ಬೆಂಗಳೂರು: ನಗರದ ಅತಿಹೆಚ್ಚು ತೆರಿಗೆ ನೀಡೋ ಏರಿಯಾ ಎಲೆಕ್ಟ್ರಿಕಲ್, ಹಾರ್ಡ್‍ವೇರ್‌ಗೆ ಸಂಬಂಧಪಟ್ಟ ಪ್ರತಿಯೊಂದು ವಸ್ತುಗಳು ಸಿಗುವ ಎಸ್‍ಪಿ ರೋಡ್ (SP Road Bengaluru() ಡಿಸೆಂಬರ್ 13ಕ್ಕೆ ಬಂದ್ (Bandh) ಆಗಲಿದೆ.
Advertisement
ಬೆಂಗಳೂರಿನ (Bengaluru) ಇತಿಹಾಸದಲ್ಲೇ ಫಸ್ಟ್ ಟೈಮ್ ವಾಹನಗಳ ಬಿಡಿಭಾಗ ಖರೀದಿಗೆ ಇರುವ ಹಾಟ್‍ಸ್ಪಾಟ್ ನಗರದ ಎಸ್‍ಪಿ ರೋಡ್ ಬಂದ್ ಆಗಲಿದೆ. ಅದು ವ್ಯಾಪಾರ ಡಲ್, ವ್ಯಾಪಾರ ಆಗ್ತಿಲ್ಲ ಅಂತಲ್ಲ, ಬದಲಿಗೆ ಪ್ರತಿಭಟಿಸಲು. ಡಿಸೆಂಬರ್ 13ಕ್ಕೆ ಎಸ್‍ಪಿ ರೋಡ್ ಸಂಪೂರ್ಣ ಸ್ತಬ್ಧವಾಗಲಿದೆ. ಅಂದು ಹಾರ್ಡ್‍ವೇರ್, ಎಲೆಕ್ಟ್ರಿಕಲ್ ಸೇರಿ ಪ್ರತಿಯೊಂದು ಆರ್ಥಿಕ ಚಟುವಟಿಕೆಗಳನ್ನು ಬಂದ್ ಮಾಡಿ, ವಿಧಾನಸೌಧದತ್ತ (Vidhana Soudha) ಮೆರವಣಿಗೆ ಮಾಡಲಿದ್ದಾರೆ ಸಾವಿರಾರು ವರ್ತಕರು. ಜಲಮಂಡಳಿಯ ಚರಂಡಿ ನೀರು ಅಂಗಡಿಗಳ ಒಳಗೆ ನುಗ್ಗಿ ವ್ಯಾಪಾರಕ್ಕೆ ತೊಡಕಾಗಿದೆ. ಕಳೆದ ಮೂರು ವರ್ಷಗಳಿಂದ ಚರಂಡಿಯ ದುರ್ನಾತಕ್ಕೆ ಅಂಗಡಿಗಳಿಗೆ ಗ್ರಾಹಕರೇ ಬರ್ತಿಲ್ಲವಂತೆ. ಬಿಬಿಎಂಪಿ (BBMP) ಕಮಿಷನರ್ ಗಮನಕ್ಕೆ ತಂದ್ರೂ ಪ್ರಯೋಜನವಾಗಿಲ್ಲವಂತೆ. ಹೀಗಾಗಿ ಸರ್ಕಾರದ ಗಮನ ಸೆಳೆಯಲು ಎಸ್‍ಪಿರೋಡ್ ಬಂದ್ ಮಾಡಿ, ವಿಧಾನಸೌಧಕ್ಕೆ ವರ್ತಕರು ಮೆರವಣಿಗೆ ಮಾಡಲಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಡ್ರಗ್ಸ್ ಸೇವನೆ ಆರೋಪ – NCB ಅಧಿಕಾರಿಗಳಿಂದ 3 ಯುವತಿಯರು ವಶಕ್ಕೆ
Advertisement
Advertisement
