ಜೀವನ ಪಾಠ ಹೇಳಲು ಬರ್ತಿದ್ದಾರೆ ಕನ್ನಡತಿ ಖ್ಯಾತಿಯ ಕಿರಣ್ ರಾಜ್!

Public TV
1 Min Read
KIRAN RAJ

ನ್ನಡತಿ ಧಾರಾವಾಹಿ ಮುಖಾಂತರ ಮನೆ ಮಾತಾಗಿರುವ ನಟ ಕಿರಣ್ ರಾಜ್ ನಟನೆಯ ‘ಜೀವ್ನಾನೇ ನಾಟ್ಕ ಸಾಮಿ’ ಸಿನಿಮಾ ಬಿಡುಗಡೆಯ ಸನಿಹದಲ್ಲಿದೆ. ತಮ್ಮದೇ ಆದ ಅಪಾರ ಅಭಿಮಾನಿ ಬಳಗ ಹೊಂದಿರುವ ಕಿರಣ್ ರಾಜ್ ಈ ನಡುವೆ ಸೀರಿಯಲ್ ಜೊತೆಗೆ ಹಲವು ಸಿನಿಮಾಗಳಲ್ಲೂ ಮಿಂಚುತ್ತಿದ್ದಾರೆ. ಇದೀಗ ಅವರ ನಟನೆಯ ‘ಜೀವ್ನಾನೇ ನಾಟ್ಕ ಸಾಮಿ’ ಸಿನಿಮಾ ಆಗಸ್ಟ್ 19ರಂದು ಬಿಡುಗಡೆಯಾಗುತ್ತಿದೆ.

KIRAN RAJ 2

ಈ ಸಿನಿಮಾ ರಾಜು ಭಂಡಾರಿ ರಾಜಾವರ್ತ ನಿರ್ದೇಶನದಲ್ಲಿ ಮೂಡಿ ಬಂದಿರುವ ಮೊದಲ ಚಿತ್ರ. ಕಿರಣ್ ರಾಜ್ ಜೊತೆ ಸರಿಗಮಪ ವೇದಿಕೆ ಮೂಲಕ ಮನೆಮಾತಾಗಿರುವ ಶ್ರೀಹರ್ಷ ಕೂಡ ಲೀಡ ರೋಲ್ ನಲ್ಲಿ ನಟಿಸುತ್ತಿದ್ದಾರೆ. ರಿಯಾಲಿಟಿ ಶೋ ಆಧಾರಿತ ಹಾಗೂ ಮಹಾಭಾರತದ ಉಪಕಥೆಯನ್ನು ಆಧರಿಸಿ `ಜೀವ್ನಾನೇ ನಾಟ್ಕ ಸಾಮಿ’ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಕೊಂಚ ಟ್ರಾಜೆಡಿ ಹಾಗೂ ಒಂದಿಷ್ಟು ಭಾವನಾತ್ಮಕ ಅಂಶಗಳು ಸಿನಿಮಾದಲ್ಲಿದ್ದು ಒಂದೊಳ್ಳೆ ಮನರಂಜನಾತ್ಮಕ ಸಬ್ಜೆಕ್ಟ್ ಚಿತ್ರದಲ್ಲಿದೆ ಎನ್ನುವುದು ಚಿತ್ರತಂಡದ ಮಾತು. ಇದನ್ನೂ ಓದಿ: ಮಗಳ ಮದುವೆಯಲ್ಲಿ ಅನಿಲ್ ಕಪೂರ್ ಡ್ಯಾನ್ಸ್- ವೀಡಿಯೋ ವೈರಲ್

ಗಾಯಕರಾಗಿದ್ದ ಶ್ರೀಹರ್ಷ ಇದೇ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸುತ್ತಿದ್ದು, ನಟನೆ ಜೊತೆಗೆ ಚಿತ್ರದ ಒಂದು ಹಾಡಿಗೆ ದನಿಯಾಗಿದ್ದಾರೆ. ಪವಿತ್ರ ಕೊಟ್ಯಾನ್, ಅನಿಕ ರಮ್ಯ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರಕ್ಕೆ ಅತಿಶಯ ವೇದಾಂತ್ ಜೈನ್ ಸಂಗೀತ ಸಂಯೋಜನೆ ನೀಡಿದ್ದು, ಕಿಟ್ಟಿ ಕೌಶಿಕ್ ಛಾಯಾಗ್ರಹಣವಿದೆ. ಆರ್ಯ ಎಂಟಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಲಲಿತ ರಾಜಶೇಖರ ಶಿರಹಟ್ಟಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

KIRAN RAJ 1

ಚಿತ್ರದಲ್ಲಿ ಬಾಲನಟಿಯಾಗಿ ಶ್ರಾವ್ಯಾ ಆಚಾರ್ಯ ನಟಿಸಿದ್ದು, ಜೋಕರ್ ಹನುಮಂತು, ದೇವಯ್ಯ, ಮಹದೇವ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. `ಜೀವ್ನಾನೇ ನಾಟ್ಕ ಸಾಮಿ’ ಚಿತ್ರ ಈಗಾಗಲೇ ಹಲವು ಚಲನಚಿತ್ರೋತ್ಸವಗಳಿಗೆ ಆಯ್ಕೆಯಾಗಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಪ್ರೇಕ್ಷಕ ಪ್ರಭುಗಳ ಅಭಿಪ್ರಾಯಕ್ಕಾಗಿ ಕಾದಿರುವ ಚಿತ್ರತಂಡ ಆಗಸ್ಟ್ 19ರಂದು ಚಿತ್ರವನ್ನು ಬಿಡುಗಡೆ ಮಾಡುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *