ಬೆಂಗಳೂರು: ಕ್ಲಾಸ್‍ರೂಮಿನಲ್ಲಿ ವಿದ್ಯಾರ್ಥಿಯನ್ನ ಶಿಕ್ಷನೋರ್ವ ಅಟ್ಟಾಡಿಸಿಕೊಂಡು ಹೊಡೆದಿರುವ ಘಟನೆ ಸಿಲಿಕಾನ್ ಸಿಟಿಯ ರಾಜಾಜಿನಗರದ ಬಸವೇಶ್ವರ ಕಾಲೇಜಿನಲ್ಲಿ ನಡೆದಿದೆ.
ವಿದ್ಯಾರ್ಥಿಯೊರ್ವ ಕೋಲು ಮುರಿದು ಹಾಕಿದ್ದಾನೆ ಎಂದು ಕಾರಣಕ್ಕೆ ಶಿಕ್ಷಕ ಹರೀಶ್ ಕ್ಲಾಸ್ ರೂಮ್‍ನಲ್ಲಿ ವಿದ್ಯಾರ್ಥಿಯೊಬ್ಬನಿಗೆ ಮನಬಂದಂತೆ ಥಳಿಸಿದ್ದಾನೆ. ವಿದ್ಯಾರ್ಥಿಯ ಮೇಲೆ ಬ್ಯಾಗ್ ಎಸೆದು ಕೈಗಳಿಂದ ಹಲ್ಲೆ ಮಾಡಿ ದೌರ್ಜನ್ಯ ಮಾಡಿದ್ದಾನೆ.
Advertisement
Advertisement
ಶಿಕ್ಷಕ ಹರೀಶ್ ವಿದ್ಯಾರ್ಥಿಗಳ ಮುಂದೆಯೇ ಹಲ್ಲೆ ಮಾಡಿದ ಕಾರಣ ಕ್ಲಾಸ್ ರೂಮ್‍ನಲ್ಲಿದ್ದ ಕೆಲ ವಿದ್ಯಾರ್ಥಿಗಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಚಾರವಾಗಿ ಹರೀಶ್ ಮೇಲೆ ಶಾಲಾ ಆಡಳಿತ ಮಂಡಳಿ ಶಿಸ್ತು ಕ್ರಮ ಕೈಗೊಂಡಿದ್ದು, ನಾನು ಮಾಡಿದ್ದು ತಪ್ಪು ಎಂದು ಒಪ್ಪಿಕೊಂಡಿರುವ ಶಿಕ್ಷಕ ಕ್ಷಮೆಯಾಚಿಸಿದ್ದಾನೆ.