರ್ಣ ಹಣ ಪಾವತಿ ಮಾಡಿದ್ದರು. ಡೆಲಿವರಿ ಬಾಯ್‌ಗೆ ಕರೆ ಮಾಡಿದರೆ ರೆಸ್ಪಾನ್ಸ್ ಸಿಕ್ಕಿಲ್ಲ. ಕೊನೆಗೆ ಎನ್‌ಸಿಆರ್‌ಪಿ ಪೋರ್ಟಲ್‌ನಲ್ಲಿ ದೂರು ದಾಖಲಿಸಲಾಗಿದೆ.
ಮೊಬೈಲ್ ಭಾರ ಇರುವಷ್ಟೇ ತೂಕದ ಚೌಕಾಕಾರದ ಕಲ್ಲನ್ನು ಬಾಕ್ಸ್‌ನಲ್ಲಿಟ್ಟು ಟೆಕ್ಕಿಗೆ ವಂಚಿಸಲಾಗಿದೆ. ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇದನ್ನೂ ಓದಿ: ನೇರಳೆ ಮಾರ್ಗ ಮಧ್ಯೆಯೇ ನಿಂತ ನಮ್ಮ ಮೆಟ್ರೋ ರೈಲು – ಒಂದು ಗಂಟೆ ಕಾಲ ಪರದಾಡಿದ ಪ್ರಯಾಣಿಕರು

