– ಹೊಸಕೋಟೆಯ ಕೆರೆಯ ಬಳಿ ಹಣ ಇಟ್ಟು ತಲೆಮರೆಸಿಕೊಂಡಿದ್ದ ದರೋಡೆಕೋರರು
ಬೆಂಗಳೂರು: ಎಟಿಎಂಗೆ ಹಣ ತುಂಬಿಸಲು ಹೋಗುತ್ತಿದ್ದ ವಾಹನ ಅಡ್ಡಗಟ್ಟಿ 7.11 ಕೋಟಿ ದರೋಡೆ ಮಾಡಿದ್ದ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಕೇಶ್ ಬಂಧಿತ ದರೋಡೆಕೋರ. ದರೋಡೆ ಪ್ರಕರಣದಲ್ಲಿ ಈವರೆಗೆ ಒಟ್ಟು 7 ಬಂದಿಯ ಬಂಧನವಾಗಿದೆ. ಬಂಧಿತ ರಾಕೇಶ್ ಆರೋಪಿ ರವಿಯ ಸಹೋದರ. ನಿನ್ನೆ ರಾತ್ರಿ ಸಿದ್ದಾಪುರ ಪೊಲೀಸ್ ಠಾಣೆಗೆ ಬಂದು ಆರೋಪಿ ತಾನಾಗಿಯೇ ಶರಣಾಗಿದ್ದಾನೆ. ಇದನ್ನೂ ಓದಿ: ಮಾಡಿದ್ದ ಸಾಲ ತೀರಿಸಲು 7.11 ಕೋಟಿ ದರೋಡೆ ಮಾಡಿದ್ದ ದರೋಡೆಕೋರರ ಗ್ಯಾಂಗ್

ಬೆಂಗಳೂರಲ್ಲೇ ಹಣ ಇಟ್ಟಿದ್ರು
ಹೊಸಕೋಟೆ ಕರೆಯ ಬಳಿ ಕೋಟಿ ಕೋಟಿ ಹಣವನ್ನಿಟ್ಟು ಆರೋಪಿಗಳು ಬೇರೆ ಬೇರೆ ಕಡೆ ತಲೆಮರೆಸಿಕೊಂಡಿದ್ದರು.
ದರೋಡೆಕೋರರ ತನಿಖೆ ವೇಳೆ ಹಲವು ಇಂಟ್ರೆಸ್ಟಿಂಗ್ ವಿಚಾರ ಬೆಳಕಿಗೆ ಬಂದಿವೆ. ಮೂರು ತಿಂಗಳಿಂದ ಪ್ಲಾನ್ ಮಾಡಿ ಬುಧವಾರ ದರೋಡೆ ಮಾಡಿದ್ದರು. ವಾರದಲ್ಲಿ ಪ್ರತಿ ಬುಧವಾರ ಬಹುಕೋಟಿ ಹಣ ಎಟಿಎಂಗೆ ಹಾಕಲು ತೆಗೆದುಕೊಂಡು ಹೋಗುತ್ತಾರೆ. ಹಾಗಾಗಿ, ದೊಡ್ಡಮಟ್ಟದ ಹಣ ಸಿಗಬೇಕಂದ್ರೆ ಬುಧವಾರ ದರೋಡೆ ಮಾಡಬೇಕೆಂದು ಪ್ಲಾನ್ ಮಾಡಿದ್ದರು. ಇದನ್ನೂ ಓದಿ: ಬೆಂಗಳೂರಲ್ಲಿ 7 ಕೋಟಿ ದರೋಡೆ ಕೇಸ್ – ಹೈದರಾಬಾದ್ ಲಾಡ್ಜ್‌ನಲ್ಲಿ ಮತ್ತೆ ಮೂವರು ಅರೆಸ್ಟ್
ಈ ವಿಚಾರ ಸಿಎಂಎಸ್ ಕಂಪನಿಯ ಉದ್ಯೋಗಿ ಕಸ್ಟೋಡಿಯನ್ ಗೋಪಿ, ದರೋಡೆಕೋರರಿಗೆ ತಿಳಿಸಿದ್ದ. ಬುಧವಾರ ದೊಡ್ಡ ಅಮೌಂಟಿನೊಂದಿಗೆ ಹೊರಟಿದ್ದ ವಾಹನದ ಬಗ್ಗೆ ಮಾಹಿತಿ ನೀಡಿದ್ದ. ಗೋಪಿಯ ಮಾತನ್ನು ಕಾರ್ಯರೂಪಕ್ಕೆ ತಂದಿದ್ದ ಸಿಎಂಎಸ್ ಕಂಪನಿ ಮಾಜಿ ನೌಕರ ಜೇವಿಯರ್ ಜೇವಿಯರ್, ಸೂಚನೆಯಂತೆ ವಾಹನ ಹಿಂಬಾಲಿಸಿ ದರೋಡೆ ಮಾಡಿದ್ದರು.
