– ಲಾಭ ಹೋಗ್ಲಿ ಈಗ ಕೊಟ್ಟ ಹಣವೂ ಇಲ್ಲ
ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸಂಜನಾಗೂ ಗಲ್ರಾನಿಗೂ ವಿವಾದಗಳಿಗೂ ಅವಿನಾಭಾವ ಸಂಬಂಧ ಅನ್ಸುತ್ತೆ. ಮೊನ್ನೆ ಮೊನ್ನೆ ಕ್ಯಾಬ್ ಚಾಲಕನ ಜೊತೆ ಕಿರಿಕ್ ಮಾಡ್ಕೊಂಡು ಸುದ್ದಿಯಾಗಿದ್ದ ಸಂಜನಾ ಈಗ ಮತ್ತೆ ಸುದ್ದಿಯಾಗಿದ್ದಾರೆ. ಆತ್ಮೀಯ ಸ್ನೇಹಿತ ರಾಹುಲ್ ತೊನ್ಸೆ ನಟಿ ಸಂಜನಾಗೆ ವಂಚಿಸಿದ್ದು ನಟಿಮಣಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
Advertisement
ಹೌದು. ಸಹೋದರ, ಸಹೋದರಿಯಂತೆ ಇದ್ದ ಸಂಜನಾ ಮತ್ತು ರಾಹುಲ್ ತೊನ್ಸೆ ನಡುವೆ ಇದೀಗ ಬಿರುಗಾಳಿ ಬೀಸಿದೆ. ರಾಹುಲ್ ತೊನ್ಸೆ ಗೋವಾ ಹಾಗೂ ಕೊಲೊಂಬೊದಲ್ಲಿ ಕ್ಯಾಸಿನೋಗಳಿದ್ದು ಹಣ ಹಾಕಿದ್ರೆ ದುಪ್ಪಟ್ಟು ಆಗುತ್ತೆ ಅಂತ ಹೇಳಿದ್ರಂತೆ. ಸ್ನೇಹಿತನ ಮಾತು ನಂಬಿ ಸಂಜನಾ ರಾಹುಲ್ ತೊನ್ಸೆಗೆ ಹಣವನ್ನು ನೀಡಿದ್ರಂತೆ. ಆದರೆ ಇದೀಗ ಸಂಜನಾ ಹಣ ಕೇಳಿದ್ರೆ ರಾಹುಲ್ ಕೈ ಎತ್ತಿದ್ದಾರಂತೆ. ಸ್ನೇಹಿತನಿಂದ ಮೊಸ ಹೋದ ಸಂಜನಾ ನ್ಯಾಯಕೊಡಿಸುವಂತೆ 4ನೇ ಎಸಿಎಂಎಂ ಕೋರ್ಟ್ ಮೊರೆ ಹೋಗಿದ್ದರು. ಸಂಜನಾ ಸಲ್ಲಿಸಿದ್ದ ಪಿಸಿಆರ್ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್ ತನಿಖೆಗೆ ಸೂಚನೆ ನೀಡಿದೆ. ನ್ಯಾಯಾಲಯದ ಆದೇಶದಂತೆ ಇಂದಿರಾನಗರ ಪೊಲೀಸರು ರಾಹುಲ್ ತೊನ್ಸೆ ಸೇರಿದಂತೆ 3 ಜನರ ವಿರುದ್ಧ ವಂಚನೆ, ಮೋಸ, ಮಾನನಷ್ಟಕ್ಕೆ ಸಂಬಂಧಿಸಿದ ಕೇಸ್ ದಾಖಲಿಸಿದ್ದಾರೆ.
Advertisement
Advertisement
ಎಫ್‍ಐಆರ್ ನಲ್ಲಿ ಏನಿದೆ..?
ರಾಹುಲ್ ತೊನ್ಸೆ ಫಿರ್ಯಾದಿ ಸಂಜನಾ ಗಲ್ರಾನಿ ಸ್ನೇಹಿತನು ಹಾಗೂ ಆತ್ಮೀಯನು ಆಗಿದ್ದು, ಫಿರ್ಯಾದಿ ಸಂಜನಾ ಗಲ್ರಾನಿ ಬಳಿ ತಾನು ಗೋವಾ ಮತ್ತು ಕೊಲಂಬೋದಲ್ಲಿ ಕ್ಯಾಸಿನೋಗಳ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುತ್ತೇನೆ. ತಾನು ಹೇಳಿದ ಕಡೆಗಳಲ್ಲಿ ಹಣ ವಿನಿಯೋಗಿಸಿದರೇ ಅಧಿಕ ಲಾಭ ಗಳಿಸಬಹುದು ಎಂದು ಫಿರ್ಯಾದುದಾರರಾದ ಸಂಜನಾ ಗಲ್ರಾನಿಯನ್ನು ನಂಬಿಸಿ, ಕಳೆದ ಮೂರು ವರ್ಷಗಳಲ್ಲಿ ರಾಹುಲ್ ತೊನ್ಸೆ, ರಾಮಕೃಷ್ಣ ಮತ್ತು ಶ್ರೀಮತಿ ರಾಗೇಶ್ವರಿಯ ಬ್ಯಾಂಕ್ ಖಾತೆಗಳಿಗೆ ಹಣ ಹಾಕಿಸಿಕೊಂಡಿರುತ್ತಾರೆ. ಆದರೆ ಯಾವುದೇ ಲಾಭಾಂಶವನ್ನು ನೀಡಿರುವುದಿಲ್ಲ. ಹಲವಾರು ಬಾರಿ ಹಣವನ್ನು ನೀಡುವಂತೆ ಕೇಳಿದ್ದು, ಹಿಂದಿರುಗಿಸಿರುವುದಿಲ್ಲ. ಇದನ್ನೂ ಓದಿ: 200 ಕಿಮೀ ವೇಗದಲ್ಲಿ ಕಾರ್ ಸವಾರಿ ಮಾಡಿದ ಅರ್ವಿಯಾ
