ಈ ವಾರ ಬಿಡುಗಡೆಯಾಗಲಿರೋ ಒಂದು ಕಥೆ ಹೇಳ್ಲಾ ಚಿತ್ರದಲ್ಲಿ ಐದು ಹಾರರ್ ಕಥೆಗಳಿವೆ. ಅದರಲ್ಲಿ ಬಹಳಷ್ಟು ಪಾತ್ರಗಳಿವೆ. ಅವೆಲ್ಲವೂ ಮುಖ್ಯವಾದವುಗಳೇ. ಆದ್ದರಿಂದ ಇದರಲ್ಲಿ ಹೀರೋ ಹೀರೋಯಿನ್ ಅಂತ ವಿಂಗಡಿಸೋದು ಕಷ್ಟ. ಆದ್ರೆ ಇದರಲ್ಲಿ ಅಷ್ಟೂ ಕಥೆಗಳನ್ನು ಮ್ಯಾನೇಜು ಮಾಡುವಂಥಾದ್ದೊಂದು ಮುಖ್ಯ ಪಾತ್ರವಿದೆ. ಅದಕ್ಕೆ ಜೋಡಿಹಕ್ಕಿ ಸೀರಿಯಲ್ ಮೂಲಕ ರಾಮಣ್ಣ ಎಂದೇ ಖ್ಯಾತರಾಗಿರೋ ತಾಂಡವ್ ಜೀವ ತುಂಬಿದ್ದಾರೆ.
ಬಹುಶಃ ಬರೀ ತಾಂಡವ್ ಅಂದ್ರೆ ಬೇಗನೆ ಗುರುತು ಹತ್ತಲಿಕ್ಕಿಲ್ಲ. ಜೋಡಿಹಕ್ಕಿ ಸೀರಿಯಲ್ಲಿನ ರಾಮಣ್ಣ ಅಂದ್ರೆ ತಕ್ಷಣಕ್ಕೆ ಗುರುತು ಸಿಗಬಹುದು. ಕಿರುತೆರೆ ಲೋಕದಲ್ಲಿ ಅಂಥಾದ್ದೊಂದು ಮೋಡಿ ಮಾಡಿರುವವರು ತಾಂಡವ್. ಈ ಧಾರಾವಾಹಿಯಿಂದಲೇ ಕಿರುತೆರೆ ಪ್ರೇಕ್ಷಕರ ಮನಗೆದ್ದಿರೋ ಅವರ ಪಾಲಿಗಿದು ಹಿರಿತೆರೆಗೆ ಗ್ರ್ಯಾಂಡ್ ಎಂಟ್ರಿಯಂತಿರೋ ಚಿತ್ರ.
ಕಟ್ಟುಮಸ್ತಾದ ದೇಹಸಿರಿಯ ಪಕ್ಕಾ ಹಳ್ಳಿ ಘಮಲಿನ ಪಾತ್ರದ ಮೂಲಕವೇ ಪ್ರಸಿದ್ಧಿ ಪಡೆದಿರುವವರು ತಾಂಡವ್. ಅವರು ಈ ಚಿತ್ರದಲ್ಲಿ ಅತ್ಯಂತ ಭಿನ್ನವಾದ ಪಾತ್ರವೊಂದನ್ನ ನಿರ್ವಹಿಸಿದ್ದಾರೆ. ಅದರ ಪೋಸ್ಟರುಗಳು ಈಗಾಗಲೇ ಕುತೂಹಲಕ್ಕೆ ಕಾರಣವಾಗಿವೆ. ಈ ಸಿನಿಮಾದ ಐದು ಕಥೆಗಳಲ್ಲಿ ಹಲವರು ನಟಿಸಿದ್ದಾರೆ. ಆದರೆ ತಾಂಡವ್ ಪಾತ್ರ ಮಾತ್ರ ಬೇರೆಯದ್ದೇ ರೀತಿಯಲ್ಲಿ ಪ್ರೇಕ್ಷಕರನ್ನ ತಲುಪಲಿದೆ. ಅದರ ನಿಜವಾದ ಗಮ್ಮತ್ತು ಈ ವಾರ ಜಾಹೀರಾಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv