ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಗಿಣಿಗಾಗಿ ಹಾಲಿ ಮತ್ತು ಮಾಜಿ ಬಾಯ್‍ಫ್ರೆಂಡ್‍ಗಳ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ಆರೋಪಿ ಶಿವಪ್ರಕಾಶ್ ಉಲ್ಟಾ ಹೊಡೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರೋ ಶಿವಪ್ರಕಾಶ್, ನನ್ನ ಗೆಳತಿ ರಾಗಿಣಿಯೇ ಬೇರೆ. ನಟಿ ರಾಗಿಣಿಯೇ ಬೇರೆ. ನಾನು ರವಿಶಂಕರ್ ಮೇಲೆ ಹಲ್ಲೆ ನಡೆಸಿಲ್ಲ ಎಂದು ಹೇಳಿದ್ದಾರೆ.
Advertisement
Advertisement
ಗಣಿ ಉದ್ಯಮಿಯೂ ಆಗಿರೋ ಶಿವಪ್ರಕಾಶ್ ರಾಗಿಣಿಯ ಹಲವು ವರ್ಷಗಳ ಸ್ನೇಹಿತನಾಗಿದ್ದಾನೆ. ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ರೆಸಿಡೆನ್ಸಿ ರಸ್ತೆಯ ರಿಟ್ಜ್ ಕಾರ್ಲ್ ಟನ್ ಹೋಟೆಲ್‍ಗೆ ನಟಿ ರಾಗಿಣಿ ಹಾಗೂ ಹಾಲಿ ಬಾಯ್‍ಫ್ರೆಂಡ್ ರವಿ ಶಂಕರ್ ಹೋಗಿದ್ದರು. ಈ ವೇಳೆಗಾಗಲೇ ಹೋಟೆಲ್‍ನಲ್ಲಿ ರಾಗಿಣಿಯ ಮಾಜಿ ಗೆಳೆಯ, ಗಣಿ ಉದ್ಯಮಿ ಶಿವಪ್ರಕಾಶ್ ತನ್ನ ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದರು. ರಾಗಿಣಿಯನ್ನು ರವಿ ಜೊತೆ ಕಂಡು ಸಿಟ್ಟಿಗೆದ್ದ ಶಿವಪ್ರಕಾಶ್, ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ನಟಿ ರಾಗಿಣಿಗಾಗಿ ಪ್ರೇಮಿಗಳಿಬ್ಬರ ಕಿತ್ತಾಟ
Advertisement
Advertisement
ಅಲ್ಲದೆ ತಾನು ರಾಗಿಣಿಗೆ ಕೊಡಿಸಿದ್ದ ಬಿಳಿ ಬಣ್ಣದ ಮರ್ಸಿಡಿಸ್ ಕಾರನ್ನು ಕಿತ್ತುಕೊಂಡು ಕಳುಹಿಸಿದ್ದಾರೆ. ಸದ್ಯ ಪೊಲೀಸರು ಹೋಟೆಲ್‍ನ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ. ಈ ಹಿಂದೆ ನಾಟಿ ಕೋಳಿ ಸಿನಿಮಾ ಸೆಟ್‍ಗೆ ನುಗ್ಗಿದ್ದ ಶಿವಪ್ರಕಾಶ್, ನನ್ನ ಹುಡುಗಿಗೆ ತುಂಡು ಬಟ್ಟೆ ಹಾಕಿ ಫೋಟೋ ಶೂಟ್ ನಡೆಸ್ತೀರಾ ಎಂದು ನಿರ್ಮಾಪಕ ಶ್ರೀನಿವಾಸ್ ರಾಜು ಮೇಲೂ ಹಲ್ಲೆ ನಡೆಸಿದ್ದ ಅನ್ನೋ ಆರೋಪವೂ ಕೇಳಿ ಬರುತ್ತಿದೆ.