ಬೆಂಗಳೂರು: ಉಪ ಚುನಾವಣೆಯಲ್ಲಿ ಸೋಲಾಗುತ್ತಿದ್ದಂತೆಯೇ ರಾಜೀನಾಮೆ ಕೊಟ್ಟಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಗೆ ಢವ ಢವ ಶುರುವಾಗಿದೆ.
ಸಿಎಲ್ ಪಿ ಹಾಗೂ ವಿಪಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೈ ಕಮಾಂಡ್ ಈ ರಾಜೀನಾಮೆಯನ್ನ ಅಂಗೀಕರಿಸಲ್ಲ ಅಂತಲೇ ಕೈ ನಾಯಕರ ನಿರೀಕ್ಷೆಯಾಗಿತ್ತು. ಆದರೆ ದೆಹಲಿ ವಲಯದಲ್ಲಿ ಕೇಳಿಬರುತ್ತಿರುವ ಮಾತು ಉಭಯ ನಾಯಕರ ನೆಮ್ಮದಿ ಕೆಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ರಾಜ್ಯದ ಬಹುತೇಕ ನಾಯಕರು ರಾಜೀನಾಮೆ ಅಂಗೀಕರಿಸಿ ಹೊಸಬರಿಗೆ ಅವಕಾಶ ನೀಡುವಂತೆ ಒತ್ತಡ ಹೇರತೊಡಗಿದ್ದಾರೆ. ಇದನ್ನು ಹೈಕಮಾಂಡ್ ಕೂಡ ಗಂಭೀರವಾಗಿ ಪರಿಗಣಿಸಿದ್ದು, ಇಬ್ಬರ ರಾಜೀನಾಮೆ ಅಂಗೀಕರಿಸುವುದರ ಸಾಧಕ-ಭಾದಕಗಳ ಬಗ್ಗೆ ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹಿಸುತ್ತಿದೆ. ಇದನ್ನೂ ಓದಿ: ಸಿಎಲ್‍ಪಿ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ
Advertisement
ಹೈ ಕಮಾಂಡ್ ಗಟ್ಟಿ ನಿರ್ಧಾರ ಮಾಡಿ ಇಬ್ಬರ ರಾಜೀನಾಮೆ ಅಂಗೀಕರಿಸಿದರೆ ದಿನೇಶ್ ಗುಂಡೂರಾವ್, ಮಾಜಿ ಆಗೋ ಜೊತೆಗೆ ಸಿದ್ದರಾಮಯ್ಯ ಸಹ ವಿಪಕ್ಷ ನಾಯಕನ ಸ್ಥಾನ ಹಾಗೂ ಸಿಎಲ್ ಪಿ ನಾಯಕನ ಸ್ಥಾನದಿಂದ ವಂಚಿತರಾಗೋದು ಗ್ಯಾರಂಟಿಯಾಗಿದೆ. ಒಟ್ಟಿನಲ್ಲಿ ದೆಹಲಿ ಅಂಗಳದ ಈ ಎಲ್ಲಾ ಬೆಳವಣಿಗೆ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ನೆಮ್ಮದಿ ಕೆಡಿಸಿರುವುದು ಸುಳ್ಳಲ್ಲ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