– ಇನ್ನೂ ಬಾರದ ಕುಟುಂಬ ಸದಸ್ಯರು
– ಶವಾಗಾರದಲ್ಲೇ ಇದೆ ಮೃತದೇಹಗಳು
ಬೆಂಗಳೂರು: “ಅಪ್ಪ – ಅಮ್ಮ ಮಾತನಾಡುತ್ತಿಲ್ಲ. ನನ್ನ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಈ ಕಾರಣಕ್ಕೆ ನಾವು ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ” – ಇದು ಇಬ್ಬರು ಮಕ್ಕಳಿಗೆ ವಿಷ ಹಾಕಿ ನೇಣಿಗೆ ಶರಣಾದ ಅನೂಪ್ ಮರಣಪತ್ರದಲ್ಲಿರುವ (Death Note) ಅಂಶಗಳು.
Advertisement
ಮಕ್ಕಳಾದ ಅನುಪ್ರಿಯಾ (5) ಮತ್ತು ಪ್ರಿಯಾಂಶ್ (2) ವಿಷ ಹಾಕಿದ ಬಳಿಕ ಪತಿ ಅನೂಪ್ (38), ರಾಖಿ(35) ನೇಣಿಗೆ ಶರಣಾಗಿದ್ದರು. ಆತ್ಮಹತ್ಯೆ (Suicide) ಮುನ್ನ ಅನೂಪ್ ಒಂದು ಪುಟದ ಡೆತ್‌ನೋಟ್ ಬರೆದು ಸಹೋದರನಿಗೆ ಇಮೇಲ್ ಮಾಡಿದ್ದರು.
Advertisement
Advertisement
ಡೆತ್‌ನೋಟ್‌ನಲ್ಲಿ ಏನಿದೆ?
ನಮ್ಮ ಜೊತೆ ಕುಟುಂಬ (Family) ಇರಲಿಲ್ಲ. ನಾನು ಅಪ್ಪನಿಗೆ ಹಲವು ಬಾರಿ ಫೋನ್ ಮಾಡಿದರೂ ಅವರು ಕರೆಯನ್ನೇ ಸ್ವೀಕರಿಸುತ್ತಿರಲಿಲ್ಲ. ಕರೆ ಸ್ವೀಕರಿಸಿದರೂ ನಾನು ಆಸ್ತಿ ಕೇಳುತ್ತೇನೆ ಎಂದು ನನ್ನ ಜೊತೆ ಜಗಳ ಮಾಡುತ್ತಿದ್ದರು.
Advertisement
ನನಗೆ ಎರಡನೇ ಮಗು ಹುಟ್ಟಿದಾಗಲೂ ಯಾರೂ ವಿಚಾರಿಸಲಿಲ್ಲ. ಕನಿಷ್ಟ ಒಂದು ವಿಡಿಯೋ ಕಾಲ್ ಮಾಡಿ ಮಾತನಾಡಿಸಲಿಲ್ಲ.ಇದರಿಂದ ನಾನು ನನ್ನ ಹೆಂಡತಿ ಮಾನಸಿಕವಾಗಿ ನೊಂದು ಹೋಗಿದ್ದೇವೆ. ಇದನ್ನೂ ಓದಿ: ಇಬ್ಬರು ಮಕ್ಕಳನ್ನು ಹತ್ಯೆಗೈದು ಬೆಂಗಳೂರಿನ ಟೆಕ್ಕಿ, ಪತ್ನಿ ಆತ್ಮಹತ್ಯೆ
ಮೊದಲ ಮಗು ಅನುಪ್ರಿಯಾಗೆ ಬುದ್ಧಿಮಾಂದ್ಯತೆ ಇತ್ತು. ಈಕೆಯ ವಿಚಾರದಲ್ಲಿ ನಾವಿಬ್ಬರೂ ಬಹಳ ನೊಂದಿದ್ದೆವು. ಆಗಲೂ ಯಾರೊಬ್ಬರೂ ನನಗೆ ಸಹಾಯ ಮಾಡಲಿಲ್ಲ ಧೈರ್ಯ ತುಂಬಲಿಲ್ಲ. ಕುಟುಂಬದವರು ನಮ್ಮಿಂದ ದೂರವಾಗಿದ್ದರು ಎಂದು ನೋವಿನ ಮಾತುಗಳನ್ನು ಇಮೇಲ್‌ನಲ್ಲಿ ಬರೆದಿದ್ದಾರೆ.
ಉತ್ತರ ಪ್ರದೇಶ (Uttar Pradesh) ಮೂಲದ ದಂಪತಿ ಪ್ರೀತಿಸಿ ಮದುವೆಯಾಗಿದ್ದರು. ಅನೂಪ್ ಸಾಫ್ಟ್‌ವೇರ್ ಕಂಪನಿಯಲ್ಲಿ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರೆ ರಾಖಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಇಬ್ಬರು ವರ್ಕ್‌ಫ್ರಂ ಹೋಮ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈಗಾಗಲೇ ಕುಟುಂಬದ ಸದಸ್ಯರಿಗೆ ಮೃತಪಟ್ಟ ವಿಚಾರವನ್ನು ತಿಳಿಸಲಾಗಿದೆ. ಆದರೆ ಉತ್ತರ ಪ್ರದೇಶದಿಂದ ಕುಟುಂಬ ಬಂದಿಲ್ಲ. ಮೃತದೇಹಗಳು ಇನ್ನೂ ಶವಾಗಾರದಲ್ಲೇ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರಿನ (Bengaluru) ಸದಾಶಿವ ನಗರದ ಆರ್.ಎಂ.ವಿ ಎರಡನೇ ಹಂತದ ಟೆಂಪಲ್ ರಸ್ತೆಯಲ್ಲಿ ಕುಟುಂಬ ನೆಲೆಸಿತ್ತು. ಭಾನುವಾರ ರಾತ್ರಿ 10 ಗಂಟೆಯವರೆಗೆ ಕುಟುಂಬ ಚೆನ್ನಾಗಿತ್ತು. ಸೋಮವಾರ ಬೆಳಗ್ಗೆ ಮನೆಗೆ ಕೆಲಸದವರು ಬಂದಾಗ ಆತ್ಮಹತ್ಯೆ ಮಾಡಿಕೊಂಡ ವಿಚಾರ ಬೆಳಕಿಗೆ ಬಂದಿತ್ತು.
ಅನೂಪ್ ಮನೆಯಲ್ಲಿ ಮೂರು ಜನ ಕೆಲಸ ಮಾಡುತ್ತಿದ್ದರು. ಅನುಪ್ರಿಯಾಗೆ ಆರೋಗ್ಯ ಸಮಸ್ಯೆ ಇತ್ತು. ಈ ವಿಚಾರಕ್ಕೆ ದಂಪತಿ ಬಹಳ ಬೇಸರದಲ್ಲಿದ್ದರು. ಘಟನೆ ಸಂಬಂಧ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.