ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಜಿ ಸಿಎಂ ಕುಮಾರಸ್ವಾಮಿಗೆ ನೀಡಿದ್ದ ಭದ್ರತೆಯನ್ನು ಸೋಮವಾರ ಬೆಳಗ್ಗೆ ಏಕಾಏಕಿ ಕಡಿತ ಮಾಡಲಾಗಿತ್ತು. ಇಬ್ಬರಿಗೂ ನೀಡಿದ್ದ ಭದ್ರತೆಯಲ್ಲಿ ಪೈಲಟ್ ವಾಪಸ್ ಪಡೆದ ಸರ್ಕಾರ ಇಬ್ಬರು ನಾಯಕರಿಗೂ ಅನಿರೀಕ್ಷಿತ ಶಾಕ್ ನೀಡಿತ್ತು.
ಕೇವಲ ಎಸ್ಕಾರ್ಟ್ ಮಾತ್ರ ನೀಡಿರುವ ಸರ್ಕಾರ. ನಿನ್ನೆ ಬೆಳಗ್ಗಿನಿಂದ ಏಕಾಏಕಿ ಪೈಲಟ್ ವಾಹನ ಸೇವೆ ವಾಪಸ್ ಪಡೆದಿದ್ದ ಗೃಹ ಇಲಾಖೆ ಇಂದು ಬೆಳಗ್ಗೆ ಪುನಃ ಪೈಲಟ್ ಸೇವೆ ಮುಂದುವರಿಸಿದೆ.
Advertisement
Advertisement
ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಇಬ್ಬರಿಗೂ ವಿವಿಐಪಿ ಭದ್ರತೆ ದೃಷ್ಟಿಯಿಂದ ಪೈಲಟ್ ಹಾಗೂ ಎಸ್ಕಾರ್ಟ್ ಸೇವೆ ನೀಡಲಾಗುತ್ತೆ. ಆದರೆ ಯಾವುದೇ ಕಾರಣ ನೀಡದೆ ನಿನ್ನೆ ಬೆಳಗ್ಗಿಂದ ಪೈಲಟ್ ವಾಹನಗಳು ವಾಪಸ್ ಪಡೆದಿದ್ದರು. ಇದರಿಂದ ಅಸಮಧಾನಗೊಂಡ ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದರು.
Advertisement
ಆಯಾ ನಾಯಕರುಗಳು ಹೋಗುವ ಸ್ಥಳ ಹಾಗೂ ಸೇರುವ ಜನರಿಗೆ ಅನುಗುಣವಾಗಿ ಅವರ ಭದ್ರತೆಯ ಪ್ರಮಾಣ ನಿರ್ಧಾರವಾಗುತ್ತದೆ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಇಬ್ಬರಿಗೂ ಅತೀ ಹೆಚ್ಚು ಜನ ಸೇರುವುದರಿಂದ ಅವರಿಗೆ ವಿವಿಐಪಿ ಭದ್ರತೆ ಎಸ್ಕಾರ್ಟ್ ಹಾಗೂ ಪೈಲಟ್ ಸೇವೆ ನೀಡಲಾಗುತ್ತಿತ್ತು. ಸಿಎಂಗೆ ಪತ್ರ ಬರೆದು ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ಸಿಎಂ ಗೃಹ ಸಚಿವರಿಗೆ ಇದರ ಬಗ್ಗೆ ಗಮನ ಹರಿಸುವಂತೆ ಸೂಚಿಸಿದ್ದರು. ಇದರಿಂದ ಎಚ್ಚೆತ್ತ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಇಂದು ಬೆಳಗ್ಗಿನಿಂದ ಮತ್ತೆ ಪೈಲಟ್ ಸೇವೆಯನ್ನ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಒಬ್ಬರಿಗೂ ಮುಂದುವರಿಸುವಂತೆ ಸೂಚಿಸಿದ್ದಾರೆ.