– ತಮ್ಮನ ಮೇಲೆ ಚಾಕುವಿನಿಂದ ಹಲ್ಲೆ
ಬೆಂಗಳೂರು: ಹೆತ್ತ ತಾಯಿಯನ್ನೇ ಮಗಳು ಕೊಲೆ ಮಾಡಿರುವ ಘಟನೆ ನಗರದ ಕೆ.ಆರ್.ಪುರಂನಲ್ಲಿ ನಡೆದಿದೆ.
ಕೆ.ಆರ್.ಪುರಂ ನಿವಾಸಿ ನಿರ್ಮಾಲ ಕೊಲೆಯಾದ ಮಹಿಳೆಯಾಗಿದ್ದು, ಸಾಫ್ಟ್ ವೇರ್ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ ಅಮೃತ ಕೊಲೆ ಮಾಡಿದ ಆರೋಪಿ. ಕೆಆರ್ ಪುರಂನ ಅಪಾರ್ಟ್ ಮೆಂಟ್‍ನಲ್ಲಿ ಕುಟುಂಬದೊಂದಿಗೆ ಅಮೃತ ವಾಸಿಸುತ್ತಿದ್ದರು.
Advertisement
ನಾನು 15 ಲಕ್ಷ ರೂ. ಸಾಲ ಮಾಡಿದ್ದೇನೆ. ಸಾಲಗಾರರು ಮನೆಯ ಬಳಿ ಬರುತ್ತಾರೆ. ಸಾಲಗಾರರು ಬಂದಾಗ ನನ್ನ ಬಂಡವಾಳ ಬಯಲಾಗುತ್ತೆ. ಅದಕ್ಕೆ ನಿಮ್ಮನ್ನು ಕೊಲ್ಲುತ್ತೇನೆ ಎಂದು ಮಲಗಿದ್ದ ತಾಯಿಗೆ ಚಾಕು ಇರಿದು ಅಮೃತ ಕೊಲೆ ಮಾಡಿದ್ದಾಳೆ. ತಾಯಿಯನ್ನು ಕೊಲೆ ಮಾಡಿ ಬಳಿಕ ತಮ್ಮ ಹರೀಶ್ ಕೊಲ್ಲಲು ಯತ್ನ ಮಾಡಿದ್ದಾಳೆ.
Advertisement
Advertisement
ತಾಯಿಯನ್ನು ಕೊಲೆ ಮಾಡಿ ಬಳಿಕ ತಮ್ಮ ಹರೀಶ್‍ಗೆ ಚಾಕು ಇರಿದಿದ್ದ ಅಮೃತ. ಚಾಕು ಇರಿಯುವಾಗ ಯಾಕೆ ಈ ರೀತಿ ಮಾಡುತ್ತಿದ್ದೀಯಾ ಎಂದು ಹರೀಶ್ ಪ್ರಶ್ನೆ ಮಾಡಿದ್ದಾನೆ. ನಾನು 15 ಲಕ್ಷ ರೂ. ಸಾಲ ಮಾಡಿದ್ದೀನಿ. ಅದನ್ನು ಕೇಳಲು ಸಾಲಗಾರರು ನಿಮ್ಮ ಬಳಿ ಬರುತ್ತಾರೆ. ಆಗ ನನ್ನ ಬಂಡವಾಳ ಗೊತ್ತಾಗುತ್ತೆ. ಅದಕ್ಕೆ ಅಮ್ಮನನ್ನು ಕೊಲೆ ಮಾಡಿದ್ದೀನಿ, ನಿನ್ನನ್ನು ಕೊಲ್ಲುತ್ತೇನೆ ಎಂದು ಚಾಕುವಿನಿಂದ ಕೊಲೆ ಮಾಡಲು ಯತ್ನಿಸಿದ್ದಾಳೆ. ಆ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾಳೆ.
Advertisement
ಆದರೆ ಅಮೃತ ಪ್ರೀತಿಗೆ ಮನೆಯವರ ವಿರೋಧವಿತ್ತು. ಈ ಕಾರಣದಿಂದಲೇ ಅಮ್ಮನನ್ನು ಕೊಲೆ ಮಾಡಿ, ಬಳಿಕ ಸಹೋದರರನ್ನು ಕೊಲೆ ಮಾಡಲು ಯತ್ನಿಸಿದ್ದಳು ಎನ್ನಲಾಗಿದೆ. ನಗರದಲ್ಲಿ ಕೆಲಸ ಮಾಡುತ್ತಿದ್ದ ಅಮೃತ ಇತ್ತೀಚೆಗೆ ಹೈದರಾಬಾದ್ ಗೆ ವರ್ಗಾವಣೆ ಮಾಡಿಸಿಕೊಂಡಿದ್ದಳು. ಹೈದರಾಬಾದ್‍ಗೆ ತೆರಳುವ ಮುನ್ನ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಳು. ಆದರೆ ಪ್ರೀತಿಗೆ ವಿರೋಧ ಮಾಡಿದ್ದಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಅಮೃತಳಿಗಾಗಿ ಹುಡುಕಾಟ ನಡೆಸಿದ್ದಾರೆ.