Bengaluru City
ಸ್ಮಾರ್ಟ್ ಸಿಟಿ ಅನುದಾನ ಅನ್ಯಬಳಕೆ ಸಿಬಿಐ ತನಿಖೆಗೆ ಆಗ್ರಹ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ನೀಡಿದ್ದ ಅನುದಾನದಲ್ಲಿ 154 ಕೋಟಿ ರುಪಾಯಿ ಕಾನೂನು ಬಾಹಿರವಾಗಿ ಬಳಕೆಯಾಗಿದೆ. ಈ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರ ಎಸಿಬಿ ತನಿಖೆಗೆ ವಹಿಸಿದ್ದು ಸರಿಯಲ್ಲ ಸಿಬಿಐ ತನಿಖೆಗೆ ನೀಡಬೇಕು ಎಂದು ಪ್ರಧಾನಿ ಮೋದಿ ಕರೆಗೆ ಪತ್ರ ಬರೆದಿದ್ದ ಅಮರೇಶ್ ತಿಳಿಸಿದರು.
154 ಕೋಟಿ ರೂಪಾಯಿಯನ್ನು ಅನ್ಯ ಉದ್ದೇಶಕ್ಕೆ ಬಳಸಲಾಗಿದೆ. 16-17 ನೇ ಸಾಲಿನ ಅನುದಾನದಲ್ಲಿ ಕೇವಲ ಶೇಕಡಾ ಇಪ್ಪತ್ತರಷ್ಟು ಸರಿಯಾದ ಕಾಮಗಾರಿಗೆ ಬಳಕೆಯಾಗಿಲ್ಲ. ಪಾಲಿಕೆ ವ್ಯಾಪ್ತಿ ಬಿಟ್ಟು ಬೇರೆ ಯೋಜನೆಗಳಿಗೆ ಖರ್ಚು ಮಾಡಲಾಗಿದೆ. ಅಂಬೇಡ್ಕರ್ ಭವನ, ಕಸಾಯಿಖಾನೆಗೆಲ್ಲ ಬಳಕೆಯಾಗಿದೆ.
ಈ ಬಗ್ಗೆ ಪ್ರಧಾನಮಂತ್ರಿಗಳ ಕಚೇರಿಯಿಂದಲೂ ಪತ್ರ ಬಂದಿತ್ತು, ಈಗ ಸರ್ಕಾರ ಇದರ ತನಿಖೆ ಎಸಿಬಿಗೆ ಕೊಟ್ಟಿದೆ. ಆದರೆ ಕೇಂದ್ರ ಸರ್ಕಾರದ ಅನುದಾನ ಆಗಿರೋದ್ರಿಂದ ಎಸಿಬಿ ತನಿಖೆ ಆಗೋದಿಲ್ಲ ಸಿಬಿಐ ತನಿಖೆಗೆ ವಹಿಸಬೇಕು. ರಾಜ್ಯ ಸರ್ಕಾರದ ಎಸಿಬಿಗೆ ಕೊಟ್ಟರೆ ಎಷ್ಟರ ಮಟ್ಟಿಗೆ ನ್ಯಾಯ ಸಿಗಬಹುದು ಎಂಬ ಅನುಮಾನ ಇದೆ ಅಮರೇಶ್ ಅನುಮಾನ ವ್ಯಕ್ತಪಡಿಸಿದರು.
