ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಾ.ಮಂಜುನಾಥ್‌ ಆಸ್ತಿ ಎಷ್ಟು ಗೊತ್ತಾ?

Public TV
1 Min Read
CN Manjunath

ರಾಮನಗರ: ಬೆಂಗಳೂರು ಗ್ರಾಮಾಂತರ (Bengaluru Rural) ಮೈತ್ರಿ (ಬಿಜೆಪಿ-ಜೆಡಿಎಸ್)‌ ಅಭ್ಯರ್ಥಿಯಾಗಿ ಡಾ. ಸಿ.ಎನ್.ಮಂಜುನಾಥ್‌ (C.N.Manjunath) ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಇದೇ ವೇಳೆ ಆಸ್ತಿ ವಿವರ ಘೋಷಿಸಿಕೊಂಡಿದ್ದು, 98.36 ಕೋಟಿ ಆಸ್ತಿ ಒಡೆಯರಾಗಿದ್ದಾರೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ 2023-24 ರ ಹಣಕಾಸು ವರ್ಷದಲ್ಲಿ 1.57 ಕೋಟಿ ಆದಾಯ ಬಂದಿದೆ. ಅದರಲ್ಲಿ 42,847 ರೂ. ಕೃಷಿಯಿಂದ ಬಂದ ಆದಾಯ. ಡಾ.ಮಂಜುನಾಥ್‌ ಪತ್ನಿ ಅನುಸೂಯ 1,57,01,260 ಕೋಟಿ ರೂ. ಆದಾಯ ಹೊಂದಿದ್ದಾರೆ. ಇದನ್ನೂ ಓದಿ: 62.82 ಕೋಟಿ ಒಡೆಯ ಹೆಚ್‌ಡಿಕೆ- ಪತಿಗಿಂತ ಅನಿತಾ ಕುಮಾರಸ್ವಾಮಿಯೇ ಶ್ರೀಮಂತೆ!

Dr.CN Manjunath Files Nominations From Bengaluru Rural Constituency Lok Sabha Election

ಮಂಜುನಾಥ್‌ ಅವರ ಕೈಯಲ್ಲಿ 1,97,622 ರೂಪಾಯಿ ಇದೆ. 4ಕೋಟಿ ಮೌಲ್ಯದ ಒಟ್ಟು 6.79 ಕೆ.ಜಿ ಚಿನ್ನ ಹೊಂದಿದ್ದಾರೆ. 55 ಲಕ್ಷ ರೂ. ಮೌಲ್ಯದ ಎರಡು ಕಾರು ಹೊಂದಿದ್ದಾರೆ. ಒಟ್ಟು 6.98 ಕೋಟಿ ಚರಾಸ್ತಿ ಹಾಗೂ 36.65 ಕೋಟಿ ಸ್ಥಿರಾಸ್ತಿ ಇದೆ. 3.74 ಲಕ್ಷ ರೂ. ಸಾಲ ಮಾಡಿಕೊಂಡಿದ್ದಾರೆ.

ಹೆಂಡತಿ ಅನುಸೂಯ ಹೆಸರಲ್ಲಿ 17.36 ಕೋಟಿ ಚರಾಸ್ತಿ ಹಾಗೂ 35.30 ಕೋಟಿ ಸ್ಥಿರಾಸ್ತಿ ಇದೆ. ಅವರ ಪತ್ನಿ ಕೈಯಲ್ಲಿ 3,04,706 ರೂ. ಇದೆ. ಒಟ್ಟು 11.02 ಕೋಟಿ ರೂ. ಸಾಲ ಮಾಡಿದ್ದಾರೆ. 13 ಲಕ್ಷ ಬೆಲೆಬಾಳುವ ಒಂದು ಕಾರು ಹೊಂದಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಹೆಚ್‌.ಡಿ.ಕುಮಾರಸ್ವಾಮಿ ವಿರುದ್ಧ ಹೆಚ್‌.ಡಿ.ರೇವಣ್ಣ ಸ್ಪರ್ಧೆ!

ಮಂಜುನಾಥ್‌ ಅವರ ಅವಿಭಕ್ತ ಕುಟುಂಬದ ಹೆಸರಲ್ಲಿ 75 ಲಕ್ಷ ರೂ. ಚರಾಸ್ತಿ ಮತ್ತು 1.32 ಕೋಟಿ ಸ್ಥಿರಾಸ್ತಿ ಇದೆ. ಡಾ.ಮಂಜುನಾಥ್ ಹೆಸರಿನಲ್ಲಿ ಯಾವುದೇ ಕ್ರಿಮಿನಲ್‌ ಪ್ರಕರಣಗಳಿಲ್ಲ.

Share This Article