ಬೆಂಗಳೂರು: ನಾಗಾವರದ ಮೆಟ್ರೋ ಪಿಲ್ಲರ್ (Metro Pillar) ದುರಂತದ ಬೆನ್ನಲ್ಲೇ ಮೆಟ್ರೋ (Namma Metro) ಸುರಂಗಮಾರ್ಗ ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ಆಳವಾಗಿ ರಸ್ತೆ ಕುಸಿದು ಇಬ್ಬರು ಸವಾರರು ಗಾಯಗೊಂಡಿದ್ದಾರೆ.
ಹೌದು. ಬ್ರಿಗೇಡ್ ರಸ್ತೆಯ ಬಳಿ ಟ್ರಿನಿಟಿ ಸರ್ಕಲ್ ನಿಂದ ಶಿವಾಜಿನಗರದ ವರೆಗೆ ಮೆಟ್ರೊ ಕಾಮಗಾರಿ ನಡೆಯುತ್ತಿದೆ. ಶಿವಾಜಿನಗರದಿಂದ 2ನೇ ಹಂತದಲ್ಲಿ ಮೆಟ್ರೋ ಸುರಂಗ ಮಾರ್ಗ ಕಾಮಗಾರಿ ನಡೆಯುತ್ತಿದ್ದು, ಮಧ್ಯಭಾಗದಲ್ಲೇ ರಸ್ತೆ ಆಳವಾಗಿ ಕುಸಿದಿದೆ. ಸದ್ಯ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ರಸ್ತೆ ಸಂಪೂರ್ಣ ಬಂದ್ ಮಾಡಿದ್ದಾರೆ. ಸಾರ್ವಜನಿಕರ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಿದ್ದಾರೆ. ಇದನ್ನೂ ಓದಿ: ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆ ಖಚಿತ: ಧ್ರುವನಾರಾಯಣ್
Advertisement
Advertisement
ಸದ್ಯ ರಸ್ತೆ ದುರಸ್ತಿಗೆ ಕ್ರಮ ಕೈಗೊಂಡಿರುವ ಬಿಎಂಆರ್‌ಸಿಎಲ್ (BMRCL), ರಿಚ್ಮಂಡ್ ಸರ್ಕಲ್ ಮೂಲಕ ಪರ್ಯಾಯ ಮಾರ್ಗ ಕಲ್ಪಿಸಿದೆ. ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಬಿಎಂಆರ್‌ಸಿಎಲ್ ಕ್ಲಿಯರೆನ್ಸ್ ಕೊಡುವವರೆಗೆ ನಾವು ಸಂಚಾರ ಮುಕ್ತ ಮಾಡಲ್ಲ ಎಂದು ಹೇಳಿದೆ.
Advertisement
ಜನಾಕ್ರೋಶ: ಬಿಎಂಆರ್‌ಸಿಎಲ್ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕೆಲಸ ಮಾಡುವ ಸಂಸ್ಥೆ ಎಂದು ಹೇಳ್ತಾರೆ, ಆದ್ರೆ ಜನರ ಜೀವಕ್ಕೆ ಕಂಟಕವಾಗ್ತಾ ಇದೆ. ಜೀವ ಹೋದ್ರೆ ಯಾರು ಹೊಣೆ ಅಂತಾ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇಬ್ಬರು ದ್ವಿಚಕ್ರ ವಾಹನ ಸವಾರರು ಸಾವಿನ ದವಡೆಯಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
Advertisement
ಅಲ್ಲದೇ ಸಾಕಷ್ಟು ಜನ ದ್ವಿಚಕ್ರವಾಹನ ಸವಾರರು ಇಲ್ಲಿ ಹಾದು ಹೋದಾಗ ಜಂಪ್ ಆಗ್ತಾ ಇತ್ತು. ಮಹಿಳೆಯೊಬ್ಬರ ಹೆಲ್ಮೆಟ್ ಕೂಡ ಕೆಳಗೆ ಬಿದ್ದಿತ್ತು. ಆಮೇಲೆ ನಿಧಾನವಾಗಿ ರಸ್ತೆ ಕುಸಿತವಾಗ್ತಿತ್ತು. ಇದೇ ಸ್ಥಳದಲ್ಲಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು, ಗಾಯಗೊಂಡರು ಎಂಬುದಾಗಿಯೂ ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಬಿಹಾರ ಶಿಕ್ಷಣ ಸಚಿವರ ನಾಲಿಗೆ ತಂದವರಿಗೆ 10 ಕೋಟಿ ಬಹುಮಾನ – ಅಯೋಧ್ಯೆ ಸ್ವಾಮೀಜಿ
ಎರಡು ದಿನಗಳ ಹಿಂದೆಯಷ್ಟೇ ನಾಗಾವರದ ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮಗು ಸಾವನ್ನಪ್ಪಿದ್ದರು. ಪ್ರಕರಣದಲ್ಲಿ ಮತ್ತೊಂದು ಮಗು ಹಾಗೂ ತಂದೆ ಲೋಹಿತ್ ಪಾರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿ ಬಿಎಂಆರ್‌ಸಿಎಲ್ ಆದೇಶ ಹೊರಡಿಸಿದೆ. ಅಲ್ಲದೇ ಮೂರು ದಿನಗಳಲ್ಲಿ ಗುತ್ತಿಗೆದಾರರಿಂದ ಸಂಪೂರ್ಣ ವರದಿಯನ್ನು ಕೇಳಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k