ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದ್ದ ಒಂಟಿ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರು ಮತ್ತೋರ್ವನಿಗಾಗಿ ಶೋಧ ನಡೆಸುತ್ತಿದ್ದಾರೆ.
Advertisement
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ಕಳೆದ ಜುಲೈ 15ರಂದು ಮನೆಯಲ್ಲಿದ್ದ ಅಂಚನಾ ತುಳಸಿಯಾನ (52) ಎಂಬ ಮಹಿಳೆಯ ಕತ್ತುಕೊಯ್ದು ಕೊಲೆ ಮಾಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ದೇವನಹಳ್ಳಿ ಪೊಲೀಸರು ಬಿಹಾರದ ಪಶುಪತಿ ಅಲಿಯಾಸ್ ಪಪಿಯಾ ಹಾಗೂ ಧೀರಜ್ ಕುಮಾರ್ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: 8ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‍ರೇಪ್- ಆಕೆಯ ಸಹೋದರನಿಗೆ ಮನಬಂದಂತೆ ಥಳಿಸಿದ ಆರೋಪಿಗಳು
Advertisement
Advertisement
ಎ-1 ಆರೋಪಿಯಾಗಿರುವ ಪಶುಪತಿ ಇದೇ ಅಂಚನಾ ತುಳಸಿಯಾನರ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದು ಕಳೆದ ಕೆಲ ದಿನಗಳ ಹಿಂದೆ ಕೆಲಸ ಬಿಟ್ಟಿದ್ದ. ಮಾಲೀಕರ ಮನೆಯಲ್ಲೇ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದ. ಇದಕ್ಕಾಗಿ ತನ್ನ ಮತ್ತಿಬ್ಬರು ಸ್ನೇಹಿತರ ಜೊತೆ ಸೇರಿ ಪ್ಲಾನ್ ಮಾಡಿದ ಪಶುಪತಿ ಜುಲೈ 15 ರಂದು ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಅಂಚನಾ ತುಳಸಿಯಾನ ಕತ್ತು ಕೊಯ್ದು ಕೊಲೆ ಮಾಡಿದ್ದ. ಈ ವೇಳೆ ಮನೆಯಲ್ಲಿದ್ದ 13 ಲಕ್ಷ ನಗದು, 1 ಲಕ್ಷ ಬೆಲೆಯ ಚಿನ್ನಾಭರಣ ಕದ್ದು ಮೂರು ಜನ ಆರೋಪಿಗಳು ಎಸ್ಕೇಪ್ ಆಗಿದ್ದರು. ಇದನ್ನೂ ಓದಿ: ಪ್ರಿಯಕರನೊಂದಿಗೆ ಬೆಟ್ಟಕ್ಕೆ ತೆರಳಿದ್ದ ಮಹಿಳೆ ಅನುಮಾನಸ್ಪದ ಸಾವು – ಅಪಘಾತವೆಂದು ಆಸ್ಪತ್ರೆಗೆ ಸೇರಿಸಿದ್ದ ಲವರ್
Advertisement
ಈ ವೇಳೆ ಯಾವುದೇ ಸುಳಿವು ಸಿಗದಂತೆ ಸಿಸಿಟಿವಿ ಡಿವಿಆರ್‌ನ್ನು ಸಹ ಕದ್ದೊಯ್ದಿದ್ದರು. ಕೊಲೆ ಮಾಡಿ ಬಿಹಾರಕ್ಕೆ ಎಸ್ಕೇಪ್ ಆಗಿದ್ದ ಮೂವರಲ್ಲಿ ಇಬ್ಬರನ್ನ ಸದ್ಯ ಪೊಲೀಸರು ಬಂಧಿಸಿದ್ದಾರೆ. ಕದ್ದ 13 ಲಕ್ಷ ಹಣದಲ್ಲಿ 11 ಲಕ್ಷ ಹಣವನ್ನ ವಶಪಡಿಸಿಕೊಂಡಿದ್ದು, ಮತ್ತೋರ್ವನಿಗಾಗಿ ದೇವನಹಳ್ಳಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.