ಕೆ.ಆರ್ ಮಾರ್ಕೆಟ್‍ನಿಂದ (K.R Market) ಟೌನ್‍ಹಾಲ್ ಕಡೆ ಬರುವ ಎಸ್‍ಪಿ ರಸ್ತೆಯಲ್ಲಿ, ಜಲಮಂಡಳಿಯ ಒಳಚರಂಡಿ ಒಡೆದು ಹೋಗಿದೆ. ಇದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಧರ್ಮರಾಯ ವಾರ್ಡ್‍ನ ರಸ್ತೆ, ಚರಂಡಿಯ ಕಲುಷಿತ ನೀರು, ಅಂಗಡಿಗಳಿಗೆ ನುಗ್ಗುತ್ತೆ. ಇದ್ರಿಂದ ಗಬ್ಬುವಾಸನೆ ಬರ್ತಿದೆ. ಚರಂಡಿಯ ನೀರು, ಅಂಗಡಿ ಮಳಿಗೆ, ರಸ್ತೆಯ ತುಂಬೆಲ್ಲಾ ನಿಂತಿರೋದ್ರಿಂದ ವ್ಯಾಪಾರಸ್ಥರು ಅಂಗಡಿಗಳಿಗೆ ಬರೋಕೆ ಆಗ್ತಿಲ್ಲ. ಪ್ರತಿನಿತ್ಯ ಲಕ್ಷಾಂತರ ವ್ಯಾಪಾರ ವಹಿವಾಟು ಆಗ್ತಿದ್ದ ನಮಗೆ, ಇದೀಗಾ ವ್ಯಾಪಾರವಿಲ್ಲದೇ ಆರ್ಥಿಕವಾಗಿ ನಷ್ಟಕ್ಕೆ ಒಳಗಾಗಿದ್ದೇವೆ. ಕ್ಷೇತ್ರದ ಶಾಸಕರನ್ನು ಕೇಳಿದ್ರೆ ನಮಗೆ ನೀವು ವೋಟ್ ಹಾಕಿಲ್ಲ ಅಂತಾರೆ ಅಂತ ಆಕ್ರೋಶ ಹೊರಹಾಕ್ತಿದ್ದಾರೆ. ಇದನ್ನೂ ಓದಿ: ಮತ್ತೆ ಪುಂಡಾಟ ಮೆರೆದ ಮರಾಠಿಗರು – ಬೆಳಗಾವಿಯಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ
Advertisement
ಈ ರಸ್ತೆಯ ಪಕ್ಕದಲ್ಲೇ ಪಾರ್ಕ್ ಇದ್ದು ಅದ್ವಾನಗೊಂಡಿದೆ. ಫುಟ್‍ಪಾತ್ ಮೇಲೆನೇ ಜನ ಮೂತ್ರ ವಿಸರ್ಜನೆ ಮಾಡ್ತಾರೆ. ಪಾದಾಚಾರಿಗಳ ಉಪಯೋಗಕ್ಕೂ ಈ ಫುಟ್‍ಪಾತ್ ಬಳಕೆಯಾಗ್ತಿಲ್ಲ. ಅಂಗಡಿಗಳ ಮುಂದಿರುವ ಚರಂಡಿಗಳಲ್ಲಿ ಹಲವು ವರ್ಷಗಳಿಂದ ಹೂಳನ್ನು ತೆಗೆಯದೇ ಇರೋದ್ರಿಂದ ಅಲ್ಪ ಮಳೆಯಾದ್ರೂ ಮೋರಿ ಉಕ್ಕಿ ಹರಿಯುತ್ತೆ. ಈ ಬಗ್ಗೆ ಗಮನ ಹರಿಸಿ ಪರಿಹಾರ ಮಾಡಿಕೊಡಬೇಕೆಂದು ವರ್ತಕರು ಸೇರಿದಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.