ಬೆಂಗಳೂರು: ಅಪರಾಧ ಕೃತ್ಯಗಳಲ್ಲಿ ತೊಡಗಿರುವವರ ಮನ ಪರಿವರ್ತನೆಗೆ ಜೈಲು ಶಿಕ್ಷೆ ನೀಡಿದರೆ ಅಲ್ಲಿಯೂ ಗ್ಯಾಂಗ್ ಕಟ್ಟಿಕೊಂಡು ಬಡಿದಾಟ ನಡೆಸಿರುವ ಘಟನೆ ನಗರದ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ನಡೆದಿದೆ.
ನಗರದ ಕುಖ್ಯಾತ ರೌಡಿಗಳಾದ ಸೈಕಲ್ ರವಿ ಮತ್ತು ಆಟೋ ರಾಮು ಗ್ಯಾಂಗ್ ಗಳ ನಡುವೆ ಗಲಾಟೆ ನಡೆದಿದೆ. ಇಬ್ಬರ ಮೇಲೂ ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದೆ. ಕಾರಾಗೃಹದ ಬ್ಯಾರಕ್ ನಂ.9 ರಲ್ಲಿ ಘಟನೆ ನಡೆದಿದ್ದು, ಬಡಿದಾಟದಲ್ಲಿ ಕೆಲ ಕೈದಿಗಳು ಗಾಯಗೊಂಡಿದ್ದಾರೆ. ಘಟನೆ ಬಳಿಕ ಎಚ್ಚೆತ್ತ ಪೊಲೀಸ್ ಅಧಿಕಾರಿಗಳು ಎರಡು ಗ್ಯಾಂಗ್‍ಗಳನ್ನು ಪ್ರತ್ಯೇಕ ಬ್ಯಾರಕ್ ಗಳಿಗೆ ವರ್ಗಾಯಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Advertisement
Advertisement
ಪರಪ್ಪನ ಅಗ್ರಹಾರದಲ್ಲಿ ಜೈಲಿನಲ್ಲಿ ಅಕ್ರಮವಾಗಿ ಅಪರಾಧಿಗಳಿಗೆ ಗಾಂಜಾ, ಸಿಗರೇಟು, ಮದ್ಯ ಸಾಗಾಟ ಮಾಡಲಾಗುತ್ತದೆ. ಇದು ಕೂಡ ಜೈಲಿನಲ್ಲಿ ಕೈದಿಗಳ ನಡುವೆ ಗಲಾಟೆಗೆ ಕಾರಣವಾಗಿದೆ ಎಂದು ಸಾರ್ವಜನಿಕ ವಲಯದಿಂದ ಮಾತುಗಳು ಕೇಳಿ ಬಂದಿದೆ. ಹಣದ ಆಸೆಗಾಗಿ ಜೈಲಿನ ಅಧಿಕಾರಿಗಳೇ ಇಂತಹ ಕೃತ್ಯಕ್ಕೆ ಸಾಥ್ ನೀಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಜೈಲಿನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಹಾಗೂ ಅಕ್ರಮ ವಸ್ತುಗಳ ಸಾಗಾಟ ನಡೆಯದಂತೆ ಎಚ್ಚರಿಕೆ ವಹಿಸಬೇಕಿದೆ ಎಂಬ ಆಗ್ರಹ ಕೇಳಿಬಂದಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv