ಬೆಂಗಳೂರು: ಮಾಲ್ ಗಳಲ್ಲಿ ಶಾಪಿಂಗ್ ಮುಗಿದ ಮೇಲೆ ಮೊಬೈಲ್ ನಂಬರ್, ಇ ಮೇಲ್ ಐಡಿ ಕೊಡೋದು ಸರ್ವೇ ಸಾಮಾನ್ಯ. ಹಾಗಾದರೆ ನೀವು ಈ ಸುದ್ದಿ ಓದಲೇಬೇಕು.
ಡಿಸ್ಕೌಂಟ್ ಆಫರ್ ಇದ್ದಾಗ ಮೆಸೇಜ್ ಕಳಿಸ್ತೀವಿ ನಂಬರ್ ಕೊಟ್ಟು ಹೋಗಿ ಸರ್, ನಂಬರ್ ಕೊಡಿ ಮೇಡಮ್ ಅಂದರೆ ಇನ್ಮುಂದೆ ಹುಷಾರಾಗಿರಿ. ಯಾಕಂದ್ರೆ ನೀವು ಕೊಡುವ ನಂಬರ್ ಸೈಬರ್ ಕ್ರೈಂ ಗೆ ದಾರಿ ಕೊಟ್ಟ ಹಾಗೆ. ನೀವು ಮಾಲ್ ಗಳಲ್ಲಿ ಕೊಟ್ಟ ನಂಬರ್ ಪಡೆಯುವ ಸೈಬರ್ ವಂಚಕರು, ಡಿಫರೆಂಟ್ ರೀಸನ್ ಹೇಳಿ ನಿಮ್ಮ ಅಕೌಂಟ್ ನಲ್ಲಿರೊ ಹಣ ಲಪಟಾಯಿಸೋದು ಗ್ಯಾರೆಂಟಿ.
Advertisement
— Bhaskar Rao (@Nimmabhaskar22) December 15, 2019
Advertisement
ಹೀಗಾಗಿ ಇನ್ಮುಂದೆ ಶಾಪಿಂಗ್ ಮಾಲ್ ಗಳಲ್ಲಿ ಮೊಬೈಲ್ ನಂಬರ್ ಶೇರ್ ಮಾಡಬೇಡಿ ಎಂದು ಬೆಂಗಳೂರು ಪೊಲೀಸ್ ಆಯುಕ್ತರು ಟ್ವೀಟ್ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡ್ಕೊಂಡಿದ್ದಾರೆ. ಮಾಲ್ ಗಳಲ್ಲಿ ನಂಬರ್ ಕೇಳಿದರೆ ಕೊಡಬೇಡಿ ನಿಮ್ಮ ಡೇಟಾ ಸೇಲ್ ಆಗುತ್ತೆ. ಸೈಬರ್ ವಂಚನೆಗೆ ಬಾಗಿಲು ನೀವೇ ತೆರೆದಂತಾಗುತ್ತೆ ಎಂದು ಕಮೀಷನರ್ ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದಾರೆ. ಇನ್ಮುಂದೆ ಯಾವುದೇ ಸ್ಥಳಗಳಲ್ಲಿ ಮೊಬೈಲ್ ನಂಬರ್ ಶೇರ್ ಮಾಡೊ ಮುನ್ನ ಸಾವಿರ ಬಾರಿ ಯೋಚಿಸಿ.