Advertisement
ಆರೋಪಿಗಳು ಫಿರ್ಯಾದುದಾರರಾದ ಸಂಜನಾ ಗಲ್ರಾನಿಯನ್ನು ವಂಚಿಸುವ ಸಂಚು ರೂಪಿಸಿರುತ್ತಾರೆ. ಅಲ್ಲದೇ ಫಿರ್ಯಾದುದಾರರಾದ ಸಂಜನಾ ಗಲ್ರಾನಿಯವರ ಹಣವನ್ನು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಲಾಭ ಗಳಿಸಿರುತ್ತಾರೆ. ಮೂವರು ಆರೋಪಿಗಳು ಫಿರ್ಯಾದುದಾರರಾದ ಸಂಜನಾ ಗಲ್ರಾನಿಯವರ ಘನತೆಗೆ ಕುಂದುಂಟು ಬರುವಂತೆ ಸುಳ್ಳು ಹೇಳಿಕೆಗಳನ್ನು ನೀಡಿರುತ್ತಾರೆ. ಹಣವನ್ನು ವಾಪಸ್ ಮಾಡದೇ ಮೋಸ ಮಾಡಿರುತ್ತಾರೆ. ಎ-1 ರಾಹುಲ್ ತೋನ್ಸೆ, ಎ-2 ರಾಮಕೃಷ್ಣ ಮತ್ತು ಎ-3 ರಾಗೇಶ್ವರಿಯವರು ಐಪಿಸಿ ಕಲಂ 34, 120(ಬಿ), 107, 354, 406, 420, 506ರ ಅಡಿಯಲ್ಲಿ ವಂಚಿಸಿದ್ದು, ಇವರ ವಿರುದ್ಧ ಕಾನೂನು ಕ್ರಮ ಜರುಗಿಸಲು ದೂರಿನಲ್ಲಿ ಫಿರ್ಯಾದಿದಾರಾದ ಸಂಜನಾ ಗಲ್ರಾನಿ ಕೋರಿರುತ್ತಾರೆ.
ಎಫ್‍ಐಆರ್ ದಾಖಲಾಗ್ತಿದ್ದ ಹಾಗೆ ಸಂಜನಾ ಟ್ವಿಟರ್‍ನಲ್ಲಿ ರಾಹುಲ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ನಾನು ಒಬ್ಬ ವ್ಯಕ್ತಿಯನ್ನು ನಾನು ನನ್ನ ಒಡಹುಟ್ಟಿದ ಸಹೋದರ ಎಂದು ಪರಿಗಣಿಸಿದ್ದೆ. ನಾವು ಒಂದೇ ತಟ್ಟೆಯಲ್ಲಿ ಊಟ ಮಾಡಿದ ಸಮಯವಿದೆ. ಆತ ಊಟ ಮಾಡಿದ ತಟ್ಟೆಯಲ್ಲಿ ಎಂಜಲು ಉಗುಳುವ ಮೂಲಕ ನನಗೆ ದ್ರೋಹ ಬಗೆದಿದ್ದಾನೆ. ನನ್ನ ಹೆಸರು, ನನ್ನ ಖ್ಯಾತಿ, ನನ್ನ ಘನತೆಗೆ ಧಕ್ಕೆ ತಂದಿದ್ದಲ್ಲದೆ, ನನ್ನ ಆರ್ಥಿಕವಾಗಿಯೂ ನಾಶ ಮಾಡಿದ್ದಾನೆ. ಇಷ್ಟಾದರೂ ನಾನು ಮಾನವೀಯತೆಯ ದೃಷ್ಟಿಯಿಂದ ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವರ ತಂದೆ, ತಾಯಿ ಹಿರಿಯರಿದ್ದಾರೆ. ಅವರ ಸಲುವಾಗಿ ನಾನು ದೇವರಲ್ಲಿ ಮತ್ತೊಮ್ಮೆ ಪ್ರಾರ್ಥಿಸುವುದು ಇಷ್ಟೇ, ಆದಷ್ಟು ಬೇಗ ಈ ಎಲ್ಲಾ ಪ್ರಕರಣಗಳು ಸುಖಾಂತ್ಯವಾಗಲಿ ಎಂದು ಟ್ವೀಟ್ ಮಾಡುವ ಮೂಲಕ ರಾಹುಲ್ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್‍ಗೆ ಜೈಲೇ ಗತಿ
ಒಟ್ಟಿನಲ್ಲಿ ಸಂಜನಾ ಮತ್ತು ರಾಹುಲ್ ನಡುವೆ ಇದ್ದ ಅನ್ಯೋನ್ಯ ಸಂಬಂಧ ಹಣದ ವಿಚಾರವಾಗಿ ಇದೀಗ ಪರಸ್ಪರ ಶತೃಗಳನ್ನಾಗಿ ಮಾಡಿದೆ. ಸಂಜನಾ ಮಾಡಿರುವ ಆರೋಪ ಪೊಲೀಸರ ತನಿಖೆಯಲ್ಲಿ ಸಾಬಿತಾದ್ರೆ ರಾಹುಲ್‍ಗೆ ಶಿಕ್ಷೆಯಾಗುವ ಸಾಧ್ಯತೆ ಇದೆ.