ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಶುಕ್ರವಾರ ಒಂದೇ ದಿನ 19 ಮಂದಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ. ಶುಕ್ರವಾರ ಪತ್ತೆಯಾದ ಎರಡು ಪ್ರಕರಣಗಳು ಬೆಂಗಳೂರು ದಕ್ಷಿಣದ ಜನರಲ್ಲಿ ಆತಂಕವನ್ನ ಹೆಚ್ಚು ಮಾಡಿವೆ. ರೋಗಿ ನಂಬರ್ 465 ಮತ್ತು 466 ಇಬ್ಬರು ಸೋಂಕಿತರಿಗೆ ಕೊರೊನಾ ಹೇಗೆ ತಗುಲಿದೆ ಎಂಬುವುದೇ ಗೊತ್ತಾಗುತ್ತಿಲ್ಲ.
Advertisement
ರೋಗಿ ನಂಬರ್ 465: 45 ವರ್ಷದ ಹಂಪಿ ನಗರದ ನಿವಾಸಿಯಾಗಿರುವ ಮಹಿಳೆ ವಿದೇಶ ಪ್ರಯಾಣ ಬೆಳೆಸಿಲ್ಲ ಮತ್ತು ಯಾವ ಸೋಂಕಿತರ ಸಂಪರ್ಕದಲ್ಲಿಯೂ ಬಂದಿಲ್ಲ. ಕಳೆದ 15 ದಿನಗಳಿಂದ ಮಹಿಳೆಗೆ ಶೀತ, ಜ್ವರ ಮತ್ತು ನ್ಯುಮೋನಿಯಾ ಲಕ್ಷಣಗಳು ಕಂಡು ಬಂದಿದ್ದವು. ವೈದ್ಯಕೀಯ ಪರೀಕ್ಷೆ ನಡೆಸಿದಾಗ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಮಹಿಳೆಯನ್ನು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಐಸೋಲೇಶನ್ ಮಾಡಲಾಗ್ತಿದೆ.
Advertisement
Advertisement
ರೋಗಿ ನಂಬರ್ 466: 50 ವರ್ಷದ ತಿಲಕ್ ನಗರದ ನಿವಾಸಿಯಾಗಿರುವ ವ್ಯಕ್ತಿ ವಿದೇಶ ಪ್ರಯಾಣ ಬೆಳೆಸಿಲ್ಲ ಮತ್ತು ಯಾವ ಸೋಂಕಿತರ ಸಂಪರ್ಕದಲ್ಲಿಯೂ ಬಂದಿಲ್ಲ. ಡಯಾಲಿಸಿಸ್ ನಿಂದ ಬಳಲುತ್ತಿರುವ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರೋದು ಶುಕ್ರವಾರ ದೃಢಪಟ್ಟಿದೆ.
Advertisement
ಇಬ್ಬರಿಗೆ ಸೋಂಕು ಹೇಗೆ ತಗುಲಿದೆ ಎಂಬುದರ ಬಗ್ಗೆ ಆರೋಗ್ಯಾಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ. ಈಗಾಗಲೇ ಹೊಂಗಸಂದ್ರ ಬಿಹಾರ ಮೂಲದ ಕಾರ್ಮಿಕನಿಂದ ಕೊರೊನಾ ವ್ಯಾಪಕವಾಗಿ ಹಬ್ಬಿದೆ. ಈ ನಡುವೆ ಈ ಎರಡು ಪ್ರಕರಣಗಳು ಹೆಚ್ಚು ಆತಂಕವುನ್ನುಂಟು ಮಾಡಿವೆ.