ಬೆಂಗಳೂರು: ನಗರದ ಮಹಾರಾಣಿ ವಿವಿಯ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿನಿಯೊಬ್ಬಳು ಆನ್‍ಲೈನ್ ಆಪ್‍ನಲ್ಲಿ ಹಣ ಹೂಡಿ, ನಷ್ಟಕ್ಕೆ ಒಳಗಾಗಾದ ಹಿನ್ನೆಲೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ನೇಣಿಗೆ ಶರಣಾದ ವಿದ್ಯಾರ್ಥಿನಿಯನ್ನು ಪಾವನಾ (19) ಎಂದು ಗುರುತಿಸಲಾಗಿದೆ. ಆಕೆ ಪ್ರಥಮ ವರ್ಷದ ಬಿಎಸ್ಸಿ ವ್ಯಾಸಾಂಗ ಮಾಡುತ್ತಿದ್ದಳು. ಆಕೆ ನೇಣಿಗೆ ಶರಣಾದ ರೂಮ್ ನಂಬರ್ 17ರಲ್ಲಿ ಡೆತ್‍ನೋಟ್ ಪತ್ತೆಯಾಗಿದೆ. ಅದರಲ್ಲಿ ಆನ್‍ಲೈನ್ ಆಪ್‍ನಲ್ಲಿ 15,000 ರೂ. ಹೂಡಿಕೆ ಮಾಡಿರುವುದಾಗಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: NIA ದಾಳಿ- ಶಿರಸಿಯ ಅಬ್ದುಲ್ ಶುಕ್ಕೂರ್ ಮೇಲಿದೆ ಶಿವಮೊಗ್ಗ ಸ್ಫೋಟದ ಸಂಚಿನ ಆರೋಪ
- Advertisement
ಆನ್‍ಲೈನ್‍ನಲ್ಲಿ ಹಣ ಹೂಡಿಕೆ ಮಾಡಿ ಗೇಮ್‍ನಲ್ಲಿ 15 ಸಾವಿರ ರೂ. ನಷ್ಟ ಅನುಭವಿಸಿದ್ದಾಳೆ. ಇದಕ್ಕಾಗಿ ಆಕೆ ಸ್ನೇಹಿತರ ಬಳಿ ಸಾಲಮಾಡಿದ್ದು, 10 ಸಾವಿರ ರೂ. ಹೊಂದಿಸಿದ್ದ ಯುವತಿ, ಉಳಿದ 5 ಸಾವಿರ ರೂ. ಹೊಂದಿಸಲು ಆಗದೆ ಚಿಂತೆಗೆ ಒಳಗಾಗಿದ್ದಳು. ಕೊನೆಗೆ ಸಾಲ ತೀರಸಲು ಆಗದೆ ಆತಂಕದಿಂದ ಭಾನುವಾರ ರಾತ್ರಿ ಡೆತ್‍ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.
- Advertisement
ಜೂ.16ರ ರಾತ್ರಿ 11:30ಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗುವ ವೇಳೆ ಚೇರ್ ಬಿದ್ದ ಶಬ್ದ ಕೇಳಿ ಬಂದಿತ್ತು. ಈ ವೇಳೆ ಪಕ್ಕದ ರೂಮ್‍ನ ವಿದ್ಯಾರ್ಥಿನಿಯರು ಬಂದು ನೋಡಿದಾಗ, ಆಕೆ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಪಾವನಾ ಗೆಳತಿಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಪ್ರತಿದಿನ ಸರಾಸರಿ 27 ಸೈಬರ್ ವಂಚನೆ ಪ್ರಕರಣ – 25,000 ಕೋಟಿ ರೂ. ಕಳೆದುಕೊಂಡ ಭಾರತೀಯರು