– ಸರ್ಕಾರದ ಸಹಾಯ ಪಡೆಯದೇ ಉಚಿತವಾಗಿ ಹಂಚಿಕೆ
ಬೆಂಗಳೂರು: ನಗರದ ಹೊರವಲಯ ಟಿ.ದಾಸರಹಳ್ಳಿಯ ಮಲ್ಲಸಂದ್ರ ವಾರ್ಡಿನ ಬಡವರಿಗೆ ಇಂದು ಉಚಿತ ತರಕಾರಿ ವಿತರಣೆ ಮಾಡಲಾಯಿತು.
ನಿಖಿಲ್ ಕುಮರಾಸ್ವಾಮಿ ನೇತೃತ್ವದಲ್ಲಿ ತರಕಾರಿ ವಿತರಣೆ ಮಾಡಿದ್ದು, ಸುಮಾರು 100 ಟನ್ ತರಾಕರಿ ಹಂಚಿಕೆಯಾಗಿದೆ. ಟಿ.ದಾಸರಹಳ್ಳಿ ಶಾಸಕ ಆರ್.ಮಂಜುನಾಥ್ ಪುತ್ರ ಕಿರಣ್ ಮಂಜುನಾಥ್ ಹಂಚಿಕೆ ಮಾಡಿ ಮಾದರಿಯಾಗಿದ್ದಾರೆ. ರೈತರಿಂದ ನೇರವಾಗಿ ಕೊಂಡು ತಂದ ತರಕಾರಿಯನ್ನು ಜನರಿಗೆ ಹಂಚಿಕೆ ಮಾಡಲಾಯಿತು. ತರಕಾರಿ ವಿತರಣೆ ವೇಳೆ ಅಂತರ ಕಾಯ್ದುಕೊಳ್ಳದೆ ಜನರು ತರಕಾರಿಗೆ ಮುಗಿಬಿದ್ದ ಪ್ರಸಂಗವೂ ನಡೆಯಿತು.
Advertisement
Advertisement
ಬಳಿಕ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಇಂದು ತರಕಾರಿ ಹಂಚಿಕೆ ಕಾರ್ಯಕ್ರಮಕ್ಕೆ ನಾನೇ ಚಾಲನೆ ನೀಡಿದ್ದೇನೆ. ಇದೊಂದು ಬಡವರ ಪರವಾದ ಉತ್ತಮ ಕೆಲಸವಾಗಿದೆ. ಜೆಡಿಎಸ್ ಎಲ್ಲ ಕಾರ್ಯಕರ್ತರು ಈ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಉತ್ತಮ ಗುಣಮಟ್ಟದ ತರಕಾರಿಯನ್ನು ಖರೀದಿಸಿ ವಿತರಿಸುತ್ತಿದ್ದಾರೆ. ಶಾಸಕ ಆರ್.ಮಂಜುನಾಥ್ ಈ ಕ್ಷೇತ್ರದಲ್ಲಿ ಲಾಕ್ ಡೌನ್ ಶುರುವಾದಾಗಿನಿಂದ ಉತ್ತಮ ಕೆಲಸ ಕಾರ್ಯ ಮಾಡ್ತಿದ್ದಾರೆ. ನೂರಾರು ಜನರಿಗೆ ತರಕಾರಿ ಕೊಡೊದ್ರಿಂದ ಸಹಾಯಕವಾಗಿದೆ ಎಂದು ಇದೇ ಸಂದರ್ಭದಲ್ಲಿ ಕುಮಾರಸ್ವಾಮಿಯನ್ನು ನೆನಪಿಸಿಕೊಂಡ ನಿಖಿಲ್ ದಾಸರಹಳ್ಳಿ ಶಾಸಕರಿಗೆ ಶುಭ ಕೋರಿದರು.
Advertisement
Advertisement
ಶಾಸಕ ಆರ್.ಮಂಜುನಾಥ್ ಕೊರೊನಾ ಸಂಕಷ್ಟದಲ್ಲಿರುವ ರೈತರಿಂದ ನೇರವಾಗಿ ಖರೀದಿಸಿದ್ದೇವೆ. 116 ಟನ್ ತರಕಾರಿಗಳನ್ನು ತಂದು ಹಂಚಿಕೆ ಮಾಡ್ತಿದ್ದೇವೆ. ದಾಸರಹಳ್ಳಿ ಜನರ ಕಷ್ಟ ಕಾಲದಲ್ಲಿ ಯಾವತ್ತೂ ನಾನಿದ್ದೇನೆ 10ಕ್ಕೂ ಬಗೆಯ ತರಕಾರಿಗಳನ್ನು ತಂದು ಉಚಿತವಾಗಿ ಹಂಚುತ್ತಿದ್ದೇವೆ. ಸರ್ಕಾರದಿಂದ ಯಾವುದೇ ಸಹಾಯ ಕೂಡ ಪಡೆದಿಲ್ಲ. ನನ್ನ ಸ್ವಂತ ಖರ್ಚಿನಿಂದ ಫ್ರೆಶ್ ತರಕಾರಿಗಳನ್ನು ಹಂಚುತ್ತಿದ್ದೇವೆ ಎಂದರು.