ಬೆಂಗಳೂರು: ಗ್ರೀಸ್ ದೇಶಕ್ಕೆ ಹನಿಮೂನಿಗೆ ತೆರಳಿದ ಬೆಂಗಳೂರಿನ ದಂಪತಿ ಪೈಕಿ ಪತಿಗೆ ಕೊರೊನಾ ವೈರಸ್ ತಗುಲಿದೆ. ಈ ಮೂಲಕ ಕರ್ನಾಟಕದಲ್ಲಿ 4 ಇದ್ದ ಕೊರೊನಾ ಪಾಸಿಟಿವ್ ಕೇಸ್ ಇಂದು 5ಕ್ಕೇರಿದೆ.
ಗ್ರೀಸ್‍ನಿಂದ ಬೆಂಗಳೂರಿಗೆ ಬಂದ 26 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಸದ್ಯ ಜಯನಗರ ಸರ್ಕಾರಿ ಆಸ್ಪತ್ರೆಯ ಐಸೋಲೇಷನ್ ವಾರ್ಡಿನಲ್ಲಿ ವ್ಯಕ್ತಿಯನ್ನು ದಾಖಲಿಸಲಾಗಿದ್ದು, ಕಿತ್ಸೆ ನೀಡಲಾಗ್ತಿದ್ದು, ವ್ಯಕ್ತಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ವ್ಯಕ್ತಿಯ ಸಂಪರ್ಕದಲ್ಲಿದ್ದವರಿಗೆ ಮನೆಯಲ್ಲೇ ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗ್ತಿದೆ.
Advertisement
Advertisement
ಫೆಬ್ರವರಿ 23ರಂದು ದಂಪತಿ ಹನಿಮೂನ್‍ಗೆಂದು ಗ್ರೀಸ್‍ಗೆ ತೆರಳಿದ್ದರು. ಮಾರ್ಚ್ 6ರಂದು ಮುಂಬೈಗೆ ಈ ದಂಪತಿ ವಾಪಸ್ ಆಗಿದ್ದರು. ಮಾರ್ಚ್ 8ರಂದು ಬೆಂಗಳೂರಿಗೆ ಪತಿ ಒಬ್ಬನೇ ಬಂದಿದ್ದಾನೆ. ಪತ್ನಿ ಮುಂಬೈನಿಂದ ನೇರವಾಗಿ ಆಗ್ರಾಗೆ ತೆರಳಿದ್ದಾಳೆ. ಈ ವಿಚಾರವನ್ನು ಅಲ್ಲಿ ಉತ್ತರ ಪ್ರದೇಶ ಸರ್ಕಾರದ ಜೊತೆ ಮಾಹಿತಿಯನ್ನು ರಾಜ್ಯ ಸರ್ಕಾರ ಹಂಚಿಕೊಂಡಿದೆ.
Advertisement
Advertisement
ಮಾರ್ಚ್ 9ರಂದು ಕಚೇರಿಗೆ ಸೋಂಕಿತ ವ್ಯಕ್ತಿ ಕಚೇರಿಗೆ ಹೋಗಿದ್ದ. ಕಚೇರಿಯಲ್ಲಿ 154 ಉದ್ಯೋಗಿಗಳಿದ್ದರೂ, ನಾಲ್ವರ ಜೊತೆ ಮಾತ್ರ ಸಂಪರ್ಕದಲ್ಲಿದ್ದ. ಮಾರ್ಚ್ 10 ರಂದು ಸಂಕಿತ ವ್ಯಕ್ತಿಗೆ ಅನಾರೋಗ್ಯ ಕಂಡು ಬಂದಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಸೋಂಕಿತನ ತಂದೆ, ತಾಯಿ, ಸಹೋದರ ಸೇರಿ 7 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಸೋಂಕಿತ ಪಯಣಿಸಿದ್ದ ಇಂಡಿಗೋ ವಿಮಾನದ ಸಹ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲು ಸಿದ್ಧತೆ ನಡೆದಿದೆ. ಬೆಂಗಳೂರಿನಲ್ಲಿ ರಿಕ್ಷಾದಲ್ಲಿ ಸೋಂಕಿತ ವ್ಯಕ್ತಿ ಸಂಚರಿಸಿದ್ದು ರಿಕ್ಷಾ ಚಾಲಕನ ಮನೆಯಲ್ಲಿ ಮೂವರು ಸದಸ್ಯರಿದ್ದಾರೆ.
ಇವತ್ತು ಫ್ರಾನ್ಸಿನಿಂದ ಬೆಂಗಳೂರಿಗೆ ಬಂದಿದ್ದ ಮಹಿಳೆಯೊಬ್ಬರಿಗೆ ಸೋಂಕು ಶಂಕೆ ಹಿನ್ನೆಲೆಯಲ್ಲಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಬೆಂಗಳೂರಿನ 12 ಮಂದಿ, ಹಾಸನದಲ್ಲಿ ಇಬ್ಬರು ಮತ್ತು ದಕ್ಷಿಣ ಕನ್ನಡದಲ್ಲಿ ಮೂವರು ಮತ್ತು ಬಳ್ಳಾರಿಯಲ್ಲಿ ಒಬ್ಬರ ಮೇಲೆ ನಿಗಾ ಇಡಲಾಗಿದೆ.