– ಪದ್ಮಶ್ರೀ ಪ್ರಶಸ್ತಿಗೆ ಸರ್ಕಾರ ಶಿಫಾರಸು ಸಾಧ್ಯತೆ
ಬೆಂಗಳೂರು: ನವೆಂಬರ್ 14ರಂದು ಫಿಲಂ ಚೇಂಬರ್ ಅರಮನೆ ಆವರಣದಲ್ಲಿ ಆಯೋಜಿಸಿರುವ ಅಪ್ಪು ನುಡಿನಮನ ಕಾರ್ಯಕ್ರಮಕ್ಕೆ ರಾಜಕೀಯ ನಾಯಕರು, ದಕ್ಷಿಣ ಭಾರತದ ನಟರಿಗೆ ಆಹ್ವಾನ ನೀಡಲಾಗಿದೆ. ಸೋಮವಾರ 11ನೇ ದಿನದ ಪುಣ್ಯಾರಾಧನೆಗೆ ಈಗಿನಿಂದಲೇ ಸಿದ್ಧತೆ ನಡೆದಿದೆ.
Advertisement
ಸುಮಾರು 2 ಸಾವಿರ ಮಂದಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಸಂಚಾರದಲ್ಲಿ ಅಡಚಣೆ ಉಂಟಾಗದ ರೀತಿಯಲ್ಲಿ ಸಂಚಾರಿ ಪೊಲೀಸರು ಅಗತ್ಯ ಸಿದ್ಧತೆ ಮಾಡಿಕೊಳ್ತಿದ್ದಾರೆ. ನಾಳೆ ಸಂಜೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಪುನೀತ್ ಸ್ಮರಣಾರ್ಥ, ಪುಷ್ಪಾಂಜಲಿ, ದೀಪಾಂಜಲಿ, ಗೀತಾಂಜಲಿ ಮತ್ತು ಭಾಷ್ಪಾಂಜಲಿ ಕಾರ್ಯಕ್ರಮವನ್ನು ಚಿತ್ರಪ್ರದರ್ಶಕರ ಸಂಘ ಹಮ್ಮಿಕೊಂಡಿದೆ. ಇದನ್ನೂ ಓದಿ: ‘ಅಪ್ಪು ಜೊತೆ ರಾಜ್ ಸಮಾಧಿ ನೋಡಲು ಬರ್ತಿದ್ದ ನಾವು ಈಗ ಅವರದ್ದೇ ಸಮಾಧಿ ನೋಡೋಕೆ ಬರುವಂಗಾಯ್ತು’
Advertisement
Advertisement
ಈ ಮಧ್ಯೆ ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳ ಸಾಲು ಕರಗುತ್ತಿಲ್ಲ. ಸಾವಿರಾರು ಮಂದಿ ಅಪ್ಪು ಸಮಾಧಿಗೆ ನಮಿಸಿ ಕಣ್ಣೀರು ಹಾಕ್ತಿದ್ದಾರೆ. 5 ದಿನಗಳಲ್ಲಿ ಅಂದಾಜು 2 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಪುನೀತ್ ಸಮಾಧಿ ದರ್ಶನ ಮಾಡಿದ್ದಾರೆ. ಅಪ್ಪು ಸಮಾಧಿ ಎದುರು ಮದುವೆಗೆ ಅವಕಾಶ ನೀಡಿ ಬಳ್ಳಾರಿಯ ಜೋಡಿಯೊಂದು ಪೊಲೀಸರಿಗೆ ಮನವಿ ಮಾಡಿದೆ. ಆದರೆ ಪೋಷಕರ ಜೊತೆ ಮಾತನಾಡಿ ತೀರ್ಮಾನ ಕೈಗೊಳ್ಳೋದಾಗಿ ರಾಘಣ್ಣ ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ಪು ಸಣ್ಣ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಹೋದ್ರು: ಜಯಪ್ರದಾ
Advertisement
ಅಪ್ಪು ಸಮಾಧಿಗೆ ಪುನೀತ್ ಅವರ ದೊಡ್ಡಕ್ಕ ಲಕ್ಷ್ಮೀದೇವಿ ಪೂಜೆ ಸಲ್ಲಿಸಿದರು. ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ನಟ ಟೆನಿಸ್ ಕೃಷ್ಣ, ತಬಲಾ ನಾಣಿ, ನೃತ್ಯ ಸಂಯೋಜಕ ಇಮ್ರಾನ್ ಸರ್ದಾರಿಯಾ ಭೇಟಿ ನೀಡಿದ್ರು. ಅತ್ತ, ನಟ ಪುನೀತ್ ನಿವಾಸಕ್ಕೆ ಹಿರಿಯ ನಟಿ ಜಯಪ್ರದಾ, ನಟಿ ಪ್ರಿಯಾಮಣಿ, ರಾಗಿಣಿ, ಸಂಸದ ಉಮೇಶ್ ಜಾಧವ್ ಸೇರಿ ಹಲವರು ಭೇಟಿ ನೀಡಿ, ಪುನೀತ್ ಪತ್ನಿ ಮಕ್ಕಳಿಗೆ ಸಾಂತ್ವನ ಹೇಳಿದ್ರು. ಇತ್ತ ಪುನೀತ್‍ಗೆ ಪದ್ಮಶ್ರೀ ಪ್ರಶಸ್ತಿ ನೀಡೋ ಬಗ್ಗೆ ಒತ್ತಡ ಜೋರಾಗಿದೆ. ನವೆಂಬರ್ 16ರ ನಂತರ ಸರ್ಕಾರ ಒಂದು ಸ್ಪಷ್ಟ ನಿರ್ಧಾರ ಕೈಗೊಳ್ಳೋ ಸಾಧ್ಯತೆಗಳಿವೆ.