– ಬೃಹತ್ ವಾಹನಗಳ ಸಂಚಾರಕ್ಕೆ ನಿರ್ಬಂಧ
ಬೆಂಗಳೂರು: ನಗರದ ಸುಮನಹಳ್ಳಿ ಬ್ರಿಡ್ಜ್‌ನ ಮಧ್ಯ ಭಾಗದಲ್ಲಿ ಗುಂಡಿ ಬಿದ್ದಿದ್ದು, ಕಾಮಾಕ್ಷಿ ಪಾಳ್ಯ ಸಂಚಾರ ಪೊಲೀಸರ ಸಮಯ ಪ್ರಜ್ಞೆಯಿಂದೆ ಬಹುದೊಡ್ಡ ದುರಂತ ತಪ್ಪಿದೆ.
ಬಿಡಿಎ ನಿರ್ಮಿಸಿದ್ದ ಸುಮನಹಳ್ಳಿ ಳ್ಳಿ ಬ್ರಿಡ್ಜ್ ಕಾಣಿಸಿಕೊಂಡ ಗುಂಡಿಯು ಸವಾರರು ಹಾಗೂ ಚಾಲಕರಲ್ಲಿ ಆತಂಕ ಸೃಷ್ಟಿಸಿದೆ. ಹೀಗಾಗಿ ಶುಕ್ರವಾರ ರಾತ್ರಿಯಿಂದಲೇ ಬೃಹತ್ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಗುಂಡಿ ಬಿದ್ದ ಜಾಗದ ಸುತ್ತ ಕಾಮಾಕ್ಷಿ ಸಂಚಾರ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
Advertisement
Advertisement
ಮಳೆಯ ನೀರು ಬ್ರಿಡ್ಜ್ ಮೇಲೆ ನಿಂತ ಪರಿಣಾಮ ಸುಮಾರು ಏಳೆಂಟು ಅಡಿ ಗುಂಡಿ ಬಿದ್ದಿದೆ. ಇದನ್ನು ಗಮನಿಸಿದ ಕಾಮಾಕ್ಷಿ ಪಾಳ್ಯ ಸಂಚಾರ ಪೊಲೀಸರು ಭಾರೀ ವಾಹನಗಳು ಹೋಗದಂತೆ ಎಚ್ಚರ ವಹಿಸಿದ್ದಾರೆ. ಇದರಿಂದಾಗಿ ಯಾವುದೇ ಅನಾಹುತ ಸಂಭವಿಸಿಲ್ಲ.
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಉಮೇಶ್, ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ತಾಂತ್ರಿಕವಾಗಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎರಡು ಗರ್ಡರ್ ಭೀಮ್‍ಗಳ ಮಧ್ಯೆಯಿರುವುದರಿಂದ ಬ್ರಿಡ್ಜ್ ಗೆ ಯಾವುದೇ ರೀತಿಯ ದೊಡ್ಡ ಮಟ್ಟದ ಹಾನಿಯಾಗಿಲ್ಲ. ಸೇತುವೆ ಪರಿಶೀಲನೆ ನಡೆಸಲಾಗುತ್ತದೆ. ಸುರಕ್ಷಿತ ದೃಷ್ಟಿಯಿಂದ ಸೇತುವೆಯ ಮೇಲಿನ ವಾಹನ ದಟ್ಟಣೆಯನ್ನು ಸದ್ಯಕ್ಕೆ ತಡೆಯಲಾಗಿದೆ. ಬುಧವಾರ ರಾತ್ರಿ 11 ಗಂಟೆ ಬಳಿಕ ಒನ್ ವೇ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ.