ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಟೆಕ್ಕಿಯೊಬ್ಬರು ಸಾವನ್ನಪ್ಪಿದ್ದಾರೆ.
ಕಾರ್ತಿಕ್ ಶೆಟ್ಟಿ(35) ಸಾವನ್ನಪ್ಪಿರುವ ಟೆಕ್ಕಿ. ಮಾನ್ಯತಾ ಟೆಕ್ ಪಾರ್ಕಿನ ನ ನಾರ್ಥನ್ ಟ್ರಸ್ಟ್ ನಲ್ಲಿ ಟೆಕ್ಕಿಯಾಗಿ ಕೆಲಸ ಮಾಡ್ತಿದ್ದ ಕಾರ್ತಿಕ್ ಶೆಟ್ಟಿ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿ ಫ್ರೇಜರ್ ಟೌನ್ ನಲ್ಲಿ ವಾಸವಾಗಿದ್ದರು.
Advertisement
ಗುರುವಾರ ಮಧ್ಯಾಹ್ನ 12 ಗಂಟೆಗೆ ಸ್ವಿಫ್ಟ್ ಕಾರ್ ನಲ್ಲಿ ಹೊರಟಿದ್ದ ಟೆಕ್ಕಿ ರಾತ್ರಿ ಮರಳಿ ಮನೆಗೆ ಆಗಮಿಸಲಿಲ್ಲ. ಇಂದು ಇಂದು ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ ನಲ್ಲೇ ಟೆಕ್ಕಿ ಶವ ಪತ್ತೆಯಾಗಿದೆ.
Advertisement
Advertisement
ಉಸಿರಾಟದ ತೊಂದರೆ ಮತ್ತು ಸುಟ್ಟಗಾಯಗಳಿಂದ ಟೆಕ್ಕಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.