ಬೆಂಗಳೂರು: ಹತ್ತೊಂಬತ್ತರ ಹುಮ್ಮಸ್ಸಿನ ಕಥೆಯ ಸುಳಿವಿನೊಂದಿಗೆ 19 ಏಜ್ ಈಸ್ ನಾನ್ಸೆನ್ಸ್ ಚಿತ್ರ ಪ್ರೇಕ್ಷಕರನ್ನು ಏಕಾಏಕಿ ಸೆಳೆದುಕೊಂಡಿತ್ತು. ಇಂತಹ ಯುವ ಆವೇಗದ ಕಥೆಗಳತ್ತ ಎಲ್ಲ ವರ್ಗಗಳ ಪ್ರೇಕ್ಷಕರೂ ಸಲೀಸಾಗಿ ಆಕರ್ಷಿತರಾಗುತ್ತಾರೆ. ಅದರಲ್ಲಿಯೂ ಇಂತಹ ಚಿತ್ರಗಳು ಹೊಸ ಬಗೆಯಲ್ಲಿ ತಯಾರಾಗಿರುವ ಕುರುಹು ಕಂಡರಂತೂ ಆ ಆಕರ್ಷಣೆಯ ತೀವ್ರತೆ ಇನ್ನೂ ಹೆಚ್ಚಾಗಿರುತ್ತದೆ. ಅಂತದ್ದೇ ಗುಣ ಲಕ್ಷಣಗಳೊಂದಿಗೆ ಡಿಸೆಂಬರ್ 6 ರಂದು ಈ ಸಿನಿಮಾ ಬಿಡುಗಡೆಗೊಳ್ಳಲು ತಯಾರಾಗಿದೆ. ಇನ್ನೇನು ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದುಕೊಂಡಿರೋ ಈ ಘಳಿಗೆಯಲ್ಲಿ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
Advertisement
ಸುರೇಶ್ ಎಂ ಗಿಣಿ ನಿರ್ದೇನದ ಈ ಚಿತ್ರವನ್ನು ಲೋಕೇಶ್ ನಿರ್ಮಾಣ ಮಾಡಿದ್ದಾರೆ. ಅವರ ಪುತ್ರ ಮನುಷ್ ನಾಯಕನಾಗಿ ನಟಿಸಿದ್ದಾರೆ. ಇದು ಹತ್ತೊಂಬತ್ತರ ಹರೆಯದ ವಯಸ್ಸಿನ ಸುತ್ತ ಘಟಿಸಿ ಕಥೆಯೆಂಬ ಬಗ್ಗೆ ಚಿತ್ರತಂಡ ಈ ಹಿಂದೆಯೇ ಹೇಳಿಕೊಂಡಿತ್ತು. ಆದರೆ ಈ ಟ್ರೇಲರ್‍ನಲ್ಲಿ ಆ ಕಥೆಗೆ ಮತ್ತಷ್ಟು ರೋಚಕ ಕೊಂಬೆ ಕೋವೆಗಳಿರೋದನ್ನು ಕೂಡ ಸಾರಿ ಹೇಳುವಂತೆ ಮೂಡಿ ಬಂದಿದೆ. ಇದರಲ್ಲಿ ಪ್ರಧಾನವಾಗಿ ಗಮನ ಸೆಳೆಯುವಂತಿರೋದು ಭರ್ಜರಿ ಆ್ಯಕ್ಷನ್ ಸನ್ನಿವೇಶಗಳು. ಅದೂ ಸೇರಿದಂತೆ ಎಲ್ಲ ಶೇಡಿನ ಪಾತ್ರಗಳಲ್ಲಿಯೂ ಮನುಷ್ ನ ನಟನೆಯ ಕಸುವು ಎದ್ದು ಕಾಣಿಸುವಂತಿದೆ.
Advertisement
Advertisement
Advertisement
ಇದರ ಜೊತೆ ಜೊತೆಗೆ ಸಮೃದ್ಧ ಕಥೆಯ ಲಕ್ಷಣಗಳೂ ಕಾಣಿಸಿವೆ. ಈ ಕಥೆಗೆ ತಕ್ಕುದಾಗಿಯೇ ಹತ್ತೊಂಬತ್ತರ ಹುಡುಗ ಮನುಷ್ ನಾಯಕನಾಗಿ ನಟಿಸಿದ್ದಾರೆ. ನಿರ್ಮಾಪಕ ಲೋಕೇಶ್ ತಮ್ಮ ಪುತ್ರ ಮನುಷ್ ಗೆ ನಟನೆ ಸೇರಿದಂತೆ ಎಲ್ಲ ರೀತಿಯಲ್ಲಿಯೂ ತರಬೇತಿ ಕೊಡಿಸಿಯೇ ನಾಯಕನನ್ನಾಗಿಸಿದ್ದಾರೆ. ಅದರ ಪ್ರತಿಫಲ ಯಾವ ರೀತಿಯಲ್ಲಿದೆ ಎಂಬುದು ಮನುಷ್ ನಟನೆಯಲ್ಲಿಯೇ ಗೋಚರಿಸುವಂತಿದೆ. ಇದೆಲ್ಲವನ್ನೂ ಒಳಗೊಂಡಿರೋ ಟ್ರೇಲರ್ ಹೆಚ್ಚಿನ ವೀಕ್ಷಣೆ ಮತ್ತು ಮೆಚ್ಚುಗೆಗಳನ್ನು ಪಡೆದುಕೊಳ್ಳುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡಲಾರಂಭಿಸಿದೆ. ಯುವ ಆವೇಗದ ಈ ಕಥೆ ಫ್ಯಾಮಿಲಿ, ಸೆಂಟಿಮೆಂಟ್, ಲವ್, ಆ್ಯಕ್ಷನ್ ಸೇರಿದಂತೆ ಎಲ್ಲ ಅಂಶಗಳನ್ನೂ ಹೊಂದಿದೆ ಅನ್ನೋದಕ್ಕೆ ಈ ಟ್ರೇಲರ್ ಸಾಕ್ಷಿಯಂತಿದೆ.