ಬೆಂಗಳೂರು: ಪೌರಾಣಿಕ ಮತ್ತು ಆಧುನಿಕ ಕಥೆಗಳ ಮಹಾಸಂಗಮದಂತೆ ಕಾಣಿಸುತ್ತಿರೋ ರಾಂಧವ ಆರಂಭದಲ್ಲಿ ಎರಡು ಟ್ರೈಲರ್‍ಗಳ ಮೂಲಕ ಗಮನ ಸೆಳೆದಿತ್ತು. ಅದರ ಜೊತೆಗೆ ಈಗ ಹಾಡುಗಳು ಕೂಡ ಎಲ್ಲರನ್ನು ಸೆಳೆಯುತ್ತಿವೆ. ಈ ಸಿನಿಮಾದ ಹಾಡುಗಳೆಲ್ಲ ವಾರದ ಹಿಂದಷ್ಟೇ ಬಿಡುಗಡೆಯಾಗಿವೆ. ಇದೀಗ ಪ್ರೇಕ್ಷಕರೆಲ್ಲ ಈ ಹಾಡುಗಳನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಚಿತ್ರರಂಗದ ಕಡೆಯಿಂದಲೂ ಅಂಥಾದ್ದೇ ಅಭಿಪ್ರಾಯಗಳು ತೇಲಿ ಬರುತ್ತಿವೆ.
Advertisement
ಹಾಗೆ ಎಲ್ಲ ಹಾಡುಗಳೂ ಗೆದ್ದಿರೋದರಿಂದ ಚಿತ್ರತಂಡ ಕೂಡ ಹೊಸ ಭರವಸೆ ತುಂಬಿಕೊಂಡಿದೆ. ಸುನೀಲ್ ಆಚಾರ್ಯ ನಿರ್ದೇಶನದ ರಾಂಧವ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದವರು ಶಶಾಂಕ್ ಶೇಷಗಿರಿ. ಇವರು ಈಗಾಗಲೇ ಗಾಯಕರಾಗಿ ಬಹು ಬೇಡಿಕೆ ಹೊಂದುತ್ತಲೇ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗಿಯೂ ಹೊರಹೊಮ್ಮಿದ್ದಾರೆ.
Advertisement
Advertisement
ಶಶಾಂಕ್ ಈಗಾಗಲೇ ಕನ್ನಡದಲ್ಲಿ ನಾನೂರ ಎಂಬತ್ತಕ್ಕೂ ಹೆಚ್ಚು ಹಾಡುಗಳನ್ನು ಹಾಡುವ ಮೂಲಕ ಮುಖ್ಯ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಸಂಗೀತದ ಬಗ್ಗೆ ಅಪಾರವಾದ ಆಸಕ್ತಿ ಹೊಂದಿ, ಅದರ ಬಹುತೇಕ ಪ್ರಾಕಾರಗಳ ಸಂಗೀತವನ್ನೂ ಅಭ್ಯಸಿಸಿಕೊಂಡಿರುವವರು ಶಶಾಂಕ್ ಶೇಷಗಿರಿ. ಇದೀಗ ಅವರು ರಾಂಧವ ಮೂಲಕ ಸಂಗೀತ ನಿರ್ದೇಶಕರಾಗಿ ಹೊಸ ಯಾನ ಆರಂಭಿಸಿದ್ದಾರೆ. ಇದರಲ್ಲಿ ಆರಂಭಿಕವಾಗಿಯೇ ಗೆದ್ದಿದ್ದಾರೆ. ಯಾಕೆಂದರೆ ಈ ಹಾಡುಗಳ ಬಗ್ಗೆ ಕೇಳುಗರ ಕಡೆಯಿಂದ ಒಳ್ಳೆ ಅಭಿಪ್ರಾಯಗಳೇ ಕೇಳಿ ಬರುತ್ತಿವೆ.