ಬೆಂಗಳೂರು: ಬೀದಿನಾಯಿಗಳಿಗೆ ವಿಷ ಬೆರೆಸಿ ಹತ್ಯೆ ಮಾಡುವುದು ಕಂಡಿದ್ದೇವೆ. ಆದರೆ ಸಿಲಿಕಾನ್ ಸಿಟಿಯ ಜಯನಗರದಲ್ಲಿ ಕಿಡಿಗೇಡಿಗಳು ಗನ್ ನಲ್ಲಿ ಶೂಟ್ ಮಾಡಿರುವುದು ಬೆಳಕಿಗೆ ಬಂದಿದೆ.
ಇಂದು ಬೆಳಗ್ಗಿನ ಜಾವ ಈ ಘಟನೆ ನಡೆದಿದೆ. ಬೀದಿ ನಾಯಿ ಬೊಗಳುತ್ತೆ ಎಂದು ಸಿಟ್ಟುಗೊಂಡ ದುಷ್ಕರ್ಮಿಗಳು ನಾಯಿ ಮೇಲೆ ಫೈರ್ ಮಾಡಿದ್ದಾರೆ. ಪರಿಣಾಮ ಎರಡು ಬುಲೆಟ್ ನಾಯಿಯ ದೇಹ ಹೊಕ್ಕಿದ್ದು ನಾಯಿ ನರಳಾಡುತ್ತಿದೆ.
ಸದ್ಯ ನಾಯಿಯನ್ನು ರಕ್ಷಣಾ ತಂಡದ ಪ್ರವೀಣ್ ಆಸ್ಪತ್ರೆಗೆ ಸೇರಿಸಿದ್ದಾರೆ. ವಿಷ ಬೆರೆಸಿ ನಾಯಿಯನ್ನು ಕೊಲ್ಲುತ್ತಾರೆ. ಆದರೆ ಈಗ ಈ ರೀತಿ ಗನ್ ನಲ್ಲಿ ಶೂಟ್ ಮಾಡಿ ನಾಯಿಯನ್ನು ಕೊಲ್ಲಲು ಯತ್ನಿಸಿರುವುದು ಶ್ವಾನಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.