ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದಲ್ಲಿ ನೀರಿನಲ್ಲಿ ಪ್ಲೋರೈಡ್ ಸಮಸ್ಯೆ ಹೆಚ್ಚಾಗಿದ್ದು ಜನ ಗಾಬರಿಯಾಗಿದ್ದಾರೆ. ಅದ್ಯಾವ ಪರಿ ಪ್ಲೋರೈಡ್ ಹೆಚ್ಚಾಗಿದೆ ಅಂದ್ರೆ, ಕೊಳವೆ ಬಾವಿಯ ಕಂಬಿ, ಮೋಟರ್ ಪೈಪ್ ಗಳಿಗೆಲ್ಲ ಪ್ಲೋರೈಡ್ ಅಂಟಿಕೊಂಡಿದೆ.
ಆಳವಾದ ನೀರಿನಲ್ಲಿ ಪ್ಲೋರೈಡ್ ಸಮಸ್ಯೆ ಹೆಚ್ಚಾಗಿರುತ್ತದೆ. ಆದರೆ ತಿಪಟೂರಿನಲ್ಲಿ ಕೇವಲ 150 ಅಡಿ ಆಳದ ಕೊಳವೆಬಾವಿಯ ನೀರಿನಲ್ಲಿ ಪ್ಲೋರೈಡ್ ಸಮಸ್ಯೆ ಕಾಣಿಸಿಕೊಂಡಿದೆ. ಭೂಗರ್ಭ ವಿಜ್ಞಾನಿಗಳಿಂದ ಈ ಬಗ್ಗೆ ಅಧ್ಯಯನ ನಡೆಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ.
ಈ ನೀರನ್ನು ಕುಡಿದರೆ ಕಿಡ್ನಿ ಸ್ಟೋನ್ ಸೇರಿದಂತೆ ಕರುಳು ಸಮಸ್ಯೆ ಬರಲಿದೆ. ಅಲ್ಲದೆ ಕ್ಯಾಲ್ಸಿಯಂ ಸಮಸ್ಯೆಯೂ ಉಂಟಾಗಲಿದೆ. ಹೀಗಾಗಿ ಈ ರೀತಿಯ ಸಮಸ್ಯೆಗೆ ಕಾರಣ ಏನು ಅನ್ನೋದನ್ನು ಪತ್ತೆ ಹಚ್ಚಬೇಕು. ಇಲ್ಲವೆಂದಲ್ಲಿ ಈ ನೀರು ಕುಡಿದರೆ ಮಾರಣಾಂತಿಕ ಕಾಯಿಲೆ ಬರುವುದು ಖಚಿತ ಎಂದು ಭೂ ಗರ್ಭ ಶಾಸ್ತ್ರಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ.