– ಹೆಚ್‌ಎಎಲ್ ಆರಂಭಕ್ಕೆ ಬಿಐಎಎಲ್ ಅನುಮತಿ ಬೇಕು
ನವದೆಹಲಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ(KIA) 25 ವರ್ಷ ಪೂರ್ಣಗೊಳ್ಳುವ ಮುನ್ನ ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ (Bengaluru Airport) ಆರಂಭವಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಬೆಂಗಳೂರು ಕೇಂದ್ರ ಲೋಕಸಭಾ ಸಂಸದ ಪಿಸಿ ಮೋಹನ್ (PC Mohan) ಹೆಚ್‌ಎಎಲ್ ವಿಮಾನ ನಿಲ್ದಾಣ (HAL Airport) ಪುನಾರಂಭ ಮತ್ತು ಎರಡನೇ ವಿಮಾನ ನಿಲ್ದಾಣ ಆರಂಭ ಸಂಬಂಧ ಸ್ಥಳ ಪರಿಶೀಲನೆ ವರದಿ ಏನಾಯ್ತು ಎಂದು ಪ್ರಶ್ನೆ ಕೇಳಿದ್ದರು.
ಈ ಪ್ರಶ್ನೆಗೆ ನಾಗರಿಕ ವಿಮಾನಯಾನ ರಾಜ್ಯ ಖಾತೆ ಸಚಿವ ಮುರುಳೀಧರ್ 3 ಸ್ಥಳಗಳ ಬಗ್ಗೆ ಅಧ್ಯಯನ ನಡೆದಿದೆ. ಆದರೆ ಕೇಂದ್ರ ಸರ್ಕಾರದ ನೀತಿಯಡಿಯಲ್ಲಿ ಯಾವುದೇ ಪ್ರಸ್ತಾವನೆಯನ್ನು ಸ್ವೀಕರಿಸಿಲ್ಲ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಗಡಿಯಿಂದ 19 ಕಿ.ಮೀ ದೂರದಲ್ಲಿ ನಿರ್ಮಾಣವಾಗಲಿದೆ ಹೊಸೂರು ವಿಮಾನ ನಿಲ್ದಾಣ!
Civil Aviation Ministry answers my Lok Sabha question. AAI studied three sites for a second Bengaluru airport and submitted its report, but Karnataka Govt never followed up. Meanwhile, the GoI–BIAL pact bars any airport within 150 km of KIA for 25 years, including HAL. pic.twitter.com/sum9psDIHx
— P C Mohan (@PCMohanMP) December 18, 2025
ಕೇಂದ್ರ ಸರ್ಕಾರ ಹೇಳಿದ್ದೇನು?
ಎರಡನೇ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರದ ಮನವಿಯ ಮೇರೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಮೂರು ಸ್ಥಳಗಳ ಪೂರ್ವ ಕಾರ್ಯಸಾಧ್ಯತಾ ಅಧ್ಯಯನಗಳನ್ನು ನಡೆಸಿತ್ತು. ಈ ಅಧ್ಯಯನ ವರದಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. ಆ ಬಳಿಕ ಯಾವುದೇ ಪ್ರಸ್ತಾವ ಬಂದಿಲ್ಲ.
2008ರಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (BIAL) ಮತ್ತು ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದವು. ಈ ಒಪ್ಪಂದದ ಅನ್ವಯ ಬೆಂಗಳೂರು ವಿಮಾನ ನಿಲ್ದಾಣಕ್ಕೆ 25 ವರ್ಷ ಆಗುವ ತನಕ 150 ಕಿ.ಮೀ. ವ್ಯಾಪ್ತಿಯಲ್ಲಿ ಮೈಸೂರು ಹಾಗೂ ಹಾಸನ ಹೊರತುಪಡಿಸಿ ಬೇರೆ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸುವಂತಿಲ್ಲ. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಕಾರ್ಯಾಚರಣೆ ನಡೆಸುವಂತೆಯೂ ಇಲ್ಲ. ಇಲ್ಲಿ ಕಾರ್ಯಾಚರಣೆ ನಡೆಸಲು ಮುಂದಾದಲ್ಲಿ ಅದಕ್ಕೆ BIAL ಒಪ್ಪಿಗೆ ಪಡೆಯಬೇಕು. ಇದನ್ನೂ ಓದಿ: HAL ವಿಮಾನ ನಿಲ್ದಾಣವನ್ನು ಆದಷ್ಟು ಬೇಗ ತೆರೆಯಬೇಕು: ತೇಜಸ್ವಿ ಸೂರ್ಯ

