Bengaluru City
ರೆಡಿಯಾಗ್ತಿದೆ ಹಾರರ್ ಮೂವಿ ‘ಛಾಯ’

ಬೆಂಗಳೂರು: ಕಳೆದ 22 ವರ್ಷಗಳಿಂದಲೂ ನೃತ್ಯ ಕಲಾವಿದರಾಗಿ ಹಾಗೂ ಸುಮಾರು ಚಿತ್ರಗಳಿಗೆ ನೃತ್ಯ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಜಗ್ಗು ಈಗ ಸಿನಿಮಾ ನಿರ್ದೇಶಕರಾಗಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಆಗ ಉಪೇಂದ್ರ ಅಭಿನಯದ ‘ಎ’ ಚಿತ್ರದಲ್ಲಿ ಕೂಡ ಕೆಲಸ ಮಾಡಿರುವ ಜಗ್ಗು ಈಗ ‘ಛಾಯ’ ಎಂಬ ಚಲನಚಿತ್ರದ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಅಲ್ಲದೆ, ಕೊರಿಯೋಗ್ರಾಫರ್ ಆಗಿಯೂ ಕೆಲಸ ಮಾಡಿದ್ದಾರೆ.
ಲವ್ ಹಾಗೂ ಸೆಂಟಿಮೆಂಟ್ ಕಥಾಹಂದರ ಹೊಂದಿರುವ ಈ ಚಿತ್ರದ ಟಾಕಿ ಭಾಗ ಈಗಾಗಲೇ ಮುಕ್ತಾಯಗೊಂಡಿದ್ದು, ಚಿತ್ರದಲ್ಲಿ ಐದು ಹಾಡುಗಳು ಮತ್ತು ನಾಲ್ಕು ಸಾಹಸ ಸನ್ನಿವೇಶಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಬೆಂಗಳೂರು, ಸಕಲೇಶಪುರ ಹಾಗೂ ಮಂಡ್ಯ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ನಾಲ್ಕು ಜನ ಸ್ನೇಹಿತರ ನಡುವೆ ನಡೆಯುವ ಕತೆ ಈ ಚಿತ್ರದಲ್ಲಿದ್ದು, ಇದರ ಜೊತೆಗೆ ಒಂದು ಹಾರರ್ ಎಲಿಮೆಂಟ್ ಕೂಡ ಇದೆ. ದೆವ್ವದ ರಿವೇಂಜ್ ಕಥೆಯನ್ನು ಕೂಡ ನಿರ್ದೇಶಕರು ಈ ಚಿತ್ರದಲ್ಲಿ ತಂದಿದ್ದಾರೆ.
ನ್ಯೂ ಗ್ಲೋಬಲ್ ಕ್ರಿಯೇಷನ್ಸ್ ಲಾಂಛನದಲ್ಲಿ ಮಧು ಗೌಡ್ರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅರುಣ್ ಬೀರೂರು ಛಾಯಾಗ್ರಹಣ, ಮಂಜು ಕವಿ ಸಂಗೀತ, ಅಪ್ಪು ವೆಂಕಟೇಶ್, ಹ್ಯಾರಿಸ್ ಡ್ಯಾನಿ ಸಾಹಸ, ದುರ್ಗ ಪಿ.ಎಸ್. ಸಂಕಲನ, ಮಂಜುಕವಿ ಸಾಹಿತ್ಯ, ನಂದನ್, ಪ್ರವೀರ್ಣ ಚಾಲ್ರ್ಸ್, ರಂಗರಾಜು (ಬಾಬಣ್ಣ) ಸಹ ನಿರ್ಮಾಪಕರಾಗಿದ್ದು, ಆನಂದ್ ತೇಜು, ರಾಜಶೇಖರ್, ಅನನ್ಯಾ, ನಯನ ಕೃಷ್ಣ, ಲಕ್ಪ್ಷ್ಮಣ್, ಗೋವಿಂದಪ್ಪ, ಲಕ್ಷ್ಮಿ, ಕಿಲ್ಲರ್ ವೆಂಕಟೇಶ್, ರಾಜ್ ಉದಯ್, ರೋಹಿಣಿ, ಅಮೃತ್ ರಾಜ್ ಮುಂತಾದವರ ತಾರಾಬಳಗವಿದೆ.
