ಬೆಂಗಳೂರು: ಸಿಲಿಕಾನ್ ಸಿಟಿಯ ಟೆಕ್ಕಿಗಳಿಗೆ ಹಸು, ಎಮ್ಮೆಗಳದ್ದೇ ದೊಡ್ಡ ಟೆನ್ಶನ್ ಆಗಿದೆ. ಕಚೇರಿಗೆ ಹೋಗಬೇಕು ಅಂತ ಕಾರು, ಬೈಕ್ ಹತ್ತಿದ್ರೆ, ರಸ್ತೆಯಲ್ಲಿ ಅವುಗಳನ್ನ ಓಡಿಸೋದೆ ನಿತ್ಯ ಕಾಯಕವಾಗ್ತಿದೆ. ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡುವ ಹಸು, ಎಮ್ಮೆಗಳನ್ನ ಮುಕ್ತಿ ಕೊಡಿಸಿ ಸರ್ ಅಂತ ಶಾಸಕ ಅರವಿಂದ ಲಿಂಬಾವಳಿ (Aravind Limbavali) ಗೆ ಟೆಕ್ಕಿಗಳು ರಿಕ್ವೆಸ್ಟ್ ಮಾಡ್ತಿದ್ದಾರೆ.
Daily march of buffalos on #Kasavanahalli mainroad,choking entire peak traffic for 30mins. Just 2kms away from Wipro,Microsoft's of the world.All complaints to @ArvindLBJP @BBMPCOMM @hsrltrafficps yield nothing!#Lawless #Administration of #ITCorridor@DCPTrEastBCP@SplCPTraffic pic.twitter.com/rCmjRyy0Od
— SaveBellandur(ಬೆಳ್ಳಂದೂರು ಉಳಿಸಿ) (@kdevforum) January 20, 2023
Advertisement
ಮಹಾದೇವಪುರ ವಿಧಾನಸಭಾ ಕ್ಷೇತ್ರದ ಕಸವನಹಳ್ಳಿ ಮುಖ್ಯರಸ್ತೆಯಲ್ಲಿ ಪ್ರತಿನಿತ್ಯ ಎಮ್ಮೆ (Buffalo), ಹಸುಗಳು ವಾಹನಗಳಿಗೆ ಅಡ್ಡ ಬರುತ್ತಿವೆ. ಇದರಿಂದ ಆಫೀಸ್‍ಗೆ ಹೋಗಲು ನಿತ್ಯ 40 ರಿಂದ 50 ನಿಮಿಷ ಲೇಟಾಗ್ತಿದೆ. ಸರಿಯಾದ ಸಮಯಕ್ಕೆ ಆಫೀಸ್‍ಗೆ ಹೊಗಲು ಆಗ್ತಿಲ್ಲ ಅಂತ ಎಮ್ಮೆ, ಹಸುಗಳ ಮೇಲೆ ಟೆಕ್ಕಿಗಳು ದೂರು ನೀಡಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆ ಮೇಲೆ ಡಿಕೆಗೆ, ರೇವಣ್ಣ ಮೇಲೆ ಸಿದ್ರಾಮಣ್ಣಗೆ ಸಾಫ್ಟ್ ಕಾರ್ನರಾ?
Advertisement
Advertisement
ಪ್ರತಿದಿನ ಬೆಳಗ್ಗೆ ಆಫೀಸ್ (Office) ಗೆ ಹೋಗೋ ಹೊತ್ತಲ್ಲೇ, ಮಾರ್ಚ್ ಫಾಸ್ಟ್ ಮಾಡೋ ರೀತಿಯಲ್ಲಿ ಸರತಿ ಸಾಲಿನಲ್ಲಿ ಎಮ್ಮೆ, ಹಸುಗಳು ಹೋಗ್ತಿರುತ್ತೆ. ಸರ್ಜಾಪುರ ರಸ್ತೆಯಲ್ಲಿ ಹಲವು ಐಟಿ ಕಂಪನಿಗಳಿದ್ದು, ವಿಪ್ರೋ, ರೇನೋ ಬೋ ಮೂಲಕ ಸರ್ಜಾಪುರ ಮುಖ್ಯ ರಸ್ತೆಯ 2 ಕಿಲೋ ಮೀಟರ್ ವರೆಗೂ ಗುಂಪು ಗುಂಪಾಗಿ ಎಮ್ಮೆ, ಹಸುಗಳು ರಸ್ತೆಗಿಳಿಯುತ್ತಿವೆ. ಇವುಗಳಿಗೆ ಎಷ್ಟೇ ಹಾರ್ನ್ ಮಾಡಿದ್ರೂ ಪಕ್ಕಕ್ಕೇ ಸರಿಯೋದೆ ಇಲ್ಲ. ಕಳೆದ ಆರು ತಿಂಗಳಿನಿಂದ ಈ ರಗಳೆ ಇದ್ದು, ಈ ಬಗ್ಗೆ ಟ್ವಿಟ್ಟರ್‍ನಲ್ಲಿ ಶಾಸಕ ಅರವಿಂದ ಲಿಂಬಾವಳಿ, ಬಿಬಿಎಂಪಿ ಕಮಿಷನರ್ (BBMP Commissioner), ಪೊಲೀಸರಿಗೆ ಹಾಗೂ ಪಶುಸಂಗೋಪನಾ ಇಲಾಖೆಗೆ ಟ್ಯಾಗ್ ಮಾಡಿ ಎಂಎನ್‍ಸಿ ಟೆಕ್ಕಿಗಳು ಸಾಲು ಸಾಲು ದೂರು ನೀಡಿದ್ದಾರೆ.
Advertisement
ಟ್ರಾಫಿಕ್ ಪಾಯಿಂಟ್‍ಗಳಲ್ಲಿ ಎಮ್ಮೆ, ಹಸುಗಳಿಂದ ಟ್ರಾಫಿಕ್ ಆದಾಗ ಅಲ್ಲಿರುವ ಟ್ರಾಫಿಕ್ ಪೊಲೀಸರೇ ಅವುಗಳನ್ನ ಓಡಿಸ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳಿಗೆ, ಶಾಸಕರಿಗೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಟೆಕ್ಕಿಗಳು ದೂರಿನಲ್ಲಿ ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k