ಬೆಂಗಳೂರು: ಡೈಲಾಗ್ ಗಳು ಸಿನಿಮಾಕ್ಕೆ ಮಾತ್ರ ಸೀಮಿತವಾಗಿರಲಿ, ಪ್ರೀತಿ ಮಾತ್ರ ಸದಾ ಇರಲಿ ಎಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಇಂದು ಪುನೀತ್ ಅಭಿನಯದ ಬಹು ನಿರೀಕ್ಷೆಯ ಜೇಮ್ಸ್ ಚಿತ್ರದ ಮುಹೂರ್ತ ಕಾರ್ಯಕ್ರಮ ಬಾಲಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ನಡೆಯಿತು. ಬಳಿಕ ಮಾತನಾಡಿದ ನಟ, ಮೂರು ವರ್ಷದ ಹಿಂದೆ ಜೇಮ್ಸ್ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದೆ. ಆದರೆ ಕಾರಣಾಂತರಗಳಿಂದ ಸಿನಿಮಾ ಮುಂದು ಹೋಗುತ್ತಾ ಬಂತು ಎಂದು ತಿಳಿಸಿದರು.
Advertisement
Advertisement
ನಿರ್ದೇಶಕ ಚೇತನ್ ಕೂಡ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ರು. ಹಾಗೆಯೇ ನಾನು ಕೂಡ ಬೇರೆ ಸಿನಿಮಾದಲ್ಲಿ ಬ್ಯುಸಿಯಾದೆ. ಅದಾದ ಬಳಿಕ ಕೆಲವೊಂದು ಚರ್ಚೆಗಳು ನಡೆದವು. ಆದರೆ ಇದೀಗ ಸಂದರ್ಭ ಕೂಡಿ ಬಂದಿದೆ. ಕೆಲವೇ ತಿಂಗಳಿನಿಂದ ಸಿನಿಮಾ ಆರಂಭವಾಗುತ್ತದೆ. ಎಲ್ಲರ ಆಶೀರ್ವಾದ ಸಿನಿಮಾದ ಮೇಲಿರಲಿ ಎಂದರು.
Advertisement
ಎಲ್ಲರೂ ಕಷ್ಟಪಟ್ಟು ಶ್ರದ್ಧೆಯಿಂದ ಸಿನಿಮಾ ಮಾಡುತ್ತೇವೆ. ಅದಾದ ನಂತರ ಸಿನಿಮಾ ತೆರೆ ಮೇಲೆ ಬರುತ್ತದೆ. ನೀವೆಲ್ಲರೂ ಸೇರಿ ಆಶೀರ್ವಾದ ಮಾಡಬೇಕು. ನಿರ್ಮಾಪಕ ಕಿಶೋರ್ ಪತ್ತಿಕೊಂಡ ನನ್ನ ಆಪ್ತ. ಅವರೇ ಈ ಜೇಮ್ಸ್ ನಿರ್ಮಿಸುತ್ತಿದ್ದಾರೆ ಎಂದರು.
Advertisement
ಈ ವೇಳೆ ಅಭಿಮಾನಿಗಳು ಡೈಲಾಗ್ ಹೇಳುವಂತೆ ಪುನೀತ್ ಅವರನ್ನು ಕೇಳಿಕೊಂಡರು. ಆಗ ಪುನೀತ್, ಇನ್ನೇನೋ ಕೆಲವೇ ತಿಂಗಳಲ್ಲಿ ಸಿನಿಮಾ ತೆರೆ ಮೇಲೆ ಬರುತ್ತದೆ. ಆವಾಗ ಅಲ್ಲೇ ಡೈಲಾಗ್ ಗಳನ್ನು ನೋಡಿ. ಡೈಲಾಗ್ ಸಿನಿಮಾಗೇ ಇರಲಿ, ಪ್ರೀತಿ ಮಾತ್ರ ಸದಾ ಇರಲಿ ಎಂದರು.
ಇದೇ ಸಂದರ್ಭದಲ್ಲಿ ಬೃಹತ್ ಗಾತ್ರದ ಕನಕಾಂಬರ ಹಾರ ಹಾಕಿ ಅಪ್ಪುಗೆ ಶುಭಕೋರಿದರು. ಜೇಮ್ಸ್ ಗೆ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ಫಸ್ಟ್ ಕ್ಲಾಪ್ ಮಾಡಿದರು. 90 ರಿಂದ 100 ದಿನ ಚಿತ್ರೀಕರಣ ನಡೆಯಲಿದ್ದು, ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿಯೋಜನೆ ಮಾಡಲಿದ್ದಾರೆ. ಶ್ರೀಶಾ ಕುದುವಳ್ಳಿ ಕ್ಯಾಮೆರಾ ವರ್ಕ್ ಮಾಡಲಿದ್ದಾರೆ. ಒಟ್ಟಿನಲ್ಲಿ ಬಹು ಕೋಟಿ ಜೇಮ್ಸ್ ಚಿತ್ರದ ಚಿತ್ರೀಕರಣ ಫೆ.16 ರಿಂದ ಶುರುವಾಗಲಿದೆ.