ಬೆಂಗಳೂರು: ಕಿರಣ್ ಹೆಗ್ಡೆ ನಿರ್ದೇಶನದಲ್ಲಿ ಮೂಡಿ ಬಂದಿರೋ ಮನರೂಪ ಚಿತ್ರ ಇದೇ ತಿಂಗಳ 22ರಂದು ತೆರೆ ಕಾಣಲಿದೆ. ಸಿಎಂಸಿಆರ್ ಮೂವೀಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ ಟೈಟಲ್ ಪೋಸ್ಟರ್‍ನೊಂದಿಗೆ ಸೃಷ್ಟಿಸಿದ್ದ ಸಂಚಲನ ಸಣ್ಣ ಮಟ್ಟದ್ದೇನಲ್ಲ. ದಟ್ಟ ಕಾಡನ್ನು ಸೀಳಿಕೊಂಡು ಹೋಗುತ್ತಿರೋ ಕಾರಿನ ಹೆಡ್‍ಲೈಟ್ ಮೂಲಕವೇ ಕಥೆಯ ನಿಗೂಢ ದಿಕ್ಕನ್ನು ಪ್ರೇಕ್ಷಕರಿಗೆ ತಲುಪಿಸಲಾಗಿತ್ತು.
Advertisement
ಸಿನಿಮಾಗಳಲ್ಲಿ ಸ್ಟಿಲ್ಲುಗಳ ಮೂಲಕವೇ ಆರಂಭಿಕವಾಗಿ ಪ್ರೇಕ್ಷಕರನ್ನು ಸೆಳೆಯಲಾಗುತ್ತೆ. ಆದರೆ ಈ ಪೋಸ್ಟರಿನಲ್ಲಿ ಯಾವ ನಟ ನಟಿಯರ ಭಾವ ಚಿತ್ರಗಳೂ ಇರಲಿಲ್ಲ. ಅಲ್ಲಿದ್ದದ್ದು ಕಾಡು, ಕಾರು ಮತ್ತು ಹೆಡ್‍ಲೈಟ್ ಬೆಳಕಲ್ಲಿ ಹೊಳೆಯೋ ದಾರಿ ಮಾತ್ರ. ಹೀಗೆ ಟೈಟಲ್ ಪೋಸ್ಟರಿನಲ್ಲಿ ಕಾರಿನ ಹೆಡ್‍ಲೈಟ್ ಮೂಲಕ ನಿಗೂಢ ದಾರಿಯತ್ತ ಬೊಟ್ಟು ಮಾಡಿ ತೋರಿಸಲಾಗಿತ್ತಲ್ಲಾ? ಅದು ಸೀದಾ ದಟ್ಟಾರಣ್ಯದ ಒಡಲಲ್ಲಿರೋ ಭಯಾನಕವಾದ ಕರಡಿ ಗುಹೆ ಎಂಬ ಪ್ರದೇಶಕ್ಕೆ ಕೊಂಡೊಯ್ದು ಬಿಡುತ್ತದೆ. ಈ ಕರಡಿ ಗುಹೆ ಎಂಬ ಕಾಲ್ಪನಿಕ ಪ್ರದೇಶವೇ ಇಡೀ ಚಿತ್ರದ ಕೇಂದ್ರಬಿಂದು. ಇದು ವಾಸ್ತವಕ್ಕೆ ಹತ್ತಿರಾದಂತಹ ಕಲ್ಪನೆಯೂ ಹೌದು.
Advertisement
Advertisement
ಯಾಕೆಂದರೆ ಕರ್ನಾಟಕದ ದಟ್ಟಾರಣ್ಯದ ಒಡಲೊಳಗೆ ಇಂತಹ ಅನೇಕ ಭಯಾನಕ ಪ್ರದೇಶಗಳಿವೆ. ಅದರ ಸುತ್ತ ಬೆಚ್ಚಿ ಬೀಳುವಂತಹ ಕಥೆಗಳೂ ಇದ್ದಾವೆ. ಅಲ್ಲಿಗೆ ಹೋದವರು ವಾಪಾಸ್ ಬರೋದಿಲ್ಲವೆಂಬುದರಿಂದ ಮೊದಲ್ಗೊಂಡು ಇಂತಹ ಪ್ರದೇಶಗಳ ಸುತ್ತ ಚಿತ್ರ ವಿಚಿತ್ರವಾದ ಕಥೆಗಳು ಹುಟ್ಟಿಕೊಂಡಿವೆ. ಹಾಗೆಯೇ ನಾವು ಆಗಾಗ ಕೇಳುತ್ತಾ ಬಂದಿರುವ ಕಥೆಗಳನ್ನೇ ಮೀರಿಸುವಂತಹ ದೃಶ್ಯಗಳು ಮನರೂಪ ಸಿನಿಮಾದಲ್ಲಿವೆಯಂತೆ. ಈ ಹಿಂದೆ ಬಿಡುಗಡೆಯಾಗಿದ್ದ ಟ್ರೇಲರ್ ಮೂಲಕವೇ ಅದರ ಲಕ್ಷಣಗಳು ಗೋಚರಿಸಿದ್ದವು.
Advertisement
ನಿರ್ದೇಶಕ ಕಿರಣ್ ಹೆಗ್ಡೆ ಶಿರಸಿ ಸೀಮೆಯ ಡಟ್ಟ ಕಾಡುಗಳಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಿದ್ದಾರೆ. ಇದು ಕನ್ನಡ ಚಿತ್ರರಂಗದಲ್ಲಿಯೇ ಒಂದು ಮೈಲಿಗಲ್ಲಾಗಿ ನಿಲ್ಲುವಂತಹ ಚಿತ್ರವಾಗಲಿದೆ ಎಂಬ ಭರವಸೆ ಚಿತ್ರತಂಡದಲ್ಲಿದೆ. ಕರಡಿ ಗುಹೆ ಎಂಬ ಪ್ರದೇಶದಲ್ಲಿನ ನಿಗೂಢಗಳು, ಸುಳಿವೇ ಕೊಡದಂತೆ ಧುತ್ತನೆದುರಾಗೋ ಟ್ವಿಸ್ಟುಗಳ ಮಜಾ ಅನುಭವಿಸಲು ದಿನಗಣನೆ ಶುರುವಾಗಿದೆ.