ಬೆಂಗಳೂರು: ವಿಧಾನಸಭೆಯಲ್ಲಿ ಪದವಿ ಕಾಲೇಜುಗಳಲ್ಲಿ ಡ್ರೆಸ್ ಕೋಡ್ ವಿಚಾರವನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದ್ರು. ಚಾಮರಾಜನಗರದಲ್ಲಿ ನಿನ್ನೆ ಅಶ್ವಥ್ ನಾರಾಯಣ್ ಡಿಗ್ರಿ ಕಾಲೇಜ್‍ಗಳಲ್ಲಿ ಸಮವಸ್ತ್ರ ಕಡ್ಡಾಯ ಅಲ್ಲ ಅಂತ ಹೇಳಿದ್ದಾರೆ. ಈ ಬಗ್ಗೆ ಸಿಎಂ ಸ್ಪಷ್ಟನೆ ಕೊಡ್ಬೇಕು. ಅದಕ್ಕೆ ಬದ್ಧರಾಗಿರಬೇಕು ಅಂದ್ರು.
Advertisement
ಸಿಎಂ ಬೊಮ್ಮಾಯಿ ಉತ್ತರಿಸಿ, ಎಲ್ಲಿ ಡ್ರೆಸ್ ಕೋಡ್ ಇದೆ. ಅಲ್ಲಿ ನಿಯಮ ಫಾಲೋ ಮಾಡಿ ಅಂತ ಹೈಕೋರ್ಟ್ ಆದೇಶವೂ ಸ್ಪಷ್ಟವಾಗಿದೆ. ಉನ್ನತ ಶಿಕ್ಷಣ ಸಚಿವರು ಕ್ಲಿಯರ್ ಆಗಿ ಹೇಳಿದ್ದಾರೆ. ಅದಕ್ಕೆ ಮತ್ತೆ ಸ್ಪಷ್ಟೀಕರಣ ಅಗತ್ಯ ಇಲ್ಲ ಅಂದ್ರು. ಸಚಿವರು ಹೇಳಿದ್ದು ಸರಿ, ನೀವು ಸ್ಪಷ್ಟನೆ ಕೊಡಿ ಅಂತ ಸಿದ್ದರಾಮಯ್ಯ ಕೇಳಿದ್ರು. ಸಚಿವರೇ ಹೇಳಿದ್ಮೇಲೆ ನನ್ನ ಸ್ಪಷ್ಟನೆ ಅನಗತ್ಯ ಅಂತ ಸಿಎಂ ಉತ್ತರಿಸಿದ್ರು.
Advertisement
Advertisement
ಇತ್ತ ಸದನದಲ್ಲಿ ಕಾಂಗ್ರೆಸ್ ಸದಸ್ಯರು ನಡೆದುಕೊಂಡ ರೀತಿ ಸರಿಯಲ್ಲ ಅಂತ ಸಿಎಂ ಬೊಮ್ಮಾಯಿ ಕಿಡಿಕಾರಿದ್ದಾರೆ. ರಾಷ್ಟ್ರಧ್ವಜವನ್ನು ರಾಜಕೀಯ ತೆವಲಿಗೆ ದುರ್ಬಳಕೆ ಮಾಡಿಕೊಳ್ತಿದ್ದಾರೆ. ಕಾನೂನಾತ್ಮಕವಾಗಿ ಈಶ್ವರಪ್ಪನವರು ಮಾತನಾಡಿರುವುದರಲ್ಲಿ ತಪ್ಪಿಲ್ಲ ಅಂದ್ರು. ಈಶ್ವರಪ್ಪ ಮಾತಾಡಿ, ನಾನು ಭಗವಾಧ್ವಜ ಹಾರಿಸಿದ್ದೇನೆ ಅಂತ ಹೇಳಿದ್ದರೆ ಈಗಲೇ ರಾಜೀನಾಮೆ ಕೊಡುತ್ತೇನೆ ಅಂದ್ರು.
Advertisement
ಘಟನೆ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ-ಡಿಕೆಶಿ, ಈಶ್ವರಪ್ಪ ಅವರನ್ನು ಅಮಾನತು ಮಾಡದಿದ್ದರೆ ನಾಳೆ ಬೆಳಗ್ಗೆ 11 ಗಂಟೆಗೆ ಅಹೋರಾತ್ರಿ ಧರಣಿ ಬಗ್ಗೆ ತೀರ್ಮಾನ ಮಾಡ್ತೇವೆ. ಇನ್ನು, ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಯಾವ ಪುರುಷಾರ್ಥಕ್ಕೆ ಧರಣಿ ಮಾಡ್ತಿದ್ದಾರೆ. ಓಟ್‍ಗಾಗಿ 2 ರಾಷ್ಟ್ರೀಯ ಪಕ್ಷಗಳು ರಾಜ್ಯವನ್ನೇ ಹಾಳು ಮಾಡಲು ಹೊರಟಿವೆ ಅಂತ ವಾಗ್ದಾಳಿ ನಡೆಸಿದ್ರು